"ಐಕ್ಯತೆ ಮತ್ತು ರಾಷ್ಟ್ರ ಪ್ರೇಮ ನಮ್ಮ ಆದ್ಯ ಕರ್ತವ್ಯ”
ಬೆಂಗಳೂರು ದಕ್ಷಿಣ ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನ – ಸರ್ದಾರ್
@150 ಏಕತಾ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಸಹ ಒಬ್ಬರು, ಸ್ವತಂತ್ರ ನಂತರದಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. “ಉಕ್ಕಿನ ಮನುಷ್ಯ” ಎಂದೇ ಕರೆಯಲ್ಪಡುವ ಪಟೇಲರ ಸೇವೆ ಸ್ಮರಣೀಯವಾದದ್ದು. ಪಟೇಲರ ದೂರದೃಷ್ಟಿ, ಧೃಡ ನಾಯಕತ್ವ, ನಿಸ್ವಾರ್ಥ ಮನೋಭಾವ ನಮ್ಮೆಲ್ಲರಿಗೂ ಸದಾ ಪ್ರೇರಣೀಯವಾಗಿದೆ.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿಗಳಾದ ಶ್ರೀ ಚಂದ್ರಯ್ಯ ರವರು, ಜಿಲ್ಲಾಧಿಕಾರಿಗಳಾದ ಶ್ರೀಮತಿ ಶ್ರೀವಾಣಿ ರವರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶ್ರೀ ಅನ್ಮೋಲ್ ಜೈನ್ ರವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ್ ಸ್ವಾಮಿ ರವರು, ಜೆಡಿಎಸ್ ಮುಖಂಡರಾದ ಶ್ರೀ ಶಿವಲಿಂಗಯ್ಯ ರವರು, ಬಿಜೆಪಿ ಮುಖಂಡರಾದ ಶ್ರೀ ಗೌತಮ್ ಗೌಡ ರವರು ಸೇರಿದಂತೆ ಹಲವಾರು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
#RashtriyaEktaDiwas #SardarPatel150 #Unitywalk #DrCNManjunath #BengaluruRural #SardarVallabhbhaiPatel #NationalIntegration #EktaPadyatra