ದಾವಣಗೆರೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ
ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಬರುವ ಅಂಡರ್ ಪಾಸ್ ಸೇತುವೆಯು ಎಸ್ ಎಸ್ ಹೈಟೆಕ್ ಆಸ್ಪತ್ರೆ ಮುಖ್ಯ ದ್ವಾರದ ಬಳಿ ಬರುವ ಕಾರಣ ಈ ಸ್ಥಳದಲ್ಲಿ ಭಾರಿ ವಾಹನಗಳು ಕೆಳ ಸೇತುವೆಯಲ್ಲಿ ಸಂಚರಿಸುವುದು ದುಸ್ಥರವಾಗಿದೆ.
ಹೊಸ ಕುಂದವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48 ರ ಅಂಡರ್ ಪಾಸ್ ಸೇತುವೆಯ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಬೇಕು.
ಹೆಬ್ಬಾಳು ಟೋಲ್ ನಲ್ಲಿ ಸಿಸಿ ಕ್ಯಾಮರಾ ಹಾಗೂ ಟೋಲ್ ನ ಎರಡೂ ಕಡೆ ಚಿತ್ರೀಕರಣ ಮಾಡಿಕೊಳ್ಳುವ ಉತ್ತಮಗುಣಮಟ್ಟದ ಕ್ಯಾಮರಾ ಹಾಗೂ ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು
#NH48 #RoadSafety #UnderpassIssue #CCTVInstallation