ನನ್ ವಿಷ್ಯ ನಿಮಗ್ಯಾಕೇ ಅಂತ...!!

Joined May 2019
949 Photos and videos
ನನ್ನ ಜಾತಿಯ ಬಗ್ಗೆ ನನಗೆ ಮೇಲರಿಮೆ ಇದೆ . ಏಕೆಂದರೆ ಅದು ಯಾರನ್ನೂ ಕೊಂದಿಲ್ಲ , ಸುಲಿದು ತಿಂದಿಲ್ಲ .!!! ~ ದೇವನೂರ ಮಹಾದೇವ .💙
24
56
578
ನಾನು𝕏ಲೋಹಿತ್ retweeted
🚨ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ @DrParameshwara ಅವರಿಗೆ ಒಲಿದ ಉಪ ಮುಖ್ಯಮಂತ್ರಿ ಸ್ಥಾನ🚨 *2ನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಜಿ.ಪರಮೇಶ್ವರ ಪ್ರಮಾಣ ವಚನ ಸ್ವೀಕಾರ* ಕರ್ನಾಟಕ ಕಂಡ ಸಜ್ಜನ ರಾಜಕಾರಣಿ, ವಿದ್ಯಾವಂತ ನೇತಾರರ ಸಾಲಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವವರಲ್ಲಿ ಮೂರು ಬಾರಿ ರಾಜ್ಯದ ಗೃಹ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಡಾ. ಜಿ.ಪರಮೇಶ್ವರ ಅವರು 2ನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಬಗ್ಗೆ ಹೆಚ್ಚು ತಿಳಿಯೋಣ. ಶಿಕ್ಷಣ ಭೀಷ್ಮ ಡಾ. ಎಚ್.ಎಂ.ಗಂಗಾಧರಯ್ಯ ಅವರ ಪುತ್ರ ಜಿ.ಪರಮೇಶ್ವರ ಅವರು ರಾಜಕೀಯ, ಶಿಕ್ಷಣ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿ ಜನಾನುರಾಗಿ ನಾಯಕರೆನಿಸಿದ್ದಾರೆ. ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬರುತ್ತಿರುವ ಜಿ.ಪರಮೇಶ್ವರ ಅವರು ಸಾರ್ವಜನಿಕ ಜೀವನದಲ್ಲಿ ಅಜಾತಶತ್ರುವೆಂದೇ ಗುರುತಿಸಲ್ಪಟ್ಟು ಅಭಿಮಾನಿಗಳಿಂದ ಸವ್ಯಸಾಚಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 1951ರ ಆಗಸ್ಟ್ 6ರಂದು ಡಾ. ಹೆಚ್.ಎಂ.ಗಂಗಾಧರಯ್ಯ ಮತ್ತು ಗಂಗಮಾಳಮ್ಮ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರು ಕೃಷಿ ವಿಜ್ಞಾನದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 1984ರಲ್ಲಿ ಆಸ್ಟ್ರೇಲಿಯಾದ ವೈಟ್ ಅಗ್ರಿಕಲ್ಚರ್ ರೀಸರ್ಚ್ ಇನ್ಸ್ಟಿಟ್ಯೂಟ್ ಯೂನಿವರ್ಸಿಟಿ ಆಫ್ ಅಡಿಲೆಡ್‌ನಿಂದ ಪಿ.ಎಚ್‌ಡಿ ಪದವಿಗಳಿಸಿದವರು. ರಾಜೀವ್ ಗಾಂಧಿ ಮಾರ್ಗದರ್ಶನ:- ಮಾಜಿ ಪ್ರಧಾನಿ ಭಾರತರತ್ನ ದಿವಂಗತ ರಾಜೀವ್ ಗಾಂಧಿ ಅವರ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶ ಮಾಡಿದರು. ದೂರದೃಷ್ಟಿಯ ಯುವಕರು ರಾಜಕೀಯಕ್ಕೆ ಬರಬೇಕು. ಉತ್ತಮ ಆಡಳಿತ ನೀಡಬೇಕೆಂದು ಭಾರತದ ಪ್ರಧಾನಿಯಾಗಿದ್ದ ಅವರು ನೀಡಿದ್ದ ರಾಜಕೀಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶ ಮಾಡಿದ ಪರಮೇಶ್ವರ ಅವರು, 1989ರಲ್ಲಿ ಮೊದಲ ಬಾರಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮೊದಲ ಬಾರಿ ಶಾಸಕರಾಗಿದ್ದ ಅವಧಿಯಲ್ಲೇ ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾದರು. 1994ರಲ್ಲಿ ಅಲ್ಪಮತದಲ್ಲಿ ಪರಾಭವಗೊಂಡರು. 1999ರಲ್ಲಿ ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಪುನಾರಾಯ್ಕೆಯಾದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಉನ್ನತ ಶಿಕ್ಷಣ, ವಾರ್ತಾ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ, 2008ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಉಪಮುಖ್ಯಮಂತ್ರಿಯಾಗಿ, 2023ರಿಂದ 2026ರವರೆಗೆ ಗೃಹ ಖಾತೆಯನ್ನು ನಿಭಾಯಿಸಿದ್ದಾರೆ. *ಅಕ್ಷರವೇ ಅಸ್ತ್ರ:-* 1958ರಲ್ಲಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡುವಿನಲ್ಲಿ ಭೂದಾನ ಚಳುವಳಿ ಆರಂಭವಾಗಿತ್ತು. ಇದೇ ವೇಳೆಗೆ ಸರಿಯಾಗಿ ಸರ್ವೋದಯದ ನೇತಾರರಾಗಿದ್ದ ವಿನೋಬಾಭಾವೆಯವರು ಆರಂಭಿಸಿದ ಚಳುವಳಿ ದೇಶದೆಲ್ಲೆಡೆ ಸಂಚರಿಸಿ ತುಮಕೂರಿಗೆ ಬಂದಾಗ ಸುಮಾರು 200 ಮಂದಿ ತಂಡ ಗೊಲ್ಲಹಳ್ಳಿಯ ಗಂಗಾಧರಯ್ಯನವರ ಮನೆಯಲ್ಲಿ ವಾಸ್ತವ್ಯ ಹೂಡಿತ್ತು. ಕಾಕಾತಾಳೀಯ ಎನ್ನುವಂತೆ ವಿನೋಬಾ ಅವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಸಂದೇಶವನ್ನು ಸ್ವೀಕರಿಸಿದ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯನವರು, ದುರ್ಬಲ ವರ್ಗದ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಚಿಂತಿಸತೊಡಗಿದರು. ಆ ಚಿಂತನೆಯ ಸಾಕಾರ ರೂಪಕವೇ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ. 1959ರಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಿಸಿದರು. ಗೊಲ್ಲಹಳ್ಳಿಯಲ್ಲಿ ಅದೇ ವರ್ಷ ಜೂನ್ ತಿಂಗಳಲ್ಲಿ ಡಾ. ಶಿವಕುಮಾರಸ್ವಾಮಿಗಳಿಂದ ಶ್ರೀ ಸಿದ್ಧಾರ್ಥ ಪ್ರೌಢಶಾಲೆಗೆ ಚಾಲನೆ ದೊರೆಯಿತು. ಮೂವತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಪ್ರೌಢ ಶಾಲೆ ರಾಜ್ಯಾದ್ಯಂತ ಕವಲುಗಳಾಗಿ ಟಿಸಿಲೊಡೆದು ರಾಜ್ಯದ ಮೂಲೆಮೂಲೆಗಳಲ್ಲಿ ಶಿಕ್ಷಣದ ಕಂಪು ಪಸರಿಸುತ್ತಿದೆ. ಇದೀಗ ಸ್ವತಂತ್ರ ವಿಶ್ವವಿದ್ಯಾನಿಲಯವಾಗುವ ಮಟ್ಟಕ್ಕೆ ಬೆಳೆದಿದೆ. *2 ಅವಧಿಗೆ ಕೆಪಿಸಿಸಿ ಅಧ್ಯಕ್ಷರು:-* ಡಾ. ಜಿ.ಪರಮೇಶ್ವರ ಅವರು, ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕೀರ್ತಿಯನ್ನು ಹೊಂದಿದ್ದಾರೆ. ರಾಜ್ಯದಲ್ಲೆಡೆ ಸುತ್ತಿ ಪಕ್ಷ ಸಂಘಟಿಸಿದರು. 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಿಕರ್ತರು. 2018ರಲ್ಲಿ ಉಪಮುಖ್ಯಮಂತ್ರಿಗಳಾಗುವ ಮೂಲಕ ಕರ್ನಾಟಕದ 8ನೇ ಡಿಸಿಎಂ ಆಗಿ ಕಾರ್ಯನಿರ್ವಹಣೆ ಮಾಡಿದರು. ಮೂರು ಬಾರಿ ಗೃಹ ಸಚಿವರಾದ ಹೆಗ್ಗಳಿಕೆಯು ಇವರದ್ದಾಗಿದ್ದು, ಪೊಲೀಸ್ ಇಲಾಖೆಯ ಸುಧಾರಣೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ. *ಕ್ರೀಡೆಯಲ್ಲೂ ಸಾಧನೆ:-* ಡಾ. ಜಿ.ಪರಮೇಶ್ವರ ಅವರು ಬಹಳ ಕ್ರಿಯಾಶೀಲರು. ವಿದ್ಯಾರ್ಥಿ ಜೀವನದಲ್ಲಿಯೇ ಎನ್‌ಸಿಸಿ ಸೇರ್ಪಡೆಯಾಗಿದ್ದರು. ಅಲ್ಲದೇ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 10.9 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದರು. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದರು. ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ (ಜಿಕೆವಿಕೆ) ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು. ಗೃಹ ಇಲಾಖೆ ದೇಶದಲ್ಲೇ ನಂಬರ್ 1:- ಇಂಡಿಯಾ ಜಸ್ಟೀಸ್ ರಿಪೋರ್ಟ್ (India Justice Report) ಭಾರತದಲ್ಲಿ ನ್ಯಾಯ ಒದಗಿಸುವ ವ್ಯವಸ್ಥೆ (ಪೊಲೀಸ್, ಜೈಲು, ನ್ಯಾಯಾಂಗ ಮತ್ತು ಕಾನೂನು ನೆರವು) ಹೇಗಿದೆ ಎಂದು ಮೌಲ್ಯಮಾಪನ ಮಾಡುವ ಒಂದು ಪ್ರಮುಖ ರಾಷ್ಟ್ರೀಯ ವರದಿಯಾಗಿದೆ. ಇದರ ಪ್ರಕಾರ ಪೊಲೀಸ್ ವ್ಯವಸ್ಥೆ, ಕಾರಾಗೃಹಗಳು (ಜೈಲು), ನ್ಯಾಯಾಂಗ, ಮತ್ತು ನ್ಯಾಯದಾನದಲ್ಲಿ ದೇಶದಲ್ಲೇ ಕರ್ನಾಟವು ಅಗ್ರಸ್ಥಾನದಲ್ಲಿದೆ. ಇದರ ಹೆಗ್ಗಳಿಕೆ 2023ರಿಂದ 2026ರ ಮೇ ತಿಂಗಳವರೆಗೆ ಗೃಹ ಸಚಿವರಾಗಿ ಇಲಾಖೆಯನ್ನು ಉತ್ತಮವಾಗಿ ಜವಾಬ್ದಾರಿಯನ್ನು ನಿಭಾಯಿಸಿದ ಡಾ. ಜಿ.ಪರಮೇಶ್ವರ ಅವರಿಗೆ ಸಲ್ಲುತ್ತದೆ. *ರಾಜಕೀಯದಲ್ಲಿ ಎಲ್ಲವೂ ದಾಖಲೆ:-* ಸತತ 2ನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಸುದೀರ್ಘವಾಗಿ ಪಕ್ಷ ಸಂಘಟನೆಯ ಜವಾಬ್ಧಾರಿಯನ್ನು ಹೊತ್ತು, 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಕರ್ತರು. 3 ಬಾರಿ ರಾಜ್ಯದ ಗೃಹ ಖಾತೆಯನ್ನು ಉತ್ತಮವಾಗಿ ನಿಭಾಯಿಸಿದ ಖ್ಯಾತಿ ಇವರಿಗೆ ಇದೆ. 2ನೇ ಸಲ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯೂ ಸಹ ಗೃಹ ಖಾತೆಯ ಜವಾಬ್ದಾರಿಯನ್ನು ಜಿ.ಪರಮೇಶ್ವರ ಅವರ ಹೆಗಲಿಗೆ ಹಾಕಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. *ಪರಮೇಶ್ವರ ಅವರ ರಾಜಕೀಯ ಹೆಜ್ಜೆ ಗುರುತು:-* √ 1993ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರು. √ 1999 ರಿಂದ 2004ರವರೆಗೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕೆಲಸ ಮಾಡಿದ್ದರು. √ 2010 ರಿಂದ 2018ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸುದೀರ್ಘವಾಗಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದರು. √ 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸಭಾನಾಯಕರಾಗಿ ಆಯ್ಕೆ. √ 2015ರಲ್ಲಿ ಮೊದಲ ಬಾರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಿದರು. √ 2018 ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ. ಗೃಹ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಜವಾಬ್ಧಾರಿ ನಿಭಾಯಿಸಿದ್ದರು. √2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದರು. ಗ್ಯಾರಂಟಿ ಯೋಜನೆಗಳು ದೇಶದೆಲ್ಲೆಡೆ ಮನೆ ಮಾತಾಗಿವೆ. √ 2023ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿ ಖಾತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
22
31
310
13,262
ನಾನು𝕏ಲೋಹಿತ್ retweeted
ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದಲ್ಲಿ ಕೊನೆಯುಸಿರು ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಉಳಿವಿಗಾಗಿ ಮತ್ತು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ.
136
771
4,146
80,127
ನಾನು𝕏ಲೋಹಿತ್ retweeted
Mar 20
Cooked again and again 😅
22
158
940
39,429
ನಾನು𝕏ಲೋಹಿತ್ retweeted
ನಮ್ಮ ಆಪದ್ಬಾಂಧವ, ನನ್ನ ಪ್ರೀತಿಯ ಅಣ್ಣ, ಆತ್ಮೀಯ ಗೆಳೆಯ, AB Sir ಅವರಿಗೆ ಹ್ಯಾಪಿ ಬರ್ತ್‌ಡೇ! 🎉❤️
317
2,415
19,617
241,120
ನಾನು𝕏ಲೋಹಿತ್ retweeted
Most viral video on Instagram 🔥 He brilliantly exposed the Propaganda 🔥 👏 This video has 10 million views on Instagram
45
2,125
8,276
152,877
ನಾನು𝕏ಲೋಹಿತ್ retweeted
ನೀವು ಹಳ್ಳಿಯಲ್ಲಿ ಬಡವರಾಗಿ ಹುಟ್ಟಿ ಬೆಳೆದಿದ್ದರೆ, ದಯವಿಟ್ಟು ಊರನ್ನು ಬಿಟ್ಟು ಬೇರೆ ಕಡೆ ಹೋಗಿ ಓದಿ, ದುಡಿದು ಸ್ವಲ್ಪ ದುಡ್ಡು ಮಾಡಿಕೊಳ್ಳಿ. ಹುಟ್ಟಿದ ಊರು ಅಂಥ ಅಲ್ಲೇ ಕೂರಬೇಡಿ. ಹಳ್ಳಿ ಬಡವರ ಮಕ್ಕಳನ್ನ ಅಗೆದು, ಹಿಂಡಿ ತುಪ್ಪಿ ಬಿಡುತ್ತೆ. ದುಡ್ಡಾದಮೇಲೆ ಬೇಕಾದರೆ ವಾಪಸ್ ಹೋಗಿ.
7
19
262
12,132
ನಾನು𝕏ಲೋಹಿತ್ retweeted
43 years ago, I took my first step into the Kannada film industry. From then to now, it’s incredible to see how Kannada cinema is booming and redefining Indian cinema globally.
359
2,044
16,429
574,858
ನಾನು𝕏ಲೋಹಿತ್ retweeted
ತಿಂದುಂಡು ಎರಡು ಬಗೆಯೋ ಬೆರಕೆಗಳ ಮುಂದೆ ಮೇಲೆಡೆಯಲ್ಲಿ ನಿಲ್ಲೋ ದಿನೇಶ್ 💛❤️

7
390
3,265
23,565
ನಾನು𝕏ಲೋಹಿತ್ retweeted
ನಿರುದ್ಯೋಗ ಸಂಘದವರ ಗಮನಕ್ಕೆ!! ನಿಮ್ಮದು ಏನೇ ಇದ್ರು ಹಾವಿನಪುರದ ಆ ಕಡೆನೇ ಇಟ್ಟಕೊಳ್ಳಿ, ಇದು ಬಸವನಾಡು.
14
53
269
8,514
ನಾನು𝕏ಲೋಹಿತ್ retweeted
ಬಿಜೆಪಿ ಎಂದರೆ ಭಾರತೀಯ ಜುಮ್ಲಾ ಪಾರ್ಟಿ ಎಂಬ ಸಂಗತಿಯು ಎಲ್ಲರಿಗೂ ತಿಳಿದಿರುವುದೇ. 120 ಕೋಟಿಯ ಟೆಂಡರ್ ಅನ್ನೇ ಕರೆಯದಿರುವಾಗ, ಸಾರ್ವಜನಿಕರಿಗೆ ತಪ್ಪು ಮಾಹಿತಿ ಒದಗಿಸುವ ಕೆಲಸ ಮಾಡುವ ಈ ಮನುವಾದಿಗಳು, ಕರ್ನಾಟಕದ ಜನರಿಂದ ತಿರಸ್ಕಾರ ಹೊಂದಿ ಬುದ್ಧಿ ಭ್ರಮಣೆಗೆ ಒಳಗಾಗಿದ್ದು, ದಿನಕ್ಕೊಂದು ಸುಳ್ಳು ಹೇಳಿಕೊಂಡು ಬದುಕುತ್ತಿದ್ದಾರೆ. ಬಿಜೆಪಿಗರೇ, ಬಾಬಾ ಸಾಹೇಬರ ಆಶಯದಂತೆ ಪರಿಶಿಷ್ಟ ಸಮುದಾಯದ 10 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ತರಬೇತಿ ನೀಡುವ ಕೆಲಸವನ್ನು ಮಾಡಿರುವ ಸಮಾಜ ಕಲ್ಯಾಣ ಇಲಾಖೆಯು ಹೆಮ್ಮೆ ಪಡುವ ಕೆಲಸ ಮಾಡಿದೆಯೇ ವಿನಃ ನಿಮ್ಮಂತೆ ದಲಿತರಿಗೆ RSS ಚಡ್ಡಿ ಹೊರಿಸುವ ಕೆಲಸ ಮಾಡಿಲ್ಲ ಎಂಬ ಸಂಗತಿ ನಿಮಗೆ ನೆನಪಿರಲಿ! @BJP4Karnataka @RAshokaBJP
ಸಮಾಜ ಕಲ್ಯಾಣ ಇಲಾಖೆಯಿಂದ ಬಡವರು, ಹಿಂದುಳಿದವರು, ದಲಿತರ ಕಲ್ಯಾಣವಾಗಿಲ್ಲ ಕೇವಲ ಸಿಎಂ @siddaramaiah ನವರ ಹಾಗೂ @CMahadevappa ನವರ ಕುಟುಂಬದ ಕಲ್ಯಾಣವಾಗಿದೆ, ಅದಕ್ಕೆ ಬಲವಾದ ಸಾಕ್ಷಿ ಸಮಾಜ ಕಲ್ಯಾಣ ಇಲಾಖೆಯ 120 ಕೋಟಿ ಟೆಂಡರ್ ನಲ್ಲಿ 30 ಕೋಟಿ ಅಕ್ರಮದ ಸಲುವಾಗಿ ಸಿಎಂ ಕಚೇರಿ ಹಾಗೂ ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರಿಗೆ ಲೋಕಾಯುಕ್ತ ನೋಟೀಸ್ ನೀಡಿದೆ.
34
26
136
10,660
ನಾನು𝕏ಲೋಹಿತ್ retweeted
ಸರಕಾರಿ ಜಾಗಗಳಲ್ಲಿ ಸಂಘ- ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ.
30
14
142
2,972
ನಾನು𝕏ಲೋಹಿತ್ retweeted
ನಾನು ಈ ಹೋರಾಟವನ್ನು 1935ರ 'ನಾಸಿಕ'ದ ಸಭೆಯೊಂದರಲ್ಲಿ ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರದ ಘೋಷಣೆಯೊಂದಿಗೆ ಪ್ರಾರಂಭಿಸಿ ಅಲ್ಲಿಂದ ಈ ತನಕ ಮುಂದುವರಿಸಿರುವೆ. ಒಂದು ಬೃಹತ್ತಾದ ಸಮಾವೇಶ 1935 ರಲ್ಲಿ 'ಯವೋಲ'ದಲ್ಲಿ ಜರುಗಿತು. ಅದರಲ್ಲಿ ನಾವೆಲ್ಲರೂ ಹಿಂದೂ ಧರ್ಮವನ್ನು ತ್ಯಜಿಸುವ ಸಂಕಲ್ಪದ ನಿರ್ಣಯವನ್ನು ಕೈಗೊಂಡೆವು ಸಮಾವೇಶದಲ್ಲಿ "ನಾನು ಹಿಂದೂವಾಗಿ ಹುಟ್ಟಿರುವೆ, ಏಕೆಂದರೆ ನನ್ನ ಹುಟ್ಟು ನನ್ನ ಕೈಯಲ್ಲಿರಲಿಲ್ಲ, ಆದರೆ ಹಿಂದೂವಾಗಿ ಮಾತ್ರ ಸಾಯಲಾರೆ” ಎಂದು ನಾನು ಅಂದೇ ಹೇಳಿದ್ದೆ. ಈಗ ನಾನು ಮತಾಂತರ ಆಗಿರುವುದು ನನಗೆ ಊಹಿಸಲಾಗದಷ್ಟು ಅಪರಿಮಿತವಾದ ಸುಖಾನುಭವ ಮತ್ತು ತೃಪ್ತಿಯನ್ನು ನೀಡಿದೆ. ಈಗ ನನಗೆ ನರಕದಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಪಡೆದಷ್ಟು ಆಹ್ಲಾದ ಉಂಟಾಗುತ್ತಿದೆ. - ಬೋಧಿಸತ್ವ ಡಾ. ಬಿ. ಆರ್. ಅಂಬೇಡ್ಕರ್.
66
19
185
8,633
ನಾನು𝕏ಲೋಹಿತ್ retweeted
ಸರಕಾರಿ ಜಾಗಗಳಲ್ಲಿ ಸಂಘ- ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ !
32
28
191
4,863
ನಾನು𝕏ಲೋಹಿತ್ retweeted
ಸರ್ಕಾರಿ ಶಾಲಾ - ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಹಾಗೂ ಇತರೆ ಸ್ಥಳಗಳನ್ನು ಯಾವುದೇ ಖಾಸಗಿ ಸಂಘ - ಸಂಸ್ಥೆ, ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಬಳಸುವ ಮುನ್ನ ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. #CabinetDecision
129
142
801
31,328
ನಾನು𝕏ಲೋಹಿತ್ retweeted
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ. ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ. ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಾಕಾರಾತ್ಮ ಪರಿಣಾಮಗಳನ್ನು ಉಂಟುಮಾಡಲು ಯತ್ನಿಸುವ ಆರ್ಎಸ್ಎಸ್ ಪ್ರಯತ್ನವನ್ನು ತಡೆಯುವ, ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲಾ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್ಎಸ್ಎಸ್ ನ ಚಟವಟಿಕೆಗಳನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಿಲ್ಲಿಸಿದ್ದೇನೆ. #RSS100
439
246
924
258,863
ನಾನು𝕏ಲೋಹಿತ್ retweeted
ಆರ್.ಎಸ್.ಎಸ್ ಸ್ಥಾಪನೆಗೊಂಡು ನೂರು ವರ್ಷಗಳು ಪೂರೈಸಿದ ಹೊತ್ತಿನಲ್ಲಿ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರ ಎಲ್ಲರೂ ಓದಲೇಬೇಕಾದ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. #RSS100Years @prajavani
138
193
852
39,573
ನಾನು𝕏ಲೋಹಿತ್ retweeted
ಸಮಾಜದ ಪ್ರಗತಿಯ ವಿರೋಧಿ ಧೋರಣೆ ಹೊಂದಿರುವ ಆರ್.ಎಸ್.ಎಸ್ ನೂರು ವರ್ಷಗಳಲ್ಲಿ ತನ್ನ ಜಡತ್ವದ ನಿಲುವುಗಳಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರಿರುವ ಗಂಭೀರ ಪರಿಣಾಮಗಳ ಬಗ್ಗೆ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರು ಲೇಖನ ಬರೆದಿದ್ದಾರೆ. ಆರ್.ಎಸ್.ಎಸ್ ಸಮಾಜದಲ್ಲಿ ಚಾತುವರ್ಣ ಪದ್ಧತಿಯ ಅನುಷ್ಟಾನಕ್ಕಾಗಿ ನಡೆಸುತ್ತಿರುವ ಹುನ್ನಾರ, ಮನುಸ್ಮೃತಿಯ ಜಾರಿ, ಸಾಮಾಜಿಕ ನ್ಯಾಯದ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬರು ಓದಲೇಬೇಕಾದ ಲೇಖನ ಇದು. ಲೇಖನದ ಕೊನೆಯಲ್ಲಿ ದೇವನೂರು ಮಹಾದೇವ ಎತ್ತಿರುವ ಕೇವಲ ಎರಡು ಪ್ರಶ್ನಗಳಿಗೆ ಉತ್ತರಿಸುವ ಧೈರ್ಯ ಆರ್‌ಎಸ್ಎಸ್ ಸಂಘಟನೆಗೆ ಇದೆಯೇ? ಇದೇ ಪ್ರಶ್ನೆಗಳನ್ನು ಜನ ಸಾಮಾನ್ಯರೂ ಕೇಳುವಂತಾಗಬೇಕು.
48
47
210
8,189
ನಾನು𝕏ಲೋಹಿತ್ retweeted
ಗಾಂಧಿ ಜಯಂತಿಯಂದು ಮಾಂಸ ತಿನ್ನಬಹುದೇ ಎಂದು ಯಾರೋ ಕೇಳಿದರು ನಾನೆಂದೆ ಗಾಂಧಿಯನ್ನೇ ಕೊಂದು ತಿಂದಿದ್ದೇವೆ ಮಾಂಸದಲ್ಲೇನಿದೆ ಎಂದು ~ ಸಿ.ಪಿ.ಕೆ ಸಾಹಿತಿಗಳು #MahatmaGandhi
1
13
42
1,038
ನಾನು𝕏ಲೋಹಿತ್ retweeted
ಮಹಾತ್ಮಾ ಗಾಂಧಿಯ ಹತ್ಯೆಯ ಪಿತೂರಿ ಹಾಗೂ ಹತ್ಯೆಯ ಸಂಭ್ರಮದಿಂದ ಹಿಡಿದು ಭಾರತದ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಹಾಗೂ ಸೌಹಾರ್ದತಯ ಪರಂಪರೆಗೆ ಸಂಘ ಪರಿವಾರ ಮಾಡಿರುವ ಪ್ರಮಾದಗಳನ್ನು ಮರೆ ಮಾಚಿ ಪ್ರಧಾನಿ @narendramodi ಸಂಘದ ಮಾಧ್ಯಮ ವಕ್ತಾರಿಕೆ ಮಾಡುವುದು ಲಜ್ಜೆಗೇಡಿತನದ ಪರಮಾವಧಿ. ಮನ್ ಕೀ ಬಾತ್ ನಲ್ಲಿ ಆರ್.ಎಸ್.ಎಸ್ ಸಂಘಟನೆಯ ನೂರು ವರ್ಷದ ಕಾರ್ಯಕ್ರಮದ ವಕ್ತಾರಿಕೆ ಮಾಡುವ ಬದಲು ಪ್ರಧಾನಿ ನರೇಂದ್ರ ಮೋದಿ ಸಂಘದ ಅಧಿಕೃತ ಪತ್ರಿಕೆ ಆರ್ಗನೈಸರ್ ಗೆ ಲೇಖನ ಬರೆದು ಬಿಡಲಿ. ಬರೆಯುವ ಮುನ್ನ ಪತ್ರಿಕೆಯಲ್ಲಿ ಈ ಹಿಂದೆ ದೇಶಕ್ಕೆ ಗಂಡಾಂತರ ತಂದಿರುವ ಸಂಘದ ಅಪಾಯಕಾರಿ ನಿಲುವುಗಳ ಬಗ್ಗೆಯೂ ಮನ್ ಕೀ ಬಾತ್ ಅಲ್ಲೇ ಮಾತಾಡಲಿ. ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸದೇ, ಬ್ರಿಟಿಷರ ಗುಲಾಮಗಿರಿಯ ಸಹಾಯಧನ ಪಡೆದವರು ದೇಶದ ಸೇವೆ ಮಾಡಿದ್ದೇವೆ ಎಂದು ಹೇಳುವುದು ಸ್ವತಂತ್ರ ಹೋರಾಟಗಾರರನ್ನೇ ಅವಮಾನಿಸಿದಂತೆ. ದೇಶದ ಶಾಂತಿ, ಸುವ್ಯವಸ್ಥೆ  ಹಾಗೂ ಭದ್ರತೆಗೆ ಸಂಘ ಮಾಡಿರುವ ಗಂಡಾಂತರಗಳ ಇತಿಹಾಸವೇ ಇದೆ. ಗಾಂಧಿಯ ಹತ್ಯೆಯ ನಂತರ ಸರ್ಧಾರ್ ಪಟೇಲ್ ಅವರು ಸಂಘವನ್ನೇ ಬ್ಯಾನ್ ಮಾಡುವಾಗ ಹೇಳಿದ ಮಾತುಗಳನ್ನಾದರೂ ಮನ್ ಕೀ ಬಾತ್ ಅಲ್ಲಿ ಮಾತಾಡುವ ಎದೆಗಾರಿಕೆ ಇದೆಯಾ? ದೇಶದ ಸೌಹಾರ್ದತೆಯ ಸೌಂದರ್ಯವನ್ನು ಹಾಳು ಮಾಡಿ, ಪ್ರಕೃತಿ ವಿಕೋಪದ ಸೇವೆಯನ್ನೇ ಪ್ರಧಾನಿಗಳು ಪ್ರದರ್ಶನ ಮಾಡುವುದು ಹಾಸ್ಯಾಸ್ಪದ. ಸ್ವಯಂ ಘೋಷಿತ ನಿಸ್ವಾರ್ಥ ಸೇವೆಯ ಹೆಸರಿನಲ್ಲಿ ದೇಶಕ್ಕೆ ಅಪಾಯವಾಗಿರುವ ಸಂಘಟನೆಯನ್ನು ಹೊಗಳಲು ಪ್ರಧಾನಿ ಸ್ಥಾನವನ್ನು ಬಳಸಿಕೊಂಡಿರುವುದು ಅಕ್ಷಮ್ಯ ಮಾತ್ರವಲ್ಲ ಅಪರಾಧ ಕೂಡ.
1
10
29
2,167