ಕಳೆದ ಮೂರು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ವಕಾಲತ್ತು ವಹಿಸಿ, ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೆ ಕೊಟ್ಟು, ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರು, ಈಗ ಮಂತ್ರಿ ಸ್ಥಾನ ಸಿಗದ ಹತಾಶೆಯಿಂದ ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ. ನನ್ನನ್ನು ಬೈದರೆ, ತೇಜೋವಧೆ ಮಾಡಿದರೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ಆಸೆಯಿಂದ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಮೂರು ವರ್ಷಗಳ ನಿರಂತರ ಅಚಲ ಸ್ವಾಮಿನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ನನ್ನನ್ನು ಬೈದಿದ್ದಕ್ಕಾದರೂ ಡಿ.ಕೆ.ಶಿವಕುಮಾರ್ ಅವರು ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲಿ ಎಂದು ಆಶಿಸುತ್ತೇನೆ. ಮಂತ್ರಿ ಸ್ಥಾನ ಸಿಕ್ಕಮೇಲಾದರೂ ಆ ಮಾಗಡಿ ರಂಗನಾಥ ಸ್ವಾಮಿ ಬಾಲಕೃಷ್ಣ ಅವರಿಗೆ ಸದ್ಬುದ್ಧಿ ಕೊಡಲಿ, ಆಚಾರವಿಲ್ಲದ ಅವರ ನಾಲಿಗೆಗೆ ಸ್ವಲ್ಪ ಸದಾಚಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
@HC_Balakrishna