Filter
Exclude
Time range
-
Near
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸಲು ಹಲವಾರು ಕ್ರಮ ತೆಗೆದುಕೊಂಡಿದೆ. 'ಪಾಠ ಆಧಾರಿತ ಮೌಲ್ಯಾಂಕನ' (LBA) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಜತೆಗೆ ಸಂಕಲನಾತ್ಮಕ ಮೌಲ್ಯಾಂಕನ (Summative Assessment) ಕಾರ್ಯ ನಡೆಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯ ಕಲಿಕಾ ಅಂತರವನ್ನು ಗುರುತಿಸಿ, ʻಸೇತುಬಂಧʼ, ಪರಿಹಾರ ಬೋಧನೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳ ಕಲಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಕಲಿಕಾ ಫಲಾಧಾರಿತ ಪ್ರಶ್ನೆಕೋಠಿಯನ್ನೂ ಒದಗಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಒದಗಿಸಿದ ಪರಿಣಾಮವಾಗಿಯೇ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಚಾರಿತ್ರಿಕ ದಾಖಲೆ ಬರೆಯಲಾಗಿದೆ. ಇದು ನಮ್ಮ ಸರ್ಕಾರದ ಹೆಮ್ಮೆಯ ಸಾಧನೆ. #MadhuBangarappa #GovtSchools  #3YearsOfNavaKarnataka #GuaranteeSarakara #EducationMinister #Governmentschollsofkarnataka #Shalashikshana #QualityEducation #LessonBasedAssessment
3
1
2
217
ಶಿಕ್ಷಣವು ಆಧುನಿಕತೆಗೆ ತೆರೆದುಕೊಳ್ಳಬೇಕು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಒಂಬತ್ತನೇ ಉದ್ದೇಶವು ಒಂದು ಆಧುನಿಕ ಮೌಲ್ಯಮಾಪನ ಚೌಕಟ್ಟನ್ನು ಸಿದ್ಧಪಡಿಸುವುದಾಗಿದೆ. ಇಲ್ಲಿ ಕಲಿಕೆ ಮತ್ತು ಮೌಲ್ಯಮಾಪನಗಳು ಬೇರೆ ಬೇರೆಯಲ್ಲ; ಅವು ಜೊತೆಜೊತೆಗೇ ಸಾಗುವ ಪ್ರಕ್ರಿಯೆಗಳು. ಈ ನೂತನ ವ್ಯವಸ್ಥೆಯು ವಿದ್ಯಾರ್ಥಿಗಳ ನೈಜ ಸಾಮರ್ಥ್ಯವನ್ನು ಗುರುತಿಸಲು ಮತ್ತು ಅವರ ಶೈಕ್ಷಣಿಕ ಪಯಣವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಸಹಕಾರಿಯಾಗಿದೆ. Education must evolve with the times. The ninth objective of the 'Lesson-Based Assessment' initiative is to establish a modern assessment framework where evaluation and learning go hand in hand. Rather than being separate events, they are integrated processes that happen simultaneously. This contemporary approach helps in identifying the true potential of students, making their academic journey more impactful and meaningful. #ModernAssessment #IntegratedLearning #EducationInnovation #KarnatakaEducation #FutureOfEducation #LessonBasedAssessment #ShalaShikshana #NammaKarnataka #StudentGrowth #AcademicReform
7
355
ಮಗುವಿನ ಶಿಕ್ಷಣವು ಕೇವಲ ಶಾಲೆಯಿಂದ ಪೂರ್ಣವಾಗುವುದಿಲ್ಲ; ಅದರಲ್ಲಿ ಪೋಷಕರ ಪಾತ್ರವೂ ಹಿರಿದು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಎಂಟನೇ ಉದ್ದೇಶವು ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವುದಾಗಿದೆ. ಪ್ರತಿ ಹಂತದ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವ ಮೂಲಕ ಮತ್ತು ಅವರನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ. Education is a collaborative journey where parents play a vital role. The eighth objective of the 'Lesson-Based Assessment' initiative focuses on involving parents as active partners in their child's academic progress. By keeping parents informed about every stage of learning and encouraging their participation in the educational process, we can build a stronger support system for every child's success. #ParentalInvolvement #ParentTeacherPartnership #EducationKarnataka #StudentSuccess #CommunityInEducation #LessonBasedAssessment #ShalaShikshana #NammaKarnataka #ChildDevelopment #HolisticEducation
5
390
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು  2025-26ನೇ ಶೈಕ್ಷಣಿಕ ಸಾಲಿನಿಂದ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 'ಪಾಠ ಆಧಾರಿತ ಮೌಲ್ಯಾಂಕನ' (LBA)  ಜಾರಿಗೆ ತರಲಾಗಿದೆ. ಪ್ರತಿ ಪಾಠದ ನಂತರ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ನಿಖರವಾಗಿ ಮೌಲ್ಯಮಾಪನ ಮಾಡಿ, ಅವರ ಶೈಕ್ಷಣಿಕ ಪ್ರಗತಿಯನ್ನು SATS ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಬೋಧನಾ ವಿಧಾನ ಜಾರಿಗೆ ತರಲಾಗುತ್ತಿದೆ, ನುರಿತ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ. To provide quality education in government schools, the 'Lesson-Based Assessment' (LBA) has been implemented for students of Classes 1 to 10 from the 2025-26 academic year. After every lesson, the learning level of students is accurately evaluated, and their academic progress is recorded in the SATS software. Modern teaching methods are being implemented in government schools, and skilled teachers are conducting lessons. Enroll your children in government schools. #KarnatakaEducation #GovernmentSchools #LessonBasedAssessment  #SchoolAdmissions2026 #Governmentschollsofkarnataka #Shalashikshana
3
1
9
569
ಕಲಿಕೆಯ ಪ್ರಕ್ರಿಯೆಯು ಫಲಪ್ರದವಾಗಲು ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಏಳನೇ ಉದ್ದೇಶವು ಬೋಧನೆಯಷ್ಟೇ ಮೇಲ್ವಿಚಾರಣೆಗೂ ಸಮಾನ ಆದ್ಯತೆ ನೀಡುವುದಾಗಿದೆ. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಮೇಲೆ ನಿರಂತರ ಗಮನ ಹರಿಸುವ ಮೂಲಕ, ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಮಗುವಿನ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿ. Continuous supervision is vital for a fruitful learning process. The seventh objective of the 'Lesson-Based Assessment' initiative is to give equal importance to both teaching and monitoring. By maintaining a steady focus on student learning and providing consistent oversight, we aim to uphold high educational standards and ensure every child’s progress. #ContinuousSupervision #QualityEducation #EducationalMonitoring #KarnatakaEducation #StudentProgress #EffectiveTeaching #LessonBasedAssessment #ShalaShikshana #NammaKarnataka #AcademicExcellence
6
350
ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಆರನೇ ಉದ್ದೇಶವು ಶಿಕ್ಷಕರ ಸಬಲೀಕರಣ ಮತ್ತು ಅವರ ಮೌಲ್ಯಮಾಪನ ಸಾಮರ್ಥ್ಯವನ್ನು ವೃದ್ಧಿಸುವುದಾಗಿದೆ. ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಹಾಗೂ ಸ್ವ-ಮೌಲ್ಯಮಾಪನದಂತಹ ವೈವಿಧ್ಯಮಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಕರಲ್ಲಿ ನೈಪುಣ್ಯತೆಯನ್ನು ತರುವುದು ನಮ್ಮ ಗುರಿ. Empowered teachers are the backbone of a successful education system. The sixth objective of the 'Lesson-Based Assessment' initiative focuses on teacher empowerment and enhancing their evaluation expertise. By integrating diverse assessment methods—such as oral, practical, peer-assessment, and self-evaluation—we aim to build professional excellence among our educators. Strengthening the capacity of teachers is key to fostering a dynamic and skilled student community. #TeacherEmpowerment #EducationalExcellence #ProfessionalDevelopment #KarnatakaTeachers #InnovativeTeaching #SkillBuilding #LessonBasedAssessment #ShalaShikshana #NammaKarnataka #QualityEducation
3
320
ಶಿಕ್ಷಣವು ಎಲ್ಲರನ್ನೂ ಒಳಗೊಳ್ಳುವ ಸದಾಶಯ ಹೊಂದಿರಬೇಕು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಐದನೇ ಉದ್ದೇಶವು ವಿವಿಧ ಕಲಿಕಾ ಹಂತದಲ್ಲಿರುವ ಎಲ್ಲಾ ಮಕ್ಕಳನ್ನು ಒಳಗೊಂಡ ಮೌಲ್ಯಮಾಪನ ಮಾಡುವುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ವೈವಿಧ್ಯಮಯ ಕಲಿಕಾ ಸಾಮರ್ಥ್ಯವನ್ನು ಗೌರವಿಸಿ, ಯಾರೂ ಹಿಂದೆ ಬೀಳದಂತೆ ಪ್ರೋತ್ಸಾಹಿಸುವುದು ನಮ್ಮ ಗುರಿ. ಸಮಾನತೆಯ ಆಧಾರದ ಮೇಲೆ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮ ಬದ್ಧತೆ. Education should be inclusive and leave no child behind. The fifth objective of the 'Lesson-Based Assessment' initiative is to ensure that students at various learning levels are integrated into the evaluation process. By valuing the unique learning journey of every child and providing personalized encouragement, we aim to foster an environment where everyone can thrive. Inclusive assessment is our commitment to educational equity. #InclusiveEducation #EveryChildMatters #EducationForAll #KarnatakaEducation #InclusiveLearning #StudentSupport #LessonBasedAssessment #ShalaShikshana #NammaKarnataka #EquityInEducation
1
3
288
ಕಲಿಕೆಯು ಕೇವಲ ಅಂಕಪಟ್ಟಿಗೆ ಸೀಮಿತವಾಗಬಾರದು; ಅದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಬೇಕು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ನಾಲ್ಕನೇ ಪ್ರಮುಖ ಉದ್ದೇಶವು ಫಲಿತಾಂಶಕ್ಕಿಂತ ಹೆಚ್ಚಾಗಿ 'ಕಲಿಕಾ ಫಲ'ಗಳಿಗೆ (Learning Outcomes) ಆದ್ಯತೆ ನೀಡುವುದಾಗಿದೆ. ನಿರಂತರ ವಿಶ್ಲೇಷಣೆಯ ಮೂಲಕ ಪ್ರತಿ ವಿದ್ಯಾರ್ಥಿಯು ನಿಗದಿತ ಕಲಿಕಾ ಗುರಿಗಳನ್ನು ತಲುಪುವಂತೆ ಉತ್ತೇಜಿಸುವುದು ಮತ್ತು ಅವರ ಶೈಕ್ಷಣಿಕ ಪ್ರಗತಿಯನ್ನು ಪ್ರತಿ ಹಂತದಲ್ಲೂ ಬೆಂಬಲಿಸುವುದು ನಮ್ಮ ಸಂಕಲ್ಪ. Learning should go beyond the scorecard; it must be a continuous journey of growth. The fourth objective of the 'Lesson-Based Assessment' initiative is to prioritize 'Learning Outcomes' over traditional results. By implementing continuous analysis, we ensure that every student has the opportunity to achieve specific learning goals. Our focus is on nurturing consistent progress and ensuring that every child truly masters what they learn. #LearningOutcomes #ContinuousAssessment #EducationQuality #KarnatakaSchools #StudentProgress #LessonBasedAssessment #ShalaShikshana #NammaKarnataka #HolisticEducation #EmpoweringChildren
3
246
ಕೇವಲ ಅಂಕಗಳಿಕೆಯಷ್ಟೇ ಶಿಕ್ಷಣವಲ್ಲ, ಸಾಮರ್ಥ್ಯದ ಬೆಳವಣಿಗೆಯೇ ನಿಜವಾದ ಪ್ರಗತಿ. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಮೂರನೇ ಉದ್ದೇಶವು ಮಕ್ಕಳನ್ನು ಕೇವಲ ಪರೀಕ್ಷೆಯ ಅವಲಂಬನೆಯಿಂದ ಮುಕ್ತಗೊಳಿಸಿ, ಅವರಲ್ಲಿ ನೈಜ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವುದಾಗಿದೆ. ಪ್ರತಿ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಧಾರೆ ಎರೆಯುವ ಮೂಲಕ ಸಮರ್ಥ ಭವಿಷ್ಯತ್ತನ್ನು ನಿರ್ಮಿಸೋಣ. Education is more than just grades; it’s about building true capability. The third objective of the 'Lesson-Based Assessment' initiative focuses on shifting away from a reliance on exams toward genuine capacity building. By identifying student progress early and enhancing their core learning skills, we are empowering children to move beyond rote learning and toward real-world competence. #CapacityBuilding #SkillDevelopment #BeyondExams #KarnatakaEducation #EmpoweringStudents #RealLearning #LessonBasedAssessment #ShalaShikshana #NammaKarnataka #FutureSkills
1
4
285
ಕಲಿಕೆಯು ಹೊರೆಯಾಗಬಾರದು, ಅದು ಸಂತಸದ ಅನುಭವವಾಗಬೇಕು. 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯ ಎರಡನೇ ಪ್ರಮುಖ ಉದ್ದೇಶವೇ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುವುದು. ಒತ್ತಡ ರಹಿತ ಕಲಿಕಾ ಪರಿಸರವನ್ನು ನಿರ್ಮಿಸುವ ಮೂಲಕ ಮಕ್ಕಳು ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಮಾಡುವುದು ನಮ್ಮ ಗುರಿ. ಭಯಮುಕ್ತ ಪರೀಕ್ಷೆ ಮತ್ತು ಸಂತಸದ ಕಲಿಕೆಯೇ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾದಿ. Learning should be a joyful journey, not a burden. The second objective of the 'Lesson-Based Assessment' initiative is to eliminate exam-related anxiety among students. By fostering a stress-free environment, we aim to make exams a fearless experience where children can showcase their knowledge with confidence. Let’s prioritize happy learning and academic well-being for every student. #StressFreeLearning #FearlessExams #HappyLearning #KarnatakaEducation #StudentWellbeing #EducationReform #LessonBasedAssessment #ShalaShikshana #NammaKarnataka #QualityEducation
3
15
470
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಕಲಿಕೆಯನ್ನು ಖಾತರಿಪಡಿಸುವುದು ನಮ್ಮ ಆದ್ಯ ಗುರಿ. ಪ್ರತಿ ಪಾಠದ ನಂತರ ಸುಧಾರಿತ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು 'ಪಾಠ ಆಧಾರಿತ ಮೌಲ್ಯಾಂಕನ' ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಪ್ರಗತಿಯನ್ನು ಗುರುತಿಸಿ, ಅವರ ಶೈಕ್ಷಣಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಾಗುತ್ತಿದೆ. ಕಲಿಕೆಯ ಸುಧಾರಣೆ ಹಾಗೂ ಪ್ರತಿ ಮಗುವಿನ ಜ್ಞಾನದ ದೃಢೀಕರಣವೇ ಈ ಅಭಿಯಾನದ ಮುಖ್ಯ ಉದ್ದೇಶ. Ensuring quality learning is at the heart of our educational mission. Through the 'Lesson-Based Assessment' (Paatha Adharita Moulyankana) initiative, the goal is to guarantee improved learning outcomes after every single lesson. By focusing on steady progress and confirming each student's understanding, we are building a stronger academic foundation for every child in Karnataka. #EducationKarnataka #QualityLearning #LessonBasedAssessment #StudentSuccess #KarnatakaEducation #ShalaShikshana #LearningOutcomes #EducationFirst #NammaKarnataka #FutureOfLearning
1
4
301
ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೂ ಶಿಕ್ಷಣವನ್ನು ಖಾತ್ರಿಗೊಳಿಸಲು ಒಂದೇ ಸೂರಿನಡಿ ಶಿಕ್ಷಣ ನೀಡುವುದಕ್ಕಾಗಿ ʻಕರ್ನಾಟಕ ಪಬ್ಲಿಕ್ ಶಾಲೆʼ (ಕೆಪಿಎಸ್‌)ಗಳನ್ನು ತೆರೆಯಲಾಗಿದೆ. ಪ್ರಸ್ತುತ ಇರುವ 309 ಕೆಪಿಎಸ್‌ಗಳಲ್ಲಿ 2,72,464 ವಿದ್ಯಾರ್ಥಿಗಳು ಓದುತ್ತಿದ್ದಾರೆ.  ಪೋಷಕರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ. To ensure continuous education from Pre-primary to Class 12 (Second PUC) under one roof, 'Karnataka Public Schools' (KPS) have been established. Currently, 2,72,464 students are studying across 309 existing KPS schools. Quality education is being provided while ensuring that there is no financial burden on the parents. #KarnatakaPublicSchool #QualityEducation #LessonBasedAssessment #SSLCResults #PUCPreparation #GovtSchoolsKarnataka #Shalashikshana #GovernmentSchoolsofKarnataka
4
2
27
1,283