Joined October 2014
12,248 Photos and videos
Pinned Tweet
2 Sep 2025
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/02/…
128
338
1,802
194,147
ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಈ ದಿನ ಬೆಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿ, ಶುಭಾಶಯ ಕೋರಿದೆ. ಅವರ ಅವರ ಸುದೀರ್ಘ ರಾಜಕೀಯ ಅನುಭವ ಹಾಗೂ ನಾಯಕತ್ವವು ದೇಶಕ್ಕೆ ಸದಾ ಮಾರ್ಗದರ್ಶಕ. @kharge
1
6
128
1,329
ರಕ್ತದಾನ ಎನ್ನುವುದು ಕೇವಲ ದಾನವಲ್ಲ, ಅದು ಮತ್ತೊಬ್ಬರ ಬದುಕಿಗೆ ಹೊಸ ಉಸಿರು ನೀಡುವ ಮಾನವೀಯತೆಯ ಮಹಾದಾನ. ಒಂದು ಯೂನಿಟ್ ರಕ್ತವು ಅಪಘಾತಕ್ಕೊಳಗಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು, ಹೆರಿಗೆ ತಾಯಂದಿರು, ಥಲಸೆಮಿಯಾ ಹಾಗೂ ಕ್ಯಾನ್ಸರ್ ರೋಗಿಗಳು ಸೇರಿದಂತೆ ಹಲವರ ಜೀವ ಉಳಿಸಲು ನೆರವಾಗುತ್ತದೆ. ಅಂತಾರಾಷ್ಟ್ರೀಯ ರಕ್ತದಾನಿಗಳ ದಿನದಂದು ಸ್ವಯಂಪ್ರೇರಿತ ರಕ್ತದಾನ ಮಾಡಿ ಜೀವ ಉಳಿಸುವ ಈ ಮಹತ್ಕಾರ್ಯದಲ್ಲಿ ಭಾಗಿಯಾಗೋಣ. ರಕ್ತದಾನ ಮಾಡುವ ಪ್ರತಿಯೊಬ್ಬರೂ ಸಮಾಜದ ನಿಜವಾದ ಜೀವದಾತರು. ರಕ್ತದಾನ ಮಾಡಿ... ಜೀವದಾನ ಮಾಡಿ! #WorldBloodDonorDay #ರಕ್ತದಾನಮಹಾದಾನ
3
29
556
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿದ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದೆ. ಈ ವೇಳೆ ವಿವಿಧ ಪ್ರಮುಖ ವಿಷಯಗಳ ಕುರಿತು ಸಮಾಲೋಚಿಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದ್ದು, ಆಡಳಿತದಲ್ಲಿ ಮತ್ತಷ್ಟು ವೇಗ ಮತ್ತು ಪಾರದರ್ಶಕತೆ ತರಲು ಈ ಸಭೆ ದಿಕ್ಸೂಚಿಯಾಗಲಿದೆ. @DKShivakumar
2
5
125
3,149
ಕ್ಷೀರ ಕ್ರಾಂತಿಯತ್ತ ವಿಜಯಪುರ: ರೈತರ ಆದಾಯ ಹೆಚ್ಚಿಸುವ ಹೊಸ ಹೆಜ್ಜೆ ವಿಜಯಪುರ ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ನಮ್ಮ ಪ್ರಯತ್ನಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ನಮ್ಮ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯ ಕಲ್ಪಫೌಂಡೇಶನ್ ಗಳ ಸಹಯೋಗದಲ್ಲಿ ಸುಸ್ಥಿರ ಹೈನುಗಾರಿಕೆ ತೋಟಗಾರಿಕೆಯನ್ನು ಉತ್ತೇಜಿಸುವ ‘ಕ್ಷೀರ ಪೈಲಟ್ ಯೋಜನೆ’ ಯಶಸ್ವಿಯಾಗಿ ಮುಂದುವರೆದಿದೆ. #ಬಬಲೇಶ್ವರ ಹಾಗೂ #ತಿಕೋಟಾ ತಾಲ್ಲೂಕುಗಳಿಂದ ಆಯ್ಕೆಯಾದ 20 ರೈತರ ತಂಡವು ಐದು ದಿನಗಳ ವಿಶೇಷ ತರಬೇತಿಗಾಗಿ ತಿಪಟೂರಿಗೆ ತೆರಳಿರುವುದು ಸಂತಸದ ಸಂಗತಿಯಾಗಿದೆ. ಆಧುನಿಕ ಹೈನುಗಾರಿಕೆ, ವೈಜ್ಞಾನಿಕ ಪಶುಪಾಲನೆ, ತಳಿಗಳ ನಿರ್ವಹಣೆ, ಹಾಲು ಉತ್ಪಾದನೆ ಹೆಚ್ಚಿಸುವ ವಿಧಾನಗಳು ಹಾಗೂ ಯಶಸ್ವಿ ಮಾದರಿಗಳ ನೇರ ಅಧ್ಯಯನದ ಮೂಲಕ ನಮ್ಮ ರೈತರು ಹೊಸ ಜ್ಞಾನ ಮತ್ತು ಅನುಭವವನ್ನು ಸಂಪಾದಿಸುತ್ತಿದ್ದಾರೆ. ನಮ್ಮ ಗುರಿ ಕೇವಲ ತರಬೇತಿ ನೀಡುವುದಲ್ಲ; ರೈತರ ಜೀವನಮಟ್ಟವನ್ನು ಸುಧಾರಿಸುವುದು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಹಾಗೂ ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ಸುಸ್ಥಿರ ಆದಾಯದ ಮೂಲವನ್ನಾಗಿ ಪರಿವರ್ತಿಸುವುದಾಗಿದೆ. ಈ ನಿಟ್ಟಿನಲ್ಲಿ ನಾಗರಾಳ ಗ್ರಾಮದ ರೈತ ಶ್ರೀ ರಾಜು ಅವರ ಯಶೋಗಾಥೆ ಅತ್ಯಂತ ಸ್ಪೂರ್ತಿದಾಯಕವಾಗಿದೆ. ನಮ್ಮ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರಾದ ಇವರು, ಯೋಜನೆ ಆರಂಭವಾಗುವ ಮೊದಲು ತಿಂಗಳಿಗೆ ₹48,000 ರಿಂದ ₹52,000ರಷ್ಟು ಆದಾಯ ಗಳಿಸುತ್ತಿದ್ದರು. ಕಳೆದ ಆರು ತಿಂಗಳಿನಿಂದ ನೀಡಲಾದ ನಿರಂತರ ಮಾರ್ಗದರ್ಶನ, ತಾಂತ್ರಿಕ ನೆರವು ಹಾಗೂ ಯೋಜನೆಯಡಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿ ಇಂದು ಅವರ ಕುಟುಂಬದ ಆದಾಯದಲ್ಲಿ ಗಮನಾರ್ಹ ಏರಿಕೆಯಾಗಿದೆ. ಕಳೆದ ಎರಡು ತಿಂಗಳುಗಳಿಂದ ತಿಂಗಳಿಗೆ ₹1 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಈ ಸಾಧನೆಯು ನಮ್ಮ ಯೋಜನೆಯ ಪರಿಣಾಮಕಾರಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಗ್ರಾಮೀಣ ರೈತ ಕುಟುಂಬಗಳ ಆರ್ಥಿಕ ಸಬಲೀಕರಣದ ಕುರಿತ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಇದೇ ವರ್ಷದ ನವೆಂಬರ್ ವೇಳೆಗೆ ಕನಿಷ್ಠ 30 ರೈತರು ತಿಂಗಳಿಗೆ ₹1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಗಳಿಸುವಂತಾಗಬೇಕು ಎಂಬುದು ನಮ್ಮ ಗುರಿಯಾಗಿದೆ. ಇದನ್ನು ಸಾಕಾರಗೊಳಿಸಲು ನಮ್ಮ BLDE ಹಾಗೂ ಅಕ್ಷಯಕಲ್ಪ ತಂಡ ಸಂಪೂರ್ಣ ಬದ್ಧತೆಯಿಂದ ರೈತರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ನಿಡೋಣಿ ಸಮೀಪ ಅಕ್ಷಯಕಲ್ಪ, ಕೃಷಿಕಲ್ಪ ಫೌಂಡೇಶನ್ ಗಳ ಮೂಲಕ ಆಧುನಿಕ ಹೈನುಗಾರಿಕೆ ಕುರಿತಂತೆ ತರಬೇತಿ ನೀಡಲಾಗುವುದು. ಅದರೊಂದಿಗೆ ಜ್ಞಾನ, ತಂತ್ರಜ್ಞಾನ ಮತ್ತು ಪರಿಶ್ರಮದ ಸಮನ್ವಯದಿಂದ ವಿಜಯಪುರದ ರೈತರನ್ನು ಆದಾಯ ಕ್ರಾಂತಿಯ ಮುಂಚೂಣಿಗೆ ತರುವುದು ನಮ್ಮ ಉದ್ದೇಶವಾಗಿದೆ. #ಕ್ಷೀರ
1
25
990
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಕರ್ನಾಟಕಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬುವ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ನಿಮ್ಮ ರಾಜಕೀಯ ಪಯಣ, ಸಾಮಾಜಿಕ ನ್ಯಾಯದ ಪರ ಅಚಲ ಬದ್ಧತೆ, ಶೋಷಿತರ ಧ್ವನಿಯಾಗಿ ನಡೆಸಿದ ಹೋರಾಟ, ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ತೋರಿದ ಅಪ್ರತಿಮ ನಿಷ್ಠೆ ಮತ್ತು ಅನೇಕ ದಶಕಗಳ ನಿಷ್ಕಳಂಕ ಸಾರ್ವಜನಿಕ ಜೀವನ ಇಂದು ದೇಶದ ರಾಜಕಾರಣಕ್ಕೆ ಮಾದರಿಯಾಗಿದೆ. ನ್ಯಾಯಪಾಲನೆಯಿಂದ ಸಂಸತ್ತಿನವರೆಗೆ, ಗ್ರಾಮೀಣ ಕರ್ನಾಟಕದಿಂದ ರಾಷ್ಟ್ರೀಯ ನಾಯಕತ್ವದವರೆಗೆ ನೀವು ನಡೆದು ಬಂದ ದಾರಿ ಕೇವಲ ರಾಜಕೀಯ ಯಶೋಗಾಥೆಯಲ್ಲ; ಅದು ಪರಿಶ್ರಮ, ತ್ಯಾಗ, ಸೈದ್ಧಾಂತಿಕ ಬದ್ಧತೆ ಹಾಗೂ ಜನಸೇವೆಯ ಜೀವಂತ ಪಾಠವಾಗಿದೆ. ನಿಮ್ಮ ಮಾರ್ಗದರ್ಶನವು ಪಕ್ಷಕ್ಕೂ, ರಾಜ್ಯಕ್ಕೂ ಹಾಗೂ ದೇಶಕ್ಕೂ ನಿರಂತರ ಶಕ್ತಿಯಾಗಿ ಮುಂದುವರಿಯಲಿ. @INCIndia @INCKarnataka @kharge
2
3
101
1,135
ಹಿರಿಯರು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿ.ಸಿ. ನಾಗಠಾಣ ಅವರು ನನ್ನ ಹಾಗೂ ಪೂಜ್ಯ ತಂದೆಯವರ ಬಗ್ಗೆ ವ್ಯಕ್ತಪಡಿಸಿದ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ನುಡಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. #ಅಭಿನಂದನಾಸಮಾರಂಭ
1
6
39
793
ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು, ದುಡಿಮೆಯ ಭಾರ ಇರಬಾರದು! ಇಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಬಾಲ್ಯವೆಂದರೆ ಶಿಕ್ಷಣ, ಕನಸು ಮತ್ತು ಸಂತೋಷದಿಂದ ಬೆಳೆಯುವ ಸಮಯ. ಆದರೆ ಇನ್ನೂ ಅನೇಕ ಮಕ್ಕಳು ಬಡತನ ಮತ್ತು ಶೋಷಣೆಯಿಂದ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ರಾಷ್ಟ್ರದ ಭವಿಷ್ಯ ಅದರ ಮಕ್ಕಳಲ್ಲಿದೆ. ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಘನತೆಯಿಂದ ಬದುಕುವ ಹಕ್ಕಿದೆ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಬಾಲ್ಯ ಉಳಿದರೆ ಭವಿಷ್ಯ ಉಳಿಯುತ್ತದೆ. ಮಕ್ಕಳ ಕೈಗೆ ಕೆಲಸವಲ್ಲ, ಶಿಕ್ಷಣದ ಬೆಳಕು ನೀಡೋಣ. #ವಿಶ್ವಬಾಲಕಾರ್ಮಿಕವಿರೋಧಿದಿನ
3
1
20
375
The Bengaluru–Shivamogga flight service is a vital lifeline for Malenadu and Central Karnataka, driving tourism, trade, agriculture and industrial growth. Have urged the Union Government to bring the Bengaluru–Shivamogga route back under the #UDAN scheme and extend the necessary support for the early restoration of flight operations. This crucial air link will greatly benefit passengers, businesses and the overall development of the region.
ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರಕ್ಕೆ ಪತ್ರ ಬೆಂಗಳೂರು–ಶಿವಮೊಗ್ಗ ವಿಮಾನ ಸೇವೆಯನ್ನು ಉಡಾನ್ ಯೋಜನೆಯ ಮುಂದಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಿ ಪುನರಾರಂಭಗೊಳಿಸುವಂತೆ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣವು 2023ರಲ್ಲಿ ಕಾರ್ಯಾರಂಭ ಮಾಡಿತು. ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು. ಕೆಲ ತಿಂಗಳಿನಿಂದ ಇದು ಸ್ಥಗಿತಗೊಂಡಿದ್ದು, ತೊಂದರೆಯಾಗಿದೆ. ಈ ಸೇವೆಯ ಪುನರಾರಂಭವು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ, ಉಡಾನ್ ಯೋಜನೆಯಡಿ ಈ ಮಾರ್ಗವನ್ನು ಸೇರ್ಪಡೆಗೊಳಿಸಿ ಶೀಘ್ರದಲ್ಲೇ ವಿಮಾನ ಸೇವೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. @RamMNK #Udan #ಉಡಾನ್
1
8
32
1,336
ನಮ್ಮ ಪಕ್ಷದ ಹಿರಿಯ ನಾಯಕರು, ರಾಜ್ಯ ಜಲಸಂಪನ್ಮೂಲ ಇಲಾಖೆಯ ಸಚಿವರು, ಆತ್ಮೀಯರೂ ಆದ ಶ್ರೀ @RLR_BTM ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಹಾಗೂ ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ಕರುಣಿಲಿ ಎಂದು ಪ್ರಾರ್ಥಿಸುತ್ತೇನೆ.
1
4
74
1,175
ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಜನಸ್ನೇಹಿ ಆಡಳಿತದತ್ತ ದಿಟ್ಟ ಹೆಜ್ಜೆ ಕರ್ನಾಟಕವನ್ನು ಇನ್ನಷ್ಟು ಉದ್ಯಮ ಸ್ನೇಹಿ ರಾಜ್ಯವನ್ನಾಗಿ ರೂಪಿಸುವ ನಮ್ಮ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ. ಅದರ ಭಾಗವಾಗಿ, KIADBಯ ಭೂಸ್ವಾಧೀನದಿಂದ ಕೈಗಾರಿಕಾ ನಿವೇಶನ ಮಂಜೂರಾತಿವರೆಗಿನ ಎಲ್ಲಾ ಪ್ರಕ್ರಿಯೆಗಳು ಮತ್ತು ದಾಖಲೆಗಳನ್ನು ಮುಂದಿನ 100 ದಿನಗಳೊಳಗೆ ಸಂಪೂರ್ಣ ಡಿಜಿಟಲೀಕರಣ ಮಾಡಲಿದ್ದೇವೆ. ಇದು ಕೇವಲ ತಂತ್ರಜ್ಞಾನದ ಅಳವಡಿಕೆಯಲ್ಲ, ಆಡಳಿತದಲ್ಲಿ ಪಾರದರ್ಶಕತೆ, ವೇಗ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ. ಎಲ್ಲಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಹೂಡಿಕೆದಾರರಿಗೆ ಸುಗಮ ಸೇವೆ, ರೈತರಿಗೆ ಸ್ಪಷ್ಟ ಮಾಹಿತಿ ಹಾಗೂ ಆಡಳಿತದಲ್ಲಿ ಹೆಚ್ಚಿನ ಉತ್ತರದಾಯಿತ್ವವನ್ನು ಖಾತ್ರಿಪಡಿಸುತ್ತಿದ್ದೇವೆ. ಈ ಕ್ರಮ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡುವುದರ ಜೊತೆಗೆ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ. #InvestKarnataka #KIADB
1
20
527
ಕೆರೆ ತುಂಬುವ ಹಾಗೂ ನೀರಾವರಿ ಯೋಜನೆಗಳ ಯಶಸ್ಸಿನ ಫಲ - ಬಿರು ಬೇಸಿಗೆಯಲ್ಲೂ ಚಿಮ್ಮುತ್ತಿದೆ ನೀರು! ಒಂದು ಕಾಲದಲ್ಲಿ ವಿಜಯಪುರ ಭಾಗದಲ್ಲಿ 800 ರಿಂದ 1000 ಅಡಿ ಆಳಕ್ಕೆ ಬೋರ್ವೆಲ್ ಕೊರೆಸಿದರೂ ನೀರು ಸಿಗುವುದು ಕಷ್ಟವಾಗಿತ್ತು. ಆದರೆ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ ಪರಿಣಾಮ ಇಂದು ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಯಥೇಚ್ಛವಾಗಿ ನೀರು ದೊರೆಯುತ್ತಿದೆ. ಬಬಲೇಶ್ವರ ತಾಲ್ಲೂಕಿನ ಗುಣದಾಳು ಗ್ರಾಮದ ಶ್ರೀ ಅಶೋಕ ಶಂಕರ ಜಗತಾಪ್ಪ ಅವರ ತೋಟದಲ್ಲಿ #ಗಂಗಾಕಲ್ಯಾಣ ಯೋಜನೆಯಡಿ ಕೊರೆಸಿದ ಬೋರ್ ವೆಲ್ ನಿಂದ ಸಮೃದ್ಧವಾಗಿ ನೀರು ದೊರೆತಿದ್ದು, ಅವರು ಸಂತಸಗೊಂಡಿದ್ದಾರೆ. ಇದು ನೀರಾವರಿ ಯೋಜನೆಗಳ ಯಶಸ್ಸಿಗೆ ಮತ್ತೊಂದು ಸಾಕ್ಷಿಯಾಗಿದ್ದು, ನಮ್ಮೆಲ್ಲ ರೈತರ ಕೃಷಿ ಚಟುವಟಿಕೆಗಳು ಇನ್ನಷ್ಟು ಸಮೃದ್ಧಿಯಾಗಲಿ, ನಾಡು ಸುಭಿಕ್ಷವಾಗಲಿ ಎಂಬುದೇ ನಮ್ಮ ಆಶಯ.
2
12
111
4,418
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಮನ್ಸೂರ್ ಅಲಿ ಖಾನ್, ಶ್ರೀ ಪವನ್ ಖೆರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಆಯ್ಕೆ ದೇಶದ ಹಿತಾಸಕ್ತಿ ಹಾಗೂ ಕನ್ನಡಿಗರ ಧ್ವನಿ ಸಂಸತ್ತಿನಲ್ಲಿ ಮತ್ತಷ್ಟು ಪ್ರತಿಧ್ವನಿಸುವ ನಂಬಿಕೆ ಹುಟ್ಟಿಸಿದೆ. @kharge @MansoorKhanINC @Pawankhera
2
11
86
1,322
ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರಕ್ಕೆ ಪತ್ರ ಬೆಂಗಳೂರು–ಶಿವಮೊಗ್ಗ ವಿಮಾನ ಸೇವೆಯನ್ನು ಉಡಾನ್ ಯೋಜನೆಯ ಮುಂದಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಿ ಪುನರಾರಂಭಗೊಳಿಸುವಂತೆ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣವು 2023ರಲ್ಲಿ ಕಾರ್ಯಾರಂಭ ಮಾಡಿತು. ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು. ಕೆಲ ತಿಂಗಳಿನಿಂದ ಇದು ಸ್ಥಗಿತಗೊಂಡಿದ್ದು, ತೊಂದರೆಯಾಗಿದೆ. ಈ ಸೇವೆಯ ಪುನರಾರಂಭವು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ, ಉಡಾನ್ ಯೋಜನೆಯಡಿ ಈ ಮಾರ್ಗವನ್ನು ಸೇರ್ಪಡೆಗೊಳಿಸಿ ಶೀಘ್ರದಲ್ಲೇ ವಿಮಾನ ಸೇವೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. @RamMNK #Udan #ಉಡಾನ್
3
6
81
5,191
ನಮ್ಮೆಲ್ಲ ಜನತೆಯ ವಿಶ್ವಾಸವೇ ನನ್ನ ಸಂಪತ್ತು: ಜನಸೇವೆಯೇ ನನ್ನ ಸಂಕಲ್ಪ ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಪಯಣ ಇನ್ನಷ್ಟು ವೇಗ ಪಡೆಯಲಿದೆ. ರೈತರ ಸಮೃದ್ಧಿ, ಯುವಕರ ಉದ್ಯೋಗ ಮತ್ತು ಜಿಲ್ಲೆಯ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ನಿರಂತರವಾಗಿರಲಿದೆ. ಜನಸೇವೆಯೇ ನನ್ನ ಧರ್ಮ, ಅಭಿವೃದ್ಧಿಯೇ ನನ್ನ ಧ್ಯೇಯ. #ಅಭಿನಂದನಾಸಮಾರಂಭ
1
5
36
601
Transforming KIADB Through Technology and Transparency: 100-Day Deadline Set I have directed KIADB to complete the digitisation of all plot-related records within 100 days. This initiative will bring complete transparency in land acquisition, allotment, compensation, court cases, investor timelines, industries operating on plots, investments, and employment generation. The digitised records will help farmers, industrial investors, and officials access reliable information from anywhere, while preserving old records securely and eliminating dependence on paper files. We will also integrate this system with the Rural Development Department’s e-Swathu platform to simplify services such as e-Khata and related processes. Our goal is clear: a faster, transparent, investor-friendly, and farmer-sensitive #KIADB.
1
6
42
911
KIADB ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ: 100 ದಿನಗಳ ಗಡುವು! ಕೈಗಾರಿಕಾ ವಲಯದಲ್ಲಿ ಪಾರದರ್ಶಕತೆ ತರಲು KIADB ಭೂಸ್ವಾಧೀನ ಮತ್ತು ನಿವೇಶನ ಹಂಚಿಕೆಯ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲ್ ರೂಪಕ್ಕೆ ತರಲು ಸೂಚಿಸಲಾಗಿದೆ. • 77 ಕಾಲಂಗಳಲ್ಲಿ ಮಾಹಿತಿ: ಪ್ರತಿಯೊಂದು ನಿವೇಶನದ ಸಂಪೂರ್ಣ ವಿವರ ಇನ್ನು ಮುಂದೆ ಕ್ಷಣಾರ್ಧದಲ್ಲಿ ಲಭ್ಯ. • ಮಧ್ಯವರ್ತಿಗಳ ಕಾಟಕ್ಕೆ ಬ್ರೇಕ್: ಹೂಡಿಕೆದಾರರು ಇದ್ದಲ್ಲಿಂದಲೇ ನೇರ ಮಾಹಿತಿ ಪಡೆಯಬಹುದು; ಅಕ್ರಮಗಳಿಗೆ ಸಂಪೂರ್ಣ ತೆರೆ. • ಇ-ಸ್ವತ್ತು ಜೋಡಣೆ: ಹಂಚಿಕೆ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆಯ 'ಇ-ಸ್ವತ್ತು' ತಂತ್ರಾಂಶಕ್ಕೆ ಜೋಡಿಸುವ ಮೂಲಕ 'ಇ-ಖಾತಾ' ಪ್ರಕ್ರಿಯೆ ಸರಳಗೊಳ್ಳಲಿದೆ. KIADB ಅಂಕಿ-ಅಂಶ: 224 ಕೈಗಾರಿಕಾ ಪ್ರದೇಶಗಳು | 92,824 ಎಕರೆ ಅಭಿವೃದ್ಧಿ | 25,422 ಸಂಸ್ಥೆಗಳಿಗೆ ನಿವೇಶನ ಹಂಚಿಕೆ. #KIADB
2
8
30
831
ಕೆ-ಸಿಇಟಿ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಾರ್ಕಬ್ಬಿನಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿ ಗಂಗಾಧರ ಮುತ್ತಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಒಂದು ಎಕರೆ ಜಮೀನು ಹೊಂದಿರುವ ರೈತ ಕುಟುಂಬದ ಮಗನಾಗಿ, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕೆ-ಸಿಇಟಿ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿ, ವೆಟರ್ನರಿ ವಿಭಾಗದಲ್ಲಿ ಸ್ಪಾಟ್ 0.5 ರ್ಯಾಂಕ್ ಹಾಗೂ ಕೃಷಿ ವಿಭಾಗದಲ್ಲಿ ಸ್ಪಾಟ್ 3.5 ರ್ಯಾಂಕ್ ಗಳಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ತಾಂತ್ರಿಕ ಕಾರಣಗಳಿಂದ ಫಲಿತಾಂಶ ವಿಳಂಬವಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ತನ್ನ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ರಾಜ್ಯದ ಗಮನ ಸೆಳೆದಿರುವ ಗಂಗಾಧರ ಅವರ ಸಾಧನೆ ಗ್ರಾಮೀಣ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಗಾರೆ ಕೆಲಸ ಮಾಡಿ ಕುಟುಂಬವನ್ನು ಸಾಗಿಸುವ ತಂದೆಯ ಶ್ರಮ, ರೈತನ ಬದುಕಿನ ಸಂಕಷ್ಟಗಳು ಹಾಗೂ ಮಗನ ಅಚಲ ಸಂಕಲ್ಪ ಒಂದಾಗಿ ಸಾಧನೆಯ ಶಿಖರವನ್ನು ತಲುಪಬಹುದು ಎಂಬುದಕ್ಕೆ ಗಂಗಾಧರ ಮುತ್ತಗಿ ಜೀವಂತ ಉದಾಹರಣೆ. ಈ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನ ಮತ್ತಷ್ಟು ಯಶಸ್ಸು, ಕೀರ್ತಿ ಹಾಗೂ ಸಾಧನೆಗಳಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ನಾಡಿನ ರೈತ ಸಮುದಾಯಕ್ಕೆ ಮತ್ತು ವಿಜಯಪುರ ಜಿಲ್ಲೆಗೆ ಹೆಮ್ಮೆ ತಂದಿರುವ ಈ ಯುವ ಪ್ರತಿಭೆಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. #KCET #kcetexam #ಬಸವನಬಾಗೇವಾಡಿ
2
9
112
3,445
ನೂರು ದಿನಗಳಲ್ಲಿ ಕೆಐಎಡಿಬಿ ಸಂಪೂರ್ಣ ಡಿಜಿಟಲೀಕರಣ ಪಾರದರ್ಶಕ, ವೇಗದ ಮತ್ತು ಜನಸ್ನೇಹಿ ಆಡಳಿತದತ್ತ ಮಹತ್ವದ ಹೆಜ್ಜೆ! ಸರ್ಕಾರದ ಕಚೇರಿಗಳಿಗೆ ಜನರು ಅಲೆದಾಡುವ ಕಾಲ ಮುಗಿಯಬೇಕು. ತಂತ್ರಜ್ಞಾನವೇ ಪಾರದರ್ಶಕತೆ, ವೇಗ ಮತ್ತು ವಿಶ್ವಾಸದ ಆಧಾರವಾಗಬೇಕು ಎಂಬ ದೃಢ ನಂಬಿಕೆ ನನ್ನದು. ಅದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB)ಯಲ್ಲಿ ಭೂಸ್ವಾಧೀನದಿಂದ ಆರಂಭಿಸಿ ಕೈಗಾರಿಕಾ ನಿವೇಶನ ಮಂಜೂರಾತಿಯವರೆಗಿನ ಪ್ರತಿಯೊಂದು ಪ್ರಕ್ರಿಯೆಯನ್ನು ಮುಂದಿನ 100 ದಿನಗಳಲ್ಲಿ ಸಂಪೂರ್ಣ ಡಿಜಿಟಲೀಕರಣಗೊಳಿಸಲು ಕಟ್ಟುನಿಟ್ಟಿನ ಗಡುವು ನಿಗದಿಪಡಿಸಿದ್ದೇನೆ. ಈ ನಿಟ್ಟಿನಲ್ಲಿ ರೈತರು, ಉದ್ಯಮಿಗಳು ಮತ್ತು ಹೂಡಿಕೆದಾರರು ಒಂದೇ ಕ್ಲಿಕ್ ನಲ್ಲಿ ಅಗತ್ಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿವೇಶನಗಳ ಸ್ಥಿತಿಗತಿ, ಹೂಡಿಕೆ, ಉದ್ಯೋಗ ಸೃಷ್ಟಿ, ಪರಿಹಾರ ವಿತರಣೆ, ನ್ಯಾಯಾಲಯದ ಪ್ರಕರಣಗಳು ಸೇರಿದಂತೆ ಎಲ್ಲ ಮಾಹಿತಿಯೂ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸುರಕ್ಷಿತವಾಗಿರಲಿದೆ. ಹಿಂದೆ ದಾಖಲೆಗಳ ಕೊರತೆ, ವಿಳಂಬ, ಗೊಂದಲ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಉಂಟಾಗುತ್ತಿದ್ದ ಸಮಸ್ಯೆಗಳಿಗೆ ಇದು ಶಾಶ್ವತ ಪರಿಹಾರವಾಗಲಿದೆ. ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಜನಸ್ನೇಹಿ ಆಡಳಿತದತ್ತ ಇದು ಒಂದು ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕವನ್ನು ದೇಶದ ಅತ್ಯಂತ ಹೂಡಿಕೆ ಸ್ನೇಹಿ ರಾಜ್ಯವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ, ಕೈಗಾರಿಕಾ ಇಲಾಖೆಯಲ್ಲಿ ಸುಧಾರಣೆಗಳ ಹೊಸ ಅಧ್ಯಾಯವನ್ನು ಆರಂಭಿಸಿದ್ದೇವೆ. ಕಡತಗಳ ರಾಶಿಯಿಂದ ಡಿಜಿಟಲ್ ಆಡಳಿತದತ್ತ, ವಿಳಂಬದಿಂದ ವೇಗದತ್ತ, ಅಸ್ಪಷ್ಟತೆಯಿಂದ ಸಂಪೂರ್ಣ ಪಾರದರ್ಶಕತೆಯತ್ತ ಸಾಗುವ ಈ ಪರಿವರ್ತನೆ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೊಸ ಶಕ್ತಿ ತುಂಬಲಿದೆ. ನಮ್ಮ ಸರ್ಕಾರ ಮಾತಿಗಿಂತ ಕಾರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತದೆ. 100 ದಿನಗಳೊಳಗೆ KIADBಯಲ್ಲಿ ಗುಣಾತ್ಮಕ ಬದಲಾವಣೆ ತಂದು, ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ಜನಸ್ನೇಹಿ ಆಡಳಿತದ ಹೊಸ ಮಾನದಂಡವನ್ನು ಸ್ಥಾಪಿಸುವತ್ತ ದೃಢ ಹೆಜ್ಜೆ ಇಟ್ಟಿದ್ದೇವೆ. #KIADB
3
10
83
1,995
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ (IDD)ಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ರಾಜ್ಯದ ರೈಲ್ವೆ ಯೋಜನೆಗಳು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಇತರೆ ಪ್ರಮುಖ ಮೂಲಸೌಲಭ್ಯ ಯೋಜನೆಗಳ ಪ್ರಗತಿ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಜೊತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳ ಅನುಷ್ಠಾನ ಸ್ಥಿತಿಯನ್ನು ಪರಿಶೀಲಿಸಿ, ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ಅಭಿಪ್ರಾಯ ವಿನಿಮಯ ನಡೆಸಲಾಯಿತು. ಯೋಜನೆಗಳನ್ನು ನಿಗದಿತ ಅವಧಿಯೊಳಗೆ ತ್ವರಿತ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. #IDD #bengalurusuburbanrailproject
2
11
66
1,883
ಟಾಟಾ ಮೋಟಾರ್ಸ್ ಸಂಸ್ಥೆಯ ಸರ್ಕಾರ ಮತ್ತು ಕಾರ್ಪೊರೇಟ್ ವಿಭಾಗದ ಗ್ಲೋಬಲ್ ಹೆಡ್ ಆಗಿರುವ ಶ್ರೀ ಸುಶಾಂತ್ ನಾಯಕ ಅವರು ಇಂದು ಸೌಜನ್ಯದ ಭೇಟಿಗಾಗಿ ಆಗಮಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ಅಭಿವೃದ್ಧಿ, ಹೂಡಿಕೆ ಅವಕಾಶಗಳು, ಇವಿ ವಾಹನ ಉತ್ಪಾದನೆ, ವಾಹನೋದ್ಯಮ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳು ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಾರ್ಥಕ ಚರ್ಚೆ ನಡೆಸಿದೆವು.
2
10
66
1,256