Filter
Exclude
Time range
-
Near
ಪರಿಶಿಷ್ಟ ವರ್ಗಗಳು ಮತ್ತು ಇತರ ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಮೀಸಲಾಗಿರುವ SCSP-TSP ಯೋಜನೆಯ ಅನುದಾನವನ್ನು ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಹಾಗೂ 'ಗ್ಯಾರಂಟಿ' ಯೋಜನೆಗಳ ಹೆಸರಿನಲ್ಲಿ ಬೇರೆ ಉದ್ದೇಶಗಳಿಗೆ ಬಳಸಿರುವುದು ಪರಿಶಿಷ್ಟ ವರ್ಗಗಳ ಹಕ್ಕುಗಳಿಗೆ ಮಾಡಿರುವ ಅಕ್ಷಮ್ಯ ಅನ್ಯಾಯವಾಗಿದೆ. ರಾಜ್ಯ ಸರ್ಕಾರದ ಬಜೆಟ್ ದಾಖಲೆಗಳ ಪ್ರಕಾರ: ▪️ 2023-24ನೇ ಸಾಲು – ₹11,144 ಕೋಟಿ ▪️ 2024-25ನೇ ಸಾಲು – ₹14,282.68 ಕೋಟಿ ▪️ 2025-26ನೇ ಸಾಲು – ₹13,433.84 ಕೋಟಿ ▪️ 2026-27ನೇ ಸಾಲು – ₹14,198.93 ಕೋಟಿ ಒಟ್ಟಾರೆ ₹53,059.45 ಕೋಟಿಗಳಷ್ಟು ಬೃಹತ್ ಮೊತ್ತ ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ವಿನಿಯೋಗವಾಗಬೇಕಾಗಿತ್ತು. ಆದರೆ ಈ ಅನುದಾನವನ್ನು ಮೂಲ ಉದ್ದೇಶದಿಂದ ದಾರಿ ತಪ್ಪಿಸಿ, ರಾಜಕೀಯ ಲಾಭಕ್ಕಾಗಿ ಬಳಸಿರುವುದು ಸಂವಿಧಾನದ ಆಶಯಗಳಿಗೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ಘೋರ ದ್ರೋಹವಾಗಿದೆ ಎಂದರೆ ತಪ್ಪಾಗಲಾರದು. ಈ ಹಣವು ಪರಿಶಿಷ್ಟ ವರ್ಗಗಳ ಯುವಜನರ ಶಿಕ್ಷಣ, ಉನ್ನತ ವ್ಯಾಸಂಗ, ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಬಳಸಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಈ ಸಮುದಾಯಗಳ ಭವಿಷ್ಯವನ್ನು ಒತ್ತೆಯಿಟ್ಟು, ರಾಜಕೀಯ ಆಮಿಷಗಳನ್ನು ಪೂರೈಸುವ ಸಾಧನವಾಗಿ ಈ ಅನುದಾನವನ್ನು ಬಳಸಿರುವುದು ಅತ್ಯಂತ ಖಂಡನೀಯವಾದ ಸಂಗತಿಯಾಗಿದೆ. ಈ ಗಂಭೀರ ಅಕ್ರಮ ಮತ್ತು ಅನ್ಯಾಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿರಲಿದೆ. ಈ ಹಿನ್ನೆಲೆಯಲ್ಲಿ, ನಾನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾನ್ಯ ಸಚಿವರಿಗೆ ಹಾಗೂ ಸಂಸತ್ತಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಸನ್ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದೇನೆ. ಜೊತೆಗೆ, SCSP-TSP ಅನುದಾನದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ, ಇಲ್ಲಿಯವರೆಗೆ ಬೇರೆ ಉದ್ದೇಶಗಳಿಗೆ ಬಳಸಲಾದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿ, ಅದನ್ನು ಪುನಃ SCSP-TSP ಯೋಜನೆಗೆ ವರ್ಗಾಯಿಸುವಂತೆ ಬಲವಾಗಿ ಆಗ್ರಹಿಸಿದ್ದೇನೆ. ಪರಿಶಿಷ್ಟ ವರ್ಗಗಳ ನ್ಯಾಯಯುತ ಹಕ್ಕುಗಳನ್ನು ಕಸಿದುಕೊಂಡು, ಅವರ ಪ್ರಗತಿಗೆ ಅಡ್ಡಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಖಂಡಿಸಬೇಕು. ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಹಂಚಿಕೆ ಮಾಡಿ, ಬಳಿಕ ಅದನ್ನು ಬೇರೆ ಉದ್ದೇಶಗಳಿಗೆ ತಿರುಗಿಸುವವರನ್ನು ಜನತೆ ಪ್ರಶ್ನಿಸುವ ಸಮಯ ಬಂದಿದೆ. ನನ್ನ ಈ ಹೋರಾಟವು ಕೇವಲ ಅನುದಾನದ ವಿಚಾರವಲ್ಲ; ಇದು ಸಂವಿಧಾನಬದ್ಧ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ದಲಿತ ಸಮುದಾಯದ ಭವಿಷ್ಯವನ್ನು ರಕ್ಷಿಸುವ ಹೋರಾಟವಾಗಿದೆ. ಪರಿಶಿಷ್ಟ ವರ್ಗಗಳಿಗೆ ನ್ಯಾಯ ದೊರೆಯುವವರೆಗೆ ಮತ್ತು ಸಂವಿಧಾನದ ಆಶಯಗಳಿಗೆ ಗೌರವ ಸಿಗುವವರೆಗೆ ನನ್ನ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. #scsptsp #SaveSCSPTSPFunds #DalitRightsMatter #SocialJusticeFirst #StopSCSPDiversion #JusticeForScheduledCastes #CongressAgainstDalits
44
ಬಾಬಾಸಾಹೇಬರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅವರ ಸ್ಮಾರಕಕ್ಕೇ ಅನುದಾನ ನೀಡದ ಕಾಂಗ್ರೆಸ್‌ನ “ಕರಾಳ ಮುಖ” ಮತ್ತೊಮ್ಮೆ ಬಹಿರಂಗವಾಗಿದೆ! ಕನ್ನಡದ ಪ್ರಮುಖ ದಿನಪತ್ರಿಕೆಯ ವರದಿಯು ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆಯನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಪವಿತ್ರ ಸ್ಥಳಗಳಲ್ಲಿ ‘ಹೆಜ್ಜೆ ಗುರುತು’ ಯೋಜನೆಯಡಿ ಸ್ಮಾರಕಗಳನ್ನು ನಿರ್ಮಿಸಲು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ ನಮ್ಮ ಬಿಜೆಪಿ ಸರ್ಕಾರ ಅನುದಾನ ಮಂಜೂರು ಮಾಡಿತ್ತು. ಆದರೆ, ಇಂದು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ “ಹಣದ ಕೊರತೆ” ಎಂಬ ನೆಪವೊಡ್ಡಿ ಈ ಮಹತ್ವದ ಕಾರ್ಯವನ್ನು ನಿರ್ಲಕ್ಷ್ಯ ಮಾಡುತ್ತಿದೆ. ❓ಗ್ಯಾರಂಟಿಗಳಿಗೆ ಹಣವಿದೆ, ಬಾಬಾಸಾಹೇಬರಿಗೆ ಇಲ್ಲವೇ?: SCSP-TSP ಯೋಜನೆಯಡಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸುಮಾರು ₹53,000 ಕೋಟಿ ಹಣವನ್ನು ನಿಯಮಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ಕಾಂಗ್ರೆಸ್ ಸರ್ಕಾರಕ್ಕೆ, ಬಾಬಾಸಾಹೇಬರ ಸ್ಮಾರಕ ನಿರ್ಮಾಣಕ್ಕೆ ಬೇಕಾದ ಅಲ್ಪ ಮೊತ್ತವೂ ಭಾರವಾಗಿದೆಯೇ? ಇದು ಪರಿಶಿಷ್ಟ ಸಮುದಾಯದ ಮೇಲಿನ ಸ್ಪಷ್ಟ ಅನ್ಯಾಯವಲ್ಲವೇ? ✅ಸಚಿವರ ಕಾಲಹರಣ: ಸಮಾಜ ಕಲ್ಯಾಣ ಸಚಿವರು ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಬದಲು, ಸಾಮಾಜಿಕ ಜಾಲತಾಣಗಳಲ್ಲಿ ತತ್ವಜ್ಞಾನಿಯಂತೆ ಪೋಸ್ಟ್ ಮಾಡುತ್ತಾ, ಕಾಲಜ್ಞಾನಿಯ ರೀತಿಯಲ್ಲಿ ವರ್ತಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ತಮ್ಮದೇ ಇಲಾಖೆಯ ಅಡಿಯಲ್ಲಿ ನಡೆಯಬೇಕಾದ ಸ್ಮಾರಕ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದ್ದರೂ, ಇಂತಹ ಘೋರ ಅನ್ಯಾಯಗಳು ಅವರ ಕಣ್ಣಿಗೆ ಬೀಳದಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ✅ಇತಿಹಾಸದ ಪುನರಾವರ್ತನೆ: ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿ, ಅವರ ವಿರುದ್ಧ ಪಿತೂರಿ ನಡೆಸಿ ಇತಿಹಾಸದುದ್ದಕ್ಕೂ ಅಪಮಾನಿಸಿದ್ದ ಕಾಂಗ್ರೆಸ್, ಇಂದು ಅವರ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಪಡಿಸುವ ಮೂಲಕ ಆ ಕಹಿ ಇತಿಹಾಸವನ್ನು ಜೀವಂತವಾಗಿರಿಸಿದೆ. ಇದು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡುತ್ತಿರುವ ಸರಣಿ ಅಪಮಾನದ ಮುಂದುವರಿದ ಭಾಗ. ಇಂದು ಅವರ ಸ್ಮರಣೆಯನ್ನು ಅಳಿಸಲು ಕಾಂಗ್ರೆಸ್ ಹೊರಟಂತಿದೆ. ಸ್ಮಾರಕ ನಿರ್ಮಾಣಕ್ಕೂ ಅಡ್ಡಿಪಡಿಸುವ ಮೂಲಕ ಆ ಹಳೆಯ ಮನೋಭಾವವನ್ನೇ ಕಾಂಗ್ರೆಸ್ ಮುಂದುವರಿಸುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ✅ಮಾತಿನಲ್ಲಿ ಸಂವಿಧಾನ, ಕೃತಿಯಲ್ಲಿ ನಿರ್ಲಕ್ಷ್ಯ: ವೇದಿಕೆಗಳ ಮೇಲೆ ಸಂವಿಧಾನದ ಪ್ರತಿಯನ್ನು ಹಿಡಿದು ಗೌರವ ತೋರಿಸುವವರು, ಅಂಬೇಡ್ಕರ್ ಸ್ಮರಣಾರ್ಥ ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸುವುದು—ಇದು ಮಾತು-ಕೃತಿಗಳ ನಡುವಿನ ಸ್ಪಷ್ಟ ವೈರುಧ್ಯವನ್ನು ತೋರಿಸುತ್ತದೆ. ❓ಅಭಿವೃದ್ಧಿಗಿಂತ ಮತಬ್ಯಾಂಕ್ ರಾಜಕಾರಣವೇ ಮುಖ್ಯವೇ? ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ ಭಾಗಗಳ ಜನರ ದೀರ್ಘಕಾಲದ ಆಶಯವಾಗಿದ್ದ ಈ ಸ್ಮಾರಕಗಳು ಇಂದು ನಿರ್ಲಕ್ಷ್ಯದ ಸಂಕೇತಗಳಾಗಿ ನಿಂತಿವೆ. ಕಾಂಗ್ರೆಸ್ ಸರ್ಕಾರಕ್ಕೆ ಮಹಾನಾಯಕರ ಗೌರವಕ್ಕಿಂತ ಮತಬ್ಯಾಂಕ್ ರಾಜಕಾರಣವೇ ಮುಖ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು, ಸಂವಿಧಾನ ಪಿತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ, ಬಾಬಾಸಾಹೇಬರ ಅನುಯಾಯಿಗಳು ಮತ್ತು ರಾಜ್ಯದ ಜನತೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಿಮಗೆ ತಕ್ಕ ಉತ್ತರ ನೀಡುವುದು ಖಚಿತ! ಉಚಿತ!! ನಿಶ್ಚಿತ!!! ಕಾಂಗ್ರೆಸ್‌ನ ಈ ದಲಿತ ವಿರೋಧಿ ಧೋರಣೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. #ambedkar #DalitVirodhiCongress #SCSPTSP #KarnatakaPolitics #SaveConstitutionFunds #AntiDalitCongress #AmbedkarRespect
2
34
2025-26ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ-2013 ರಡಿ ಬಳಕೆಯಾಗದೆ ಇರುವ ರೂ.155.51 ಲಕ್ಷ ಅನುದಾನವನ್ನು ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಈ ಹಣವನ್ನು ನೇರವಾಗಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಜಂಟಿ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. In a landmark decision, administrative approval has been granted to the Commissioner of the Department of School Education to utilize the unspent grant of ₹155.51 lakh under the SCSP-TSP Act 2013 for the 2025-26 academic year. This fund is specifically allocated for the repair works of government schools. In a significant move to ensure direct implementation, the funds will be released directly to the joint bank accounts of the School Headmasters and the School Development and Monitoring Committees (SDMC) #SCSPTSP #EmpoweredSchools #Shalashikshana #GovernmentSchoolsofKarnataka
1
1
8
547
ಶೈಕ್ಷಣಿಕ ವರ್ಷ ಮುಗಿದರೂ ಮಕ್ಕಳಿಗೆ 'ಶೂ ಭಾಗ್ಯ' ಸಿಗಲಿಲ್ಲ! ಇದೆಂಥಾ ವಿಪರ್ಯಾಸ..!! ❓ಸಮಾಜ ಕಲ್ಯಾಣ ಇಲಾಖೆಗೆ ಇದಕ್ಕಿಂತ ದೊಡ್ಡ ಅವಮಾನ ಬೇಕೆ? ❓ಬಡ ಮಕ್ಕಳ ಕಾಲಿಗೆ ರಕ್ಷಣೆ ನೀಡಲಾಗದ ಸಮಾಜ ಕಲ್ಯಾಣ ಇಲಾಖೆ ಯಾವ ಸಾಧನೆಗಾಗಿ ಅಸ್ತಿತ್ವದಲ್ಲಿದೆ? ❓ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 'ಗ್ಯಾರಂಟಿಗಳ ಕಲ್ಯಾಣ' ಮಾಡಿದರೆ, ಸಮಾಜ ಕಲ್ಯಾಣ ಇಲಾಖೆಯಿಂದ "ಸಾಮಾಜಿಕ ಅನ್ಯಾಯ"ವಲ್ಲದೆ ಮತ್ತೇನು ಸಿಗಲು ಸಾಧ್ಯ? #scsptsp #SocialJustice #CongressLootsKarnataka #CongressFailsKarnataka
1
5
72
SCSP/TSP ಕಾಯ್ದೆ ತಂದೆವು ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರದಿಂದಲೇ ದಲಿತರ ಮೀಸಲಾತಿ ಹಣ ಲೂಟಿ! ಮಾನ್ಯ ಮುಖ್ಯಮಂತ್ರಿಗಳು SCSP/TSP ಕಾಯ್ದೆಯನ್ನು ತಂದೆವು ಎಂದು ಹೇಳಿಕೊಳ್ಳುತ್ತಾರೆ. ಆದರೆ ಆ ಜನಾಂಗಕ್ಕೆ ಸಂವಿಧಾನಬದ್ಧವಾಗಿ ಖರ್ಚು ಮಾಡಬೇಕಾಗಿದ್ದ ಹಣವನ್ನು ಅವರಿಗೇ ಸೇರುವಂತೆ ಮಾಡಿದ್ದಾರೆಯೇ? 'ಕಾಯ್ದೆ ತಂದಿದ್ದೂ ನೀವೇ, ಆ ಹಣವನ್ನು ತಿಂದಿದ್ದೂ ನೀವೇ!' ಎಂದು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ದ್ವಂದ್ವ ನೀತಿ ಮತ್ತು ದಲಿತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ. SCSP/TSP ಅಡಿ ದಲಿತರ ಮತ್ತು ಶೋಷಿತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದ್ದ ಹಣವನ್ನು ಇಂದು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. "ಈ ಗ್ಯಾರಂಟಿಗಳಿಗೆ ಇಟ್ಟ ಹಣದಲ್ಲಿ ದಲಿತರ ಪಾಲು ಎಲ್ಲಿದೆ?" ಎಂಬ ನನ್ನ ನೇರ ಪ್ರಶ್ನೆಗೆ ಸರ್ಕಾರದ ಬಳಿ ಯಾವುದೇ ಉತ್ತರವಿಲ್ಲ. ಇದನ್ನು ಸರ್ಕಾರ ಸಾಮಾಜಿಕ ನ್ಯಾಯ ಎಂದು ಕರೆದುಕೊಳ್ಳುತ್ತಿದೆ. ಆದರೆ, ದಲಿತರ ಹಕ್ಕಿನ ಹಣವನ್ನು ಕಸಿದುಕೊಳ್ಳುವುದು 'ಸಾಮಾಜಿಕ ಅನ್ಯಾಯ'ವೇ ಹೊರತು ನ್ಯಾಯವಲ್ಲ. ಕೇವಲ ಘೋಷಣೆಗಳನ್ನು ಮಾಡಿದರೆ ಸಾಲದು, ಆ ಘೋಷಣೆಗಳ ಹಿಂದೆ ಶೋಷಣೆ ಇರಬಾರದು. ದಲಿತರ, ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ನಮ್ಮ ಹೋರಾಟ ಸದಾ ನಿರಂತರವಾಗಿರುತ್ತದೆ. #ChalavadiNarayanaswamy #VidhanaParishat #SCSPTSP #SocialJustice #KarnatakaBudget2026 #JusticeForDalits
5
73
ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 2026 ನೇ ಸಾಲಿನ ಮೊದಲ ತ್ರೈಮಾಸಿಕ ಸಭೆ ಹಾಗೂ ಎಸ್.ಸಿ.ಎಸ್ ಪಿ- ಟಿ.ಎಸ್.ಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. #scsptsp #socialwelfare
1
96
2026-27 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ (SCSP-TSP) ಅನುದಾನದಲ್ಲಿ ಬರೋಬ್ಬರಿ ₹14,200 ಕೋಟಿಗಳನ್ನು ರಾಜ್ಯ ಸರ್ಕಾರ ತನ್ನ 'ಗ್ಯಾರಂಟಿ' ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ದಲಿತ ಸಮುದಾಯಕ್ಕೆ ಮಾಡಿರುವ ಬಹುದೊಡ್ಡ ದ್ರೋಹವಾಗಿದೆ. ಸಾಮಾಜಿಕ ನ್ಯಾಯದ ಹರಿಕಾರರು ಎಂದು ಹೇಳಿಕೊಳ್ಳುವ ಸರ್ಕಾರವೇ, ಶೋಷಿತರ ಏಳಿಗೆಗಾಗಿ ಮೀಸಲಾದ ಹಣಕ್ಕೆ ಕನ್ನ ಹಾಕಿರುವುದು ಅಕ್ಷಮ್ಯ ಅಪರಾಧ ಎಂದರೆ ತಪ್ಪಾಗಲಾರದು. ಕಾನೂನಿನ ಪ್ರಕಾರ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಕೇವಲ ಆಯಾ ಸಮುದಾಯಗಳ ನೇರ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು. ಆದರೆ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಸೇರಿದಂತೆ ಇತರ ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ದಲಿತರ ಹಕ್ಕಿನ ಹಣವನ್ನು ವರ್ಗಾಯಿಸುತ್ತಿರುವುದು ಯಾವ ನ್ಯಾಯ? ರಾಜಕೀಯ ಲಾಭಕ್ಕಾಗಿ ಕೊಟ್ಟ ಭರವಸೆಗಳನ್ನು ಈಡೇರಿಸಲು ದಲಿತರ ಹೊಟ್ಟೆಯ ಮೇಲೆ ಹೊಡೆಯುವ ಈ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಈ ತೀರ್ಮಾನವನ್ನು ಹಿಂಪಡೆಯಬೇಕು. ಇಲ್ಲಿಯವರೆಗೆ ದುರ್ಬಳಕೆ ಮಾಡಿಕೊಂಡಿರುವ ಎಲ್ಲಾ ಹಣವನ್ನೂ ಮರಳಿ ದಲಿತರ ಕಲ್ಯಾಣಕ್ಕೆ ಬಳಸಬೇಕು. ದಲಿತ ಮತ್ತು ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಪ್ರತಿಯೊಂದು ರೂಪಾಯಿಯೂ ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಉದ್ಧಾರಕ್ಕೆ ಮಾತ್ರ ಬಳಕೆಯಾಗಬೇಕು ಎಂದು ನಾನು ತೀವ್ರವಾಗಿ ಆಗ್ರಹಿಸುತ್ತೇನೆ. #SCSPTSP #DalitRights #SocialJustice #KarnatakaGovt #SCSTWelfare
1
5
112
ಮಾನ್ಯ ಸಮಾಜ ಕಲ್ಯಾಣ ಮಂತ್ರಿಗಳಾದ ಡಾ. ಹೆಚ್.ಸಿ ಮಹದೇವಪ್ಪ ನವರೇ, ಸಾಮಾಜಿಕ ಜಾಲತಾಣದಲ್ಲಿ ನೀವು ನೀಡುವ ತತ್ವಜ್ಞಾನದ "ಬುತ್ತಿ" ದಲಿತರ ಹೊಟ್ಟೆ ತುಂಬಿಸುವುದಿಲ್ಲ! ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ₹53,000 ಕೋಟಿಗೂ ಅಧಿಕ SCSP/TSP ಹಣವನ್ನು ಗ್ಯಾರಂಟಿಗಳಿಗೆ ಧಾರೆ ಎರೆಯಲಾಗಿದೆ ಎಂಬ ದಾಖಲೆಗಳು ನಿಮ್ಮ ಕಣ್ಣ ಮುಂದಿರುವಾಗ, ಈ ವಿಚಾರಕ್ಕೆ ನಿಮ್ಮ ಉತ್ತರವೇನು? ❓ದಲಿತರ ಹಕ್ಕಿನ ಹಣದ ಮೇಲೆ ಕಾಂಗ್ರೆಸ್ ಸರ್ಕಾರ ನಡೆಸಿದ ಈ ‘ಸರ್ಜಿಕಲ್ ಸ್ಟ್ರೈಕ್’ ನಿಮಗೆ ಅಭಿವೃದ್ಧಿಯಂತೆ ಕಾಣಿಸುತ್ತಿದೆಯೇ? ❓ನಿಮ್ಮ ಇಲಾಖೆಯ ಸುಮಾರು ₹53,000 ಕೋಟಿ ಹಣ ಗ್ಯಾರಂಟಿ ಎಂಬ ‘ಮಾಯಾಜಾಲ’ಕ್ಕೆ ಆಹುತಿಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ❓ನಿಮಗೆ ದಲಿತರ ಶ್ರೇಯೋಭಿವೃದ್ಧಿ ಮುಖ್ಯವೋ, ಅಥವಾ ಯಾರನ್ನೋ ಮೆಚ್ಚಿಸುವ ರಾಜಕೀಯವೇ ಮುಖ್ಯವೋ? ❓ನಿಮ್ಮದು ನಿಜವಾಗಿಯೂ “ಸಮಾಜ ಕಲ್ಯಾಣ ಇಲಾಖೆ”ಯೋ, ಅಥವಾ ಅದು “ಗ್ಯಾರಂಟಿ ಕಲ್ಯಾಣ ಇಲಾಖೆ”ಯೋ? ❓ದಲಿತರ ಅಭಿವೃದ್ಧಿ ಹಣದಲ್ಲೇ ಗ್ಯಾರಂಟಿಗಳಿಗೆ ಭೋಜನ ಬಡಿಸುತ್ತಿರುವ ನೀವು, ಇನ್ನೆಷ್ಟು ದಿನ ತತ್ವಜ್ಞಾನದ ಮುಖವಾಡ ಧರಿಸಿಕೊಂಡು ಸಮಾಜದಲ್ಲಿ ನಡೆಯಲಿದ್ದೀರಿ? ❓ದಾಖಲೆಗಳ ಪ್ರಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬೇರೆಡೆಗೆ ಹರಿಯುತ್ತಿರುವುದು ನಿಮಗೆ ‘ಅಧ್ಯಾತ್ಮ’ದಂತೆ ಕಾಣಿಸುತ್ತಿದೆಯೋ, ಅಥವಾ ‘ಅನ್ಯಾಯ’ದಂತೆ ಕಾಣಿಸುತ್ತಿದೆಯೋ? ❓ದಲಿತರ ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯದ ಆಶಯಗಳಿಗೆ ಮೊಳೆ ಹೊಡೆಯುವಂತೆ, ಹಣವನ್ನು ಬೇರೆಡೆಗೆ ಹರಿಸಿರುವುದಕ್ಕೆ ಯಾರು ಜವಾಬ್ದಾರರು? ❓ದಲಿತ ಸಮುದಾಯದ ನಾಯಕ ಎಂದು ಕರೆಸಿಕೊಳ್ಳುವ ನಿಮಗೆ, ಅದೇ ಸಮುದಾಯದ ಹಕ್ಕಿನ ಹಣವನ್ನು ಬೇರೆ ಯೋಜನೆಗಳಿಗೆ ಧಾರೆ ಎರೆಯಲು ಮನಸ್ಸಾದರೂ ಹೇಗೆ ಬಂತು? ಇದು ನೀವು ಸಮುದಾಯಕ್ಕೆ ಮಾಡಿದ ನಂಬಿಕೆ ದ್ರೋಹವಲ್ಲವೇ? ❓ಸಾಮಾಜಿಕ ಜಾಲತಾಣಗಳಲ್ಲಿ ನೀವು ‘ಸಮಾನತೆ’ ಮತ್ತು ‘ಸಾಮಾಜಿಕ ನ್ಯಾಯ’ ಗಳ ಬಗ್ಗೆ ಉಪದೇಶ ಮಾಡುತ್ತೀರಿ, ಆದರೆ, ನಿಮ್ಮ ಇಲಾಖೆಯ ಬಜೆಟ್‌ನಲ್ಲಿ ‘ಅಸಮಾನತೆ’ ಮತ್ತು ‘ಸಾಮಾಜಿಕ ಅನ್ಯಾಯ’ ತಾಂಡವವಾಡುತ್ತಿರುವುದಕ್ಕೆ ನಿಮ್ಮ ಉತ್ತರವೇನು? ❓ದಲಿತರ ಹಕ್ಕಿನ ಹಣಕ್ಕೆ ಕನ್ನ ಹಾಕುವುದೇ ನಿಮ್ಮ ಸಾಧನೆಯೇ? ❓ನಿಮ್ಮ ತತ್ವ-ಸಿದ್ಧಾಂತಗಳು ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿವೆಯೋ? ❓ದಲಿತರ ಹಣ ಲೂಟಿಯಾಗುತ್ತಿರುವಾಗ ನಿಮ್ಮ “ಸಾಂವಿಧಾನಿಕ ನೈತಿಕತೆ” ಎಲ್ಲಿ ಅಡಗಿ ಕುಳಿತಿದೆ? ❓ದಲಿತರ ಹಣವನ್ನು ಬೇರೆಡೆಗೆ ಹರಿಸಿ ಪುಕ್ಕಟೆ ಭಾಗ್ಯ ಹಂಚುವುದು ಯಾವ ರೀತಿಯ ಸಮಾಜವಾದ? ❓ಯಾರನ್ನು ಮೆಚ್ಚಿಸಲು ಕಣ್ಣಿದ್ದು ಕುರುಡಾಗಿರುವಿರಿ? ಸಾಮಾಜಿಕ ನ್ಯಾಯವೆಂಬ ನಕಲಿ ಮುಖವಾಡ ಧರಿಸಿ, ನಕಲಿ ಸಮಾಜವಾದದ ಹೆಸರಿನಲ್ಲಿ ದಲಿತರ ಹಕ್ಕಿನ ಹಣವನ್ನು ಬೇರೆಡೆಗೆ ಹರಿಸುವ ಈ ರಾಜಕೀಯ ನಾಟಕವೇ ಇಂದು ರಾಜ್ಯದಲ್ಲಿ ನಡೆಯುತ್ತಿರುವ ಸ್ಪಷ್ಟವಾದ "ಸಾಮಾಜಿಕ ಅನ್ಯಾಯ". ಸಚಿವ ಸ್ಥಾನದ ವ್ಯಾಮೋಹಕ್ಕಾಗಿ ಸ್ವಂತ ಸಮುದಾಯದ ಬೆನ್ನಿಗೆ ಚೂರಿ ಹಾಕುವ ನಿಮ್ಮ ರಾಜಕೀಯ ಬದುಕು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಈ ₹53,000 ಕೋಟಿಯ ಲೆಕ್ಕ ನಿಮ್ಮನ್ನು ಬಿಡುವುದಿಲ್ಲ. ದಲಿತರ ಶಾಪ ನಿಮಗೆ ತಟ್ಟದೇ ಇರದು! ಎಚ್ಚರಗೊಳ್ಳಿ! ಅನ್ಯಾಯವನ್ನು ಪ್ರಶ್ನಿಸಿ!! #CongressAgainstDalits #scsptspfund #SCSPTSP #socialwelfare #CongressFailsKarnataka
1
9
152
ದಲಿತರ ಬೆನ್ನಿಗೆ ಚೂರಿ ಹಾಕಿದ್ದಲ್ಲ, ಕತ್ತು ಕೊಯ್ಯುವ ಕೆಲಸ ಮಾಡುತ್ತಿದೆ @siddaramaiah ಸರ್ಕಾರ! ಕಳೆದ 3 ವರ್ಷಗಳಲ್ಲಿ SCSP/TSP ಯಿಂದ ₹39,000 ಕೋಟಿ ನುಂಗಿ ನೀರು ಕುಡಿದಿದ್ದ ಈ ದಲಿತ ವಿರೋಧಿ ಸರ್ಕಾರ, ನಿನ್ನೆಯ ಬಜೆಟ್‌ನಲ್ಲಿ ಮತ್ತೆ ₹15,066 ಕೋಟಿ ಕೊಳ್ಳೆ ಹೊಡೆದಿದೆ. ದಲಿತರ ಅಭಿವೃದ್ಧಿಯ ಹಣದಲ್ಲಿ ಜೇಬು ತುಂಬಿಸಿಕೊಳ್ಳುತ್ತಿರುವ ನಿಮ್ಮ 'ಸಾಮಾಜಿಕ ನ್ಯಾಯ'ದ ಮುಖವಾಡ ಕಳಚಿ ಬಿದ್ದಿದೆ. ದಲಿತ ಸಮುದಾಯ ಈ ಹಗಲು ದರೋಡೆಯನ್ನು ಎಂದಿಗೂ ಕ್ಷಮಿಸುವುದಿಲ್ಲ! #SalaRamaiah #CongressBogusBudget2026 #CongressFailsKarnataka #DalitDrohiSiddaramaiah #SCSPTSP
5
19
80
1,679
ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ "ಕೈ" ಚಳಕ ಮತ್ತೊಮ್ಮೆ ಬಯಲು! ​ಅಂಕಿ-ಅಂಶಗಳೇ ಸಾಕ್ಷಿ ಹೇಳುತ್ತಿವೆ, ಈ ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಏಳಿಗೆಗಿಂತ ಅಧಿಕಾರದ ಹಸಿವೇ ಮುಖ್ಯ ಎಂದು. SCSP-TSP ಕಾಯ್ದೆಯ ಆಶಯಗಳಿಗೆ ತಿಲಾಂಜಲಿ ಇಟ್ಟ ಮಾನ್ಯ ಶ್ರೀ ಸಿದ್ದರಾಮಯ್ಯನವರ ಬಜೆಟ್ ಇತಿಹಾಸಕ್ಕೆ ಒಂದು ಕಪ್ಪು ಚುಕ್ಕೆ. 👉​ವರ್ಷವಾರು SCSP/TSP ಹಣಕ್ಕೆ ಕನ್ನ: ▪️​2023-24: ₹11,144 ಕೋಟಿ ▪️​2024-25: ₹14,282.68 ಕೋಟಿ ▪️​2025-26: ₹13,433.84 ಕೋಟಿ ▪️​2026-27: ₹14,198.93 ಕೋಟಿ 👉ಒಟ್ಟು ಲೂಟಿ: ₹53,059.45 ಕೋಟಿ ದಲಿತರ ಹಣದಲ್ಲೇ "ಗ್ಯಾರಂಟಿ" ಭೋಜನವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಅಭಿವೃದ್ಧಿಯಲ್ಲ, ದಲಿತರ ಹಕ್ಕಿನ ಮೇಲೆ ಕಾಂಗ್ರೆಸ್ ಸರ್ಕಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್! ದಾಖಲೆಗಳ ಮೇಲೆ ದಾಖಲೆ ಬರೆಯುವಲ್ಲಿ ನಮ್ಮ "ಸಮಾಜವಾದಿ" ಮುಖ್ಯಮಂತ್ರಿಗಳು ಪ್ರಥಮರು! ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ SCSP-TSP ಹಣವನ್ನು ಗ್ಯಾರಂಟಿಗಳ "ಉಚಿತ" ಹೆಸರಿನಲ್ಲಿ ಲೂಟಿ ಹೊಡೆಯುವುದರಲ್ಲೂ ಇವರು ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದರೆ ತಪ್ಪಾಗಲಾರದು. ಪರಿಶಿಷ್ಟ ವರ್ಗಗಳಿಗೆ ಭೂಮಿ, ಶಿಕ್ಷಣ ಮತ್ತು ಉದ್ಯೋಗಕ್ಕೆ ಹೋಗಬೇಕಿದ್ದ ಹಣ ಇಂದು ಕಾಂಗ್ರೆಸ್‌ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬಳಕೆಯಾಗುತ್ತಿದೆ. ಮಾನ್ಯ ಸಮಾಜ ಕಲ್ಯಾಣ ಮಂತ್ರಿಗಳೇ, ನಿಮ್ಮ ಇಲಾಖೆಯ ಹಣ ಕಣ್ಣೆದುರೇ ಕಳ್ಳತನವಾಗುತ್ತಿದ್ದರೂ ನೀವು ಮೌನವಾಗಿರುವುದು ಯಾರ ಓಲೈಕೆಗಾಗಿ? ನೀವು ಕಲ್ಯಾಣ ಮಂತ್ರಿಗಳೋ ಅಥವಾ ಗ್ಯಾರಂಟಿಗಳ ಕಾವಲುಗಾರರೋ? ನಿಮ್ಮ ಧ್ವನಿ ಎಲ್ಲಿ ಅಡಗಿದೆ? ದಲಿತ ಸಮುದಾಯದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ಹಾಸ್ಟೆಲ್ ಸೌಲಭ್ಯಗಳಿಗೆ ಹಣವಿಲ್ಲ, ಆದರೆ ಗ್ಯಾರಂಟಿಗಳಿಗೆ ಸಾವಿರಾರು ಕೋಟಿ ಹಣ SCSP TSP ನಿಧಿಯಿಂದ ಹರಿಯುತ್ತಿದೆ. ಇದು ಸಾಮಾಜಿಕ ನ್ಯಾಯವಲ್ಲ, ನೀವು ದಲಿತರಿಗೆ ಮಾಡಿದ ಮಹಾದ್ರೋಹ! ₹53,000 ಕೋಟಿಗೂ ಅಧಿಕ SCSP-TSP ಹಣವನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತರ ಬೆನ್ನಿಗೆ ಚೂರಿ ಹಾಕಿದೆ. ಸಮಾಜ ಕಲ್ಯಾಣ ಇಲಾಖೆಯನ್ನು 'ಗ್ಯಾರಂಟಿ ಕಲ್ಯಾಣ' ಇಲಾಖೆಯನ್ನಾಗಿ ಮಾಡಿಕೊಂಡ ಮಾನ್ಯ ಮಂತ್ರಿಗಳಾದ ಶ್ರೀ ಮಹದೇವಪ್ಪ ರವರಿಗೆ ನಾಚಿಕೆಯಾಗಬೇಕು. ಅಧಿಕಾರಕ್ಕಾಗಿ ಪರಿಶಿಷ್ಟ ವರ್ಗಗಳನ್ನೇ ಹತ್ತಿಕ್ಕುತ್ತಿರುವ ಈ ಕಾಂಗ್ರೆಸ್ ಸರ್ಕಾರದ ನಡೆಯನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ. #SCSPTSP #AntiDalitCongress #DalitFundsLoot #SCSPTSP_Scam #JusticeForSCST
1
1
4
92
ಸಿದ್ದರಾಮಯ್ಯನವರ ಸಪ್ಪೆ ಬಜೆಟ್ ಹಾಗೂ ದಲಿತರ ಅನುದಾನ ಕಬಳಿಸುವ ಹುನ್ನಾರ: ಬೆಂಬಲಿಸಲು ಸ್ವಪಕ್ಷೀಯರೇ ಇಲ್ಲದ ಸದನ! ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದೀರ್ಘ ಮೂರು ಮುಕ್ಕಾಲು ಗಂಟೆಗಳ ಕಾಲ ಬಜೆಟ್ ಮಂಡಿಸಿದ್ದಾರೆ. ಆದರೆ, ಅವರು ಮಂಡಿಸಿದ ಈ ಬಜೆಟ್ ಎಷ್ಟು ಸಪ್ಪೆಯಾಗಿತ್ತು ಎಂದರೆ, ಅದನ್ನು ಆಲಿಸಲು ಅವರದೇ ಪಕ್ಷದ ಶಾಸಕರಿಗೆ ಆಸಕ್ತಿ ಇರಲಿಲ್ಲ. ಬಜೆಟ್ ಮಂಡನೆಯಾಗುತ್ತಿರುವಾಗ ಸದನದಲ್ಲಿ ಆಡಳಿತ ಪಕ್ಷದ ಹಿಂದಿನ ಸಾಲುಗಳೆಲ್ಲಾ ಸಂಪೂರ್ಣವಾಗಿ ಖಾಲಿ ಬಿದ್ದಿದ್ದವು. ಇದು ಅವರದೇ ಶಾಸಕರಿಗೆ ಈ ಬಜೆಟ್ ಮೇಲಿರುವ ಅಪನಂಬಿಕೆ ಹಾಗೂ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ. ಸ್ವಪಕ್ಷೀಯರಿಂದಲೇ ಬೆಂಬಲವಿಲ್ಲದ ಇಂತಹ ಬಜೆಟ್ ರಾಜ್ಯದ ಜನತೆಗೆ ಇನ್ನೇನು ತಾನೇ ಒಳಿತನ್ನು ಮಾಡಲು ಸಾಧ್ಯ? ಇನ್ನು, ಈ ಬಜೆಟ್‌ನಲ್ಲಿಯೂ ದಲಿತ ವಿರೋಧಿ ಧೋರಣೆ ಮುಂದುವರೆದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SCSP-TSP) ಅಭಿವೃದ್ಧಿಗಾಗಿ ಮೀಸಲಿಡುವ ಅನುದಾನದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕಳೆದ ವರ್ಷ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಳಿಗೆ 42 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಭಾಷಣದಲ್ಲಿ ಹೇಳಿದ್ದರು. ಆದರೆ, ಅದರಲ್ಲಿ 21 ಸಾವಿರ ಕೋಟಿಯನ್ನು ಬೇರೆ ಇಲಾಖೆಗಳಿಗೆ ಹಂಚಿ, ಅದರಲ್ಲಿ 14 ಸಾವಿರ ಕೋಟಿಯಷ್ಟು ಬೃಹತ್ ಮೊತ್ತವನ್ನು ಕೇವಲ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡರು. ಅಂತಿಮವಾಗಿ ಇಲಾಖೆಯಲ್ಲಿ ಉಳಿಸಿದ್ದು ಕೇವಲ 7 ಸಾವಿರ ಕೋಟಿ ರೂಪಾಯಿ ಮಾತ್ರ. ಇದು ದಲಿತ ಸಮುದಾಯಕ್ಕೆ ಬಗೆದ ಬಹುದೊಡ್ಡ ದ್ರೋಹ. ಈ ಬಾರಿಯ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು 44 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಹಣವನ್ನು ನಿಜವಾಗಿಯೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಬಳಸುತ್ತೀರೋ ಅಥವಾ ಮತ್ತೆ ನಿಮ್ಮ ಗ್ಯಾರಂಟಿ ಯೋಜನೆಗಳ ರಂಧ್ರ ಮುಚ್ಚಲು ದುರ್ಬಳಕೆ ಮಾಡುತ್ತೀರೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ಆ ಸಮುದಾಯದ ಏಳಿಗೆಗಾಗಿಯೇ ಬಳಕೆಯಾಗಬೇಕು ಹೊರತು, ಬೇರೆ ಕಾರ್ಯಕ್ರಮಗಳಿಗಲ್ಲ. ನಮ್ಮ ದಲಿತ ಸಮುದಾಯದ ಹಣವನ್ನು ಗ್ಯಾರಂಟಿಗಳಿಗೆ ಬಳಸಬಾರದು ಎಂದು ಈಗಾಗಲೇ ಎಲ್ಲಾ ಕಡೆಯಿಂದಲೂ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಈ ಬಾರಿಯೂ ನಮ್ಮ ಹಣವನ್ನು ದುರ್ಬಳಕೆ ಮಾಡಲು ಮುಂದಾದರೆ, ಇಡೀ ರಾಜ್ಯಾದ್ಯಂತ ದಲಿತ ಸಮುದಾಯ ಒಗ್ಗೂಡಿ ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಈ ಮೂಲಕ ಕಠಿಣ ಎಚ್ಚರಿಕೆ ನೀಡುತ್ತಿದ್ದೇನೆ. ದಲಿತರ ಹಕ್ಕುಗಳನ್ನು ಕಸಿದುಕೊಳ್ಳುವ ದಬ್ಬಾಳಿಕೆಯನ್ನು ನಾವು ಇನ್ನೆಂದಿಗೂ ಸಹಿಸುವುದಿಲ್ಲ. #ChalavadiNarayanaswamy #BJPKarnataka #KarnatakaBudget2024 #DalitRights #SCSPTSP
7
99
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಈ ಬಾರಿಯ ಬಜೆಟ್ ಭಾಷಣದ ಆರಂಭದಲ್ಲೇ ಒಂದು ಸ್ಪಷ್ಟ ಘೋಷಣೆ ಮಾಡಬೇಕು. ಅದೇನೆಂದರೆ, 'ಈ ವರ್ಷದ ಗ್ಯಾರಂಟಿ ಯೋಜನೆಗಳಿಗೆ ದಲಿತರ ಮೀಸಲು ನಿಧಿಯನ್ನು (SCSP/TSP) ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಅಥವಾ ದುರ್ಬಳಕೆ ಮಾಡಿಕೊಳ್ಳುವುದಿಲ್ಲ' ಎಂದು ಭರವಸೆ ನೀಡಬೇಕು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಆಯಾ ಸಮುದಾಯಗಳ ಸರ್ವತೋಮುಖ ಪ್ರಗತಿಗೆ ಮಾತ್ರ ಬಳಕೆಯಾಗಲಿ ಎಂಬುದು ನಮ್ಮ ಆಗ್ರಹವಾಗಿದೆ. #CongressLootsSCSPTSP #CongressLootsKarnataka #CongressFailsKarnataka #SCSPTSP
1
2
70
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP-TSP ಅನುದಾನವನ್ನು ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ತೀವ್ರ ಖಂಡನೀಯ. ದಲಿತರ ಶಿಕ್ಷಣ, ಆರೋಗ್ಯ, ಮನೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಬಗೆಯುವ ಬಹುದೊಡ್ಡ ದ್ರೋಹ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಪರಿಶಿಷ್ಟರ ಹಣವನ್ನು ಬೇರೆಡೆಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು. #scsptsp #DalitRights
2
5
46
ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ SCSP/TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುತ್ತಿರುವುದು ಅಕ್ಷಮ್ಯ ಅಪರಾಧ. ಕಳೆದ 3 ವರ್ಷಗಳಲ್ಲಿ ₹39,000 ಕೋಟಿ ದುರುಪಯೋಗವಾಗಿದ್ದು, ಇದು ದಲಿತರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ರೋಹ. ಕೂಡಲೇ ಈ ಹಣವನ್ನು ಅದೇ ಸಮುದಾಯದ ಏಳಿಗೆಗೆ ಬಳಸದಿದ್ದರೆ ಉಗ್ರ ಹೋರಾಟ ನಿಶ್ಚಿತ! #DalitRights #SCSPTSP #KarnatakaBudget #SocialJustice
1
2
7
174
SCSP-TSP ಯೋಜನೆಯ ಹಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೂ ಏನು ಸಂಬಂಧ? ​ಕಳೆದ 3 ಆರ್ಥಿಕ ವರ್ಷಗಳಲ್ಲಿ ಬರೋಬ್ಬರಿ ₹39,000 ಕೋಟಿ SCSP-TSP ಯೋಜನೆಯ ಹಣ ದುರ್ಬಳಕೆ ಆಗಿದೆ. ಪರಿಶಿಷ್ಟ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ಅಕ್ಷಮ್ಯ ಅಪರಾಧ. ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಈ ಹಣವನ್ನು ರಾಜಕೀಯ ಲಾಭಕ್ಕೆ ಬಳಸಿರುವುದು ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಸರ್ಕಾರ ಬಗೆದ ದ್ರೋಹವಾಗಿದೆ. ಈ ಲೂಟಿ, ಹಣ ದುರ್ಬಳಕೆ ನಿಲ್ಲುವವರೆಗೂ, ಶೋಷಿತ ವರ್ಗಕ್ಕೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿಲ್ಲದು! #CongressLootsKarnataka#SCSPTSP #SocialJustice #FundsMisuse #JusticeForDalits
1
1
3
93
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು, ಒಳಮೀಸಲಾತಿ ಸಮರ್ಪಕ ಜಾರಿ ಹಾಗೂ SCSP/TSP ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವ ಗಂಭೀರ ವಿಷಯಗಳ ಕುರಿತು ಚರ್ಚಿಸಲು ಕೂಡಲೇ ಸಮುದಾಯದ ನಾಯಕರ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಆಗ್ರಹಿಸಿದ್ದೇನೆ. ಸಮುದಾಯದ ಹಕ್ಕುಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಲಿ. #ಒಳಮೀಸಲಾತಿ #SocialJustice #InternalReservation #SCSPTSP #DalitRights #Equality #KarnatakaPolitics
1
2
99
ಶೋಷಿತರ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರವಿರಲಿ! ✊ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ 39 ಸಾವಿರ ಕೋಟಿ ರೂಪಾಯಿಗಳನ್ನು ಕಳೆದ 3 ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರವು ತನ್ನ ದಲಿತ ವಿರೋಧಿ ಧೋರಣೆಯನ್ನು ನಿಲ್ಲಿಸಬೇಕು. ಬಜೆಟ್ ಅಂದರೆ ಅಂಕಿ-ಅಂಶಗಳ ಆಟವಲ್ಲ, ಅದು ಜನರ ಬದುಕು. ಕಳೆದ ಮೂರು ವರ್ಷಗಳಿಂದ ನೀವು ದಲಿತರ ಹಣವನ್ನು ಕಬಳಿಸಿ, ನಮಗೆ ಎಸಗುತ್ತಿರುವ ಅನ್ಯಾಯ ಸಾಕು. ಗ್ಯಾರಂಟಿ ಯೋಜನೆಗಳ ಹೊರೆ ಹೊರಲು ದಲಿತರ ಹಣ ಬೇಕೆ? ಈ ಸಾಲಿನ ಬಜೆಟ್‌ನಲ್ಲಿ ಒಂದು ರೂಪಾಯಿಯನ್ನೂ ಅನ್ಯ ಉದ್ದೇಶಕ್ಕೆ ಬಳಸಬಾರದು. ಇದು ನನ್ನ ಎಚ್ಚರಿಕೆ! ನಮ್ಮ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಬಳಕೆಯಾಗಬೇಕಾದ ಹಣವನ್ನು ರಾಜಕೀಯ ಲಾಭಕ್ಕೆ ಬಳಸುವುದು ಸರಿಯಲ್ಲ. #ದಲಿತ_ವಿರೋಧಿ_ಕಾಂಗ್ರೆಸ್ #SCSPTSP #KarnatakaBudget2026 #DalitVirodhiCongress #JusticeForDalits
1
5
87
Met with a @DalitRights Team along with @AdvRajendraPal Ji, National Chairman, @INCSCDept, @INCIndia. Held an important discussion on #SCSPTSP #Budget & alarming rise in #atrocities against #Dalits & #Adivasis across India. These issues demand urgent #accountability & #justice.
1
2
6
200
ಇದು 'ಸಾಮಾಜಿಕ ನ್ಯಾಯ'ವೋ ಅಥವಾ ಸಮುದಾಯಕ್ಕೆ ಎಸಗಿದ 'ಸಾಮಾಜಿಕ ವಂಚನೆ'ಯೋ? ಸನ್ಮಾನ್ಯ ಮುಖ್ಯಮಂತ್ರಿಗಳೇ, ಅಂಕಿ-ಅಂಶಗಳ ಮರೆಯಲ್ಲಿ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ SCSP/TSP ಯೋಜನೆಯ ನಿಧಿಯಿಂದ ಬರೋಬ್ಬರಿ ₹38,870.52 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ಅಕ್ಷಮ್ಯ ಅಪರಾಧ. ಇದು ಕೇವಲ ಬಜೆಟ್‌ನ ಹೊಂದಾಣಿಕೆಯಲ್ಲ, ಬದಲಿಗೆ ದಮನಿತ ಸಮುದಾಯಗಳ ಆಶೋತ್ತರಗಳ ಮೇಲೆ ಜನವಿರೋಧಿ ಕಾಂಗ್ರೆಸ್ ಸರ್ಕಾರ ಎಸಗಿದ ಅಕ್ಷಮ್ಯ ಅಪರಾಧ! ಪರಿಶಿಷ್ಟರ ಹಕ್ಕಿನ ಹಣಕ್ಕೆ ಕತ್ತರಿ: 2023-24ರಿಂದ 2025-26 ರವರೆಗೆ ಹಂತ ಹಂತವಾಗಿ ಸಾವಿರಾರು ಕೋಟಿ ಹಣವನ್ನು ಅನ್ಯ ಯೋಜನೆಗಳಿಗೆ ವರ್ಗಾಯಿಸಿ, ಸಮುದಾಯದ ಸರ್ವಾಂಗೀಣ ಪ್ರಗತಿಯನ್ನು ಕುಂಠಿತಗೊಳಿಸುತ್ತಿರುವುದು ನ್ಯಾಯವೇ? ಸಾಂವಿಧಾನಿಕ ಉಲ್ಲಂಘನೆ: ಸಂವಿಧಾನಬದ್ಧವಾಗಿ ಪರಿಶಿಷ್ಟರ ಏಳಿಗೆಗೆ ಬಳಕೆಯಾಗಬೇಕಿದ್ದ ವಿಶೇಷ ನಿಧಿಯನ್ನು ಸರ್ಕಾರದ 'ಆರ್ಥಿಕ ಹೊರೆ' ಇಳಿಸಿಕೊಳ್ಳಲು ಬಳಸುವುದು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾದ ನಡವಳಿಕೆ. ಅಸಹಾಯಕತೆಯ ದುರ್ಬಳಕೆ: ಬಡತನ ಮತ್ತು ಅಸಹಾಯಕತೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ. ಸಬಲೀಕರಣಕ್ಕೆ ಮೀಸಲಿಟ್ಟ ಹಣವನ್ನು ಜನಪ್ರಿಯ ಯೋಜನೆಗಳ ಹೆಸರಲ್ಲಿ ಲೂಟಿ ಮಾಡಬೇಡಿ. ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಾದರೂ SCSP/TSP ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಸುವ "ಅಕ್ರಮ ಹಾದಿ"ಯನ್ನು ಸರ್ಕಾರ ಬಿಡಬೇಕು. ಒಂದು ವೇಳೆ ಸಮುದಾಯದ ಭವಿಷ್ಯದ ಜೊತೆ ಮತ್ತೆ ಚೆಲ್ಲಾಟವಾಡಿದರೆ, ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನ್ಯಾಯಕ್ಕಾಗಿ ಸಮಸ್ತ ಪರಿಶಿಷ್ಟ ವರ್ಗಗಳ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ. ಇದು ಎಚ್ಚರಿಕೆಯ ಪತ್ರ ಮಾತ್ರವಲ್ಲ, ಶೋಷಿತ ಸಮುದಾಯದ ಆಕ್ರೋಶದ ದನಿ! #ದಲಿತವಿರೋಧಿ #SCSTRights #KarnatakaPolitics #BudgetBetrayal #CongressFailsKarnataka #CongressLootsKarnataka #SocialJustice #KarnatakaBudget #DalitWelfare #SCSPTSP #GovernmentFailure #PoliticalAccountability #JusticeForSCST #ConstitutionalRights
1
6
92
SCSP/TSP ಯೋಜನೆಗೆ ಮೀಸಲಿಟ್ಟಿದ್ದ ₹39,000 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ಮಾತ್ರವಲ್ಲ, ಪರಿಶಿಷ್ಟ ವರ್ಗಗಳ ಸಮುದಾಯದ ಪ್ರಗತಿಗೆ ವಂಚನೆ ಮಾಡಿದಂತಿದೆ. ಸಾವಿರಾರು ಕೋಟಿ ಹಣವನ್ನು ತನ್ನ 'ಗ್ಯಾರಂಟಿ' ಯೋಜನೆಗಳಿಗೆ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ. ಈ ಹಣವು ಕೇವಲ ಸಮುದಾಯದ ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಬಳಕೆಯಾಗಬೇಕಿತ್ತು. ಇದನ್ನು ಸಾರ್ವತ್ರಿಕ ಗ್ಯಾರಂಟಿಗಳಿಗೆ ಬಳಸುವುದರಿಂದ ಪರಿಶಿಷ್ಟ ವರ್ಗಗಳ ವಿಶೇಷ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ. "Targeted welfare" (ನಿರ್ದಿಷ್ಟ ಕಲ್ಯಾಣ) ಬದಲಿಗೆ "General welfare" (ಸಾಮಾನ್ಯ ಕಲ್ಯಾಣ) ಗೆ ಹಣ ಬಳಸುವುದು ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಪರಿಶಿಷ್ಟ ವರ್ಗಗಳ ಸಮುದಾಯದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸುವುದು 'ಸಾಮಾಜಿಕ ನ್ಯಾಯ'ಕ್ಕೆ ಮಾಡುವ ಅಪಚಾರ. ಕಾಂಗ್ರೆಸ್ ಸರ್ಕಾರವು ತಕ್ಷಣವೇ ಈ ವರ್ಗಾವಣೆಯನ್ನು ನಿಲ್ಲಿಸಿ, ಪರಿಶಿಷ್ಟ ವರ್ಗಗಳ ಸಮುದಾಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸುತ್ತೇನೆ. #ಸಾಮಾಜಿಕಅನ್ಯಾಯ #SCSPTSP #CongressFailsKarnataka #CongressLootsKarnataka #CongressAgainstDalits #Karnataka #DalitWelfare #PoliticalInjustice #EqualRights #SCSPTSPFunds
1
1
3
46