Filter
Exclude
Time range
-
Near
ಪರಿಶಿಷ್ಟ ವರ್ಗಗಳು ಮತ್ತು ಇತರ ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಮೀಸಲಾಗಿರುವ SCSP-TSP ಯೋಜನೆಯ ಅನುದಾನವನ್ನು ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಹಾಗೂ 'ಗ್ಯಾರಂಟಿ' ಯೋಜನೆಗಳ ಹೆಸರಿನಲ್ಲಿ ಬೇರೆ ಉದ್ದೇಶಗಳಿಗೆ ಬಳಸಿರುವುದು ಪರಿಶಿಷ್ಟ ವರ್ಗಗಳ ಹಕ್ಕುಗಳಿಗೆ ಮಾಡಿರುವ ಅಕ್ಷಮ್ಯ ಅನ್ಯಾಯವಾಗಿದೆ. ರಾಜ್ಯ ಸರ್ಕಾರದ ಬಜೆಟ್ ದಾಖಲೆಗಳ ಪ್ರಕಾರ: ▪️ 2023-24ನೇ ಸಾಲು – ₹11,144 ಕೋಟಿ ▪️ 2024-25ನೇ ಸಾಲು – ₹14,282.68 ಕೋಟಿ ▪️ 2025-26ನೇ ಸಾಲು – ₹13,433.84 ಕೋಟಿ ▪️ 2026-27ನೇ ಸಾಲು – ₹14,198.93 ಕೋಟಿ ಒಟ್ಟಾರೆ ₹53,059.45 ಕೋಟಿಗಳಷ್ಟು ಬೃಹತ್ ಮೊತ್ತ ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ವಿನಿಯೋಗವಾಗಬೇಕಾಗಿತ್ತು. ಆದರೆ ಈ ಅನುದಾನವನ್ನು ಮೂಲ ಉದ್ದೇಶದಿಂದ ದಾರಿ ತಪ್ಪಿಸಿ, ರಾಜಕೀಯ ಲಾಭಕ್ಕಾಗಿ ಬಳಸಿರುವುದು ಸಂವಿಧಾನದ ಆಶಯಗಳಿಗೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ಘೋರ ದ್ರೋಹವಾಗಿದೆ ಎಂದರೆ ತಪ್ಪಾಗಲಾರದು. ಈ ಹಣವು ಪರಿಶಿಷ್ಟ ವರ್ಗಗಳ ಯುವಜನರ ಶಿಕ್ಷಣ, ಉನ್ನತ ವ್ಯಾಸಂಗ, ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಬಳಸಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಈ ಸಮುದಾಯಗಳ ಭವಿಷ್ಯವನ್ನು ಒತ್ತೆಯಿಟ್ಟು, ರಾಜಕೀಯ ಆಮಿಷಗಳನ್ನು ಪೂರೈಸುವ ಸಾಧನವಾಗಿ ಈ ಅನುದಾನವನ್ನು ಬಳಸಿರುವುದು ಅತ್ಯಂತ ಖಂಡನೀಯವಾದ ಸಂಗತಿಯಾಗಿದೆ. ಈ ಗಂಭೀರ ಅಕ್ರಮ ಮತ್ತು ಅನ್ಯಾಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿರಲಿದೆ. ಈ ಹಿನ್ನೆಲೆಯಲ್ಲಿ, ನಾನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾನ್ಯ ಸಚಿವರಿಗೆ ಹಾಗೂ ಸಂಸತ್ತಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಸನ್ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದೇನೆ. ಜೊತೆಗೆ, SCSP-TSP ಅನುದಾನದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ, ಇಲ್ಲಿಯವರೆಗೆ ಬೇರೆ ಉದ್ದೇಶಗಳಿಗೆ ಬಳಸಲಾದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿ, ಅದನ್ನು ಪುನಃ SCSP-TSP ಯೋಜನೆಗೆ ವರ್ಗಾಯಿಸುವಂತೆ ಬಲವಾಗಿ ಆಗ್ರಹಿಸಿದ್ದೇನೆ. ಪರಿಶಿಷ್ಟ ವರ್ಗಗಳ ನ್ಯಾಯಯುತ ಹಕ್ಕುಗಳನ್ನು ಕಸಿದುಕೊಂಡು, ಅವರ ಪ್ರಗತಿಗೆ ಅಡ್ಡಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಖಂಡಿಸಬೇಕು. ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಹಂಚಿಕೆ ಮಾಡಿ, ಬಳಿಕ ಅದನ್ನು ಬೇರೆ ಉದ್ದೇಶಗಳಿಗೆ ತಿರುಗಿಸುವವರನ್ನು ಜನತೆ ಪ್ರಶ್ನಿಸುವ ಸಮಯ ಬಂದಿದೆ. ನನ್ನ ಈ ಹೋರಾಟವು ಕೇವಲ ಅನುದಾನದ ವಿಚಾರವಲ್ಲ; ಇದು ಸಂವಿಧಾನಬದ್ಧ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ದಲಿತ ಸಮುದಾಯದ ಭವಿಷ್ಯವನ್ನು ರಕ್ಷಿಸುವ ಹೋರಾಟವಾಗಿದೆ. ಪರಿಶಿಷ್ಟ ವರ್ಗಗಳಿಗೆ ನ್ಯಾಯ ದೊರೆಯುವವರೆಗೆ ಮತ್ತು ಸಂವಿಧಾನದ ಆಶಯಗಳಿಗೆ ಗೌರವ ಸಿಗುವವರೆಗೆ ನನ್ನ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. #scsptsp #SaveSCSPTSPFunds #DalitRightsMatter #SocialJusticeFirst #StopSCSPDiversion #JusticeForScheduledCastes #CongressAgainstDalits
1
89
Karnataka leads with 25% SC/ST reservation in contracts & promotions – first state in India! 🚨 Siddaramaiah government has implemented reservation in government contracts and promotions for Scheduled Castes and Scheduled Tribes. This builds on existing KTPP provisions and promotion policies. Bombay HC (July 2025) clearly upheld SC/ST quota in PSU tenders as constitutional affirmative action. Massive ₹44,632 crore under SCSP/TSP in 2026-27 budget shows commitment. It will help fill backlogs, boost entrepreneurship and deliver true equality as envisioned by Dr. Ambedkar and Buddha. Manuvad's old walls are shaking! Stand for justice. #SocialJusticeFirst #karnatakabudget2026
Our government is promoting rational thinking and equality through laws like the Anti-Superstition Act. To address deep-rooted caste inequalities, we introduced the SCP/TSP schemes. We have provided reservation in contracts and promotions for Scheduled Castes and Scheduled Tribes, making Karnataka the first state to do so. We stand for social justice and support the most marginalised to lead self-reliant lives. This Budget reflects the compassion of Buddha and the vision of Dr. B.R. Ambedkar. #KarnatakaBudget #KarnatakaEmpowermentBudget #GuaranteeSarkara
12
46
164
3,861