ದಿನಾಂಕ 09/07/2024 ರಂದು ಮಾನ್ಯ ಶ್ರೀ ಅಲೋಕ್ ಕುಮಾರ್, ಐಪಿಎಸ್ ಎಡಿಜಿಪಿ,ಸಂಚಾರ & ರಸ್ತೆ ಸುರಕ್ಷತೆ ರವರು ಮೈಸೂರು ಜಿಲ್ಲೆಯಲ್ಲಿ ನೂತನವಾಗಿ ಅಳವಡಿಸಿರುವ "Intelligent traffic management system"(ITMS) ತಂತ್ರಜ್ಞಾನದ ಪರಿವೀಕ್ಷಣೆ ನಡೆಸಿದರು.
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ "ಹೊಸ ಕ್ರಿಮಿನಲ್ ಕಾನೂನುಗಳ" ಅನುಷ್ಠಾನದ ವಿಷಯದ ತರಬೇತಿಯನ್ನು ಜಿಲ್ಲೆಯ ಎಲ್ಲಾ ಠಾಣೆಯ ಠಾಣಾಧಿಕಾರಿಗಳು, ತನಿಖಾ ಸಹಾಯಕರು ಮತ್ತು ಸಿಬ್ಬಂದಿಗಳಿಗೆ ನೀಡಲಾಯಿತು.@Rangepol_SR@AddlSPmysuru@SPmysuru
ಲೋಕಸಭಾ ಚುನಾವಣೆ ಸಂಬಂಧ ಈ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು. @Rangepol_SR#LokSabhaElections2024
ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.@Rangepol_SR@AddlSPmysuru#LokSabhaElections2024
ಇಂದು ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು. ಹುಣಸೂರು ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು & ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.@Rangepol_SR
ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ, ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಸಿ-ವಿಜಿಲ್(cVIGIL) ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗದ ಜೊತೆ ಸಹಕಾರ ನೀಡಬಹುದಾಗಿದೆ.
@Rangepol_SR@ECISVEEP
ಇಂದು ನಗರ ಸಶಸ್ತ್ರ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಿವರಾಜು.ನಿವೃತ್ತ ಕಮಾಂಡೆಂಟ್ ರವರು ಗೌರವ ವಂದನೆ ಸ್ವೀಕರಿಸಿ ಪೊಲೀಸ್ ಧ್ವಜವನ್ನು ಬಿಡುಗಡೆ ಮಾಡಿದರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.@Rangepol_SR
ಮುಂಬರುವ ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.@Rangepol_SR@AddlSPmysuru.
ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು.ಮೈಸೂರು ಗ್ರಾಮಾಂತರ ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು& ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.@Rangepol_SR.
To all my young friends who are appearing for various exams in the coming days.
Face the exams confidently. Perform well. Don't take undue stress.
All the very best!!
#KSP_ಸುವರ್ಣಸಂಭ್ರಮ#GoldenJubileeOf_KSP#Exams
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಆಚರಣೆ ಹಾಗೂ ಮಾದಕ ವ್ಯಸನ ಮುಕ್ತ ವಾತಾವರಣ ನಿರ್ಮಾಣಕ್ಕಾಗಿ ಮೈಸೂರು ಜಿಲ್ಲಾ ಪೊಲೀಸ್ ವತಿ ಯಿಂದ ಮ್ಯಾರಥಾನ್ ಓಟ.@DgpKarnataka@Rangepol_SR@AddlSPmysuru
'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024' ರಂದು ಮಾನಿನಿಯರನ್ನು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಉತ್ತೇಜಿಸುವ ಮೂಲಕ ಪ್ರಗತಿಗೆ ವೇಗ ನೀಡೋಣ ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯರ ಸಾಧನೆಗಳನ್ನು ಗೌರವಿಸೋಣ. ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
#InternationalWomensDay2024#KSP_ಸುವರ್ಣಸಂಭ್ರಮ
ಶಿವರಾತ್ರಿಯ ಅಂಗವಾಗಿ ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬಂದು ಜಾಗರಣೆಯನ್ನು ನೆರವೇರಿಸುವ ಸಂಬಂಧವಾಗಿ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ರವರು ಬಂದೂಬಸ್ತ್ ವ್ಯವಸ್ಥೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. @Rangepol_SR
ಸರ್ವರಿಗೂ ಸ್ವಾಗತ,
ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ @KarnatakaCops ನ “50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ & ನೋಂದಣಿಗೆ click2race.com ಗೆ ಭೇಟಿ ನೀಡಿ
#KSP_ಸುವರ್ಣಸಂಭ್ರಮ
ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ನಡೆಸಿ . ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ಮತ್ತು ಪಬ್ಲಿಕ್
ಪ್ರಾಸಿಕ್ಯೂಟರ್ ಶ್ರೀಮತಿ. ಲೋಲಾಕ್ಷಿ ರವರು ಚುನಾವಣೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಕಾನೂನು ಅರಿವು ತರಬೇತಿ ನೀಡಿದರು.
@Rangepol_SR
ಸುತ್ತೂರು ಜಾತ್ರಾ ಮಹೋತ್ಸವ -2024 ರ ಅಂಗವಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗಳಿಗೆ ಅಪರ ಪೊಲೀಸ್ ಅಧೀಕ್ಷಕರಾದ ಡಾ. ನಂದಿನಿ ಬಿ ಎನ್ ರವರು ಸೂಕ್ತ ಸೂಚನೆಗಳನ್ನು ನೀಡಿದರು, ಕರ್ತವ್ಯ ಸಮಯದಲ್ಲಿ ಜವಾಬ್ದಾರಿಯಾಗಿ ವರ್ತಿಸುವಂತೆ ತಿಳಿಸಿದರು..@DgpKarnataka@Rangepol_SR@KarnatakaCops@SPmysuru
ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣಾ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆ ನೀಡಿದರು. @Rangepol_SR@KarnatakaCops@SPmysuru@AddlSPmysuru@PiHunsuru