Minister for Major and Medium Irrigation - Karnataka | MLA - BTM Layout |

Joined September 2016
4,727 Photos and videos
ನವದೆಹಲಿಯಲ್ಲಿ ಇಂದು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ @CRPaatil ಅವರನ್ನು ಭೇಟಿಯಾಗಿ, ನಮ್ಮ ರಾಜ್ಯದ ಹಲವು ಪ್ರಮುಖ ನೀರಾವರಿ ಮತ್ತು ಬಾಕಿ ಇರುವ ಜಲಸಂಪನ್ಮೂಲ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಸವಿಸ್ತಾರವಾದ ಮನವಿಯನ್ನು ಸಲ್ಲಿಸಲಾಯಿತು. ರಾಜ್ಯದ ಕೋಟ್ಯಂತರ ರೈತರ ಕಲ್ಯಾಣ, ಕುಡಿಯುವ ನೀರಿನ ಭದ್ರತೆ ಹಾಗೂ ಬರ ಪರಿಹಾರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಮೇಕೆದಾಟು ಯೋಜನೆ, ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ (KWDT II) ತೀರ್ಪಿನ ಗೆಜೆಟ್ ಅಧಿಸೂಚನೆ, ಕಳಸಾ-ಬಂಡೂರಿ ಯೋಜನೆಗೆ ಅಗತ್ಯ ಅನುಮೋದನೆಗಳು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾಗಿದ್ದ ಬಾಕಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮತ್ತು ಕರ್ನಾಟಕದ ದೀರ್ಘಕಾಲೀನ ಅಭಿವೃದ್ಧಿಗೆ ಪೂರಕವಾಗಿರುವ ಈ ಎಲ್ಲಾ ಪ್ರಮುಖ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ, ಸಕಾಲದಲ್ಲಿ ಅಗತ್ಯ ಅನುಮತಿ ಹಾಗೂ ಬೆಂಬಲವನ್ನು ನೀಡಲಿದೆ ಎಂದು ಆಶಿಸುತ್ತೇನೆ. ನಮ್ಮ ನೆಲ, ಜಲ ಮತ್ತು ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಶ್ರೀ ಟಿಬಿ ಜಯಚಂದ್ರ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #KarnatakaWaterInterests #Mekedatu #UpperBhadra #KalasaBanduri #RamalingaReddy #DKShivakumar @DKShivakumar @JayachandraTB
3
10
149
8,041
ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಡೆ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಭಗವಂತ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #SurajHegde
2
4
9
1,170
ಕೆಪಿಸಿಸಿ (KPCC) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ, ಅವರಿಗೆ ಪುಷ್ಪಗುಚ್ಛ ನೀಡಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಇವರ ಸುದೀರ್ಘ ಸಾಂಸ್ಥಿಕ ಅನುಭವ ಮತ್ತು ಸಮರ್ಥ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ. ಅವರ ಮುಂದಿನ ಎಲ್ಲಾ ಜನಪರ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರವಿರಲಿದೆ. #RamalingaReddy #BKHariprasad #KPCCPresident #KarnatakaCongress #INC @HariprasadBK2
6
21
261
12,402
Ramalinga Reddy retweeted
ಬೆಂಗಳೂರು ಖಾತೆ ಕೊಡ್ತಿನಿ ಅಂತ ಹೇಳಿದ್ದೆ ಡಿಕೆಶಿ @RLR_BTM @DKShivakumar #RamalingaReddy #CMDKShivakumar #RamalingaReddyResignation #CabinetMinister #BengaluruDevelopmentMinistry #Newsfirstlive #Newsfirstkannada
2
5
12
2,722
ಐತಿಹಾಸಿಕ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಕಪ್ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. Congratulations to RCB on a historic and well-deserved second consecutive IPL championship title.🏆 #RamalingaReddy #RCB #Champions #EeSalaCupNamde #PlayBold #RoyalChallengersBengaluru #NammaRCB #Bengaluru #IPL
1
10
119
4,312
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ ರಾಧಾಕೃಷ್ಣನ್ ಅವರು ಇಂದು ಹೆಚ್.ಎ.ಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡು, ರಾಜ್ಯದ ಸಮಸ್ತ ಜನತೆಯ ಪರವಾಗಿ ಅವರಿಗೆ ಕರ್ನಾಟಕಕ್ಕೆ ಆದರದ ಸುಸ್ವಾಗತವನ್ನು ಕೋರಲಾಯಿತು. Had the distinct honor of receiving the Hon'ble Vice President of India, Sri CP Radhakrishnan, at the HAL Airport today. Extended a warm welcome to Karnataka on behalf of our people. #RamalingaReddy #RadhaKrishnan #VicePresidentOfIndia @CPR_VP @VPIndia
5
9
100
4,051
ನುಡಿದಂತೆ ನಡೆದ ನಾಯಕ, ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಜನಪರ ಆಡಳಿತಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರ ನಡೆ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ. ಸಾರಿಗೆ ಮತ್ತು ಮುಜರಾಯಿ ಸಚಿವನಾಗಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಅತ್ಯಮೂಲ್ಯವಾದದ್ದು. ಅವರು ಹಾಕಿಕೊಟ್ಟ ಜನಕಲ್ಯಾಣದ ಹಾದಿಯಲ್ಲೇ ನಮ್ಮ ಸರ್ಕಾರ ಮುನ್ನಡೆಯಲಿದೆ. ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಬಡವರ ಧ್ವನಿಯಾಗಿ ರಾಜ್ಯದಲ್ಲೇ ಉಳಿದು ಹೋರಾಡುವ ನಿಮ್ಮ ಸಂಕಲ್ಪ ನಮಗೆಲ್ಲರಿಗೂ ಪ್ರೇರಣೆ. #Siddaramaiah #RamalingaReddy #ThankYouCM #Karnataka @siddaramaiah
11
69
783
11,951
Wishing everyone a peaceful and joyful Eid al-Adha. Eid Mubarak! #RamalingaReddy #Bakrid
2
21
1,685
ಭಾರತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಕಳೆದ 10 ದಿನಗಳಲ್ಲಿ ಡೀಸೆಲ್ ಬೆಲೆ ಭೀಕರವಾಗಿ ₹7.81 ಹೆಚ್ಚಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಘೋರ ವೈಫಲ್ಯಕ್ಕೆ ಸಾಕ್ಷಿ. 🔺ಇದರ ಪರಿಣಾಮ ಕರ್ನಾಟಕ ರಾಜ್ಯ ಸಾರಿಗೆಗೆ ಬೀಳುತ್ತಿರುವ ಹೆಚ್ಚುವರಿ ಹೊರೆ: ತಿಂಗಳಿಗೆ: ₹40 ಕೋಟಿ ವರ್ಷಕ್ಕೆ: ₹480 ಕೋಟಿ ಜಾಗತಿಕ ತೈಲ ಬಿಕ್ಕಟ್ಟು ನಿರ್ವಹಣೆಯಲ್ಲಿ ಕೇಂದ್ರದ ವಿಫಲತೆಯು ಸಾಮಾನ್ಯ ಜನರಿಗೆ ಉಚಿತ ಹಾಗೂ ಕೈಗೆಟುಕುವ ಸಾರಿಗೆ ನೀಡುತ್ತಿರುವ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಕಂಗಾಲು ಮಾಡಿದೆ. 🔺ಈ ದರ ಏರಿಕೆ ಕೇವಲ ಬಸ್ಸುಗಳಿಗಷ್ಟೇ ಸೀಮಿತವಾಗಿಲ್ಲ. ಇಡೀ ದೇಶದ ಸರಕು ಸಾಗಣೆಯ ಬೆನ್ನೆಲುಬಾಗಿರುವ ಸಾರಿಗೆ ಲಾರಿಗಳ (Transport Lorries) ಮೇಲೂ ಇದು ಮಾರಕ ಹೊರೆ ಉಂಟುಮಾಡಿದೆ. ಲಾರಿ ಬಾಡಿಗೆಗಳು ಗಗನಕ್ಕೇರುತ್ತಿರುವುದರಿಂದ ತರಕಾರಿ, ಹಾಲು, ದಿನಸಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆಗಳು (Daily Goods Price) ಕೂಡಾ ತೀವ್ರವಾಗಿ ಏರಿಕೆಯಾಗಲಿವೆ. ಇತ್ತೀಚಿನ ಪಂಚ ರಾಜ್ಯಗಳ ಚುನಾವಣೆ ವೇಳೆ ತೈಲ ಬೆಲೆ ಏರಲ್ಲ ಎಂದು ಸುಳ್ಳು ಹೇಳಿ ಮತ ಪಡೆದ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಈಗ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ವಿಶ್ವಗುರು ಎಂದು ಸ್ವಯಂ ಘೋಷಿಸಿಕೊಂಡವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ರಿಯಾಯಿತಿ ದರದಲ್ಲಿ ಇಂಧನ ತರಲು ವಿಫಲರಾಗಿ, ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸುತ್ತಿದ್ದಾರೆ. ಪ್ರಧಾನಿ ಮೋದಿಯವರೇ, ಈ ಕೂಡಲೇ ಈ ಜನವಿರೋಧಿ "ಪೆಟ್ರೋಲ್-ಡೀಸೆಲ್ ದರ ಏರಿಕೆ"ಯನ್ನು ಹಿಂಪಡೆಯಿರಿ. ಇಲ್ಲದಿದ್ದರೆ ದೇಶದ ರೈತರು, ಲಾರಿ ಚಾಲಕರು ಹಾಗೂ ಜನಸಾಮಾನ್ಯರು ಒಟ್ಟಾಗಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. #RamalingaReddy #ModiDiplomacyFailure #DieselPriceHike #KSRTC #BMTC #KKRTC #NWKRTC #NarendraModi @narendramodi
14
2
17
1,792
ಮಾನ್ಯ ಶ್ರೀ @RAshokaBJP ‌ರವರೇ, ತಾವು ಟ್ಟೀಟ್ ಮಾಡಿದರೆ ಮಾತ್ರ ವಿರೋಧ ಪಕ್ಷದ ನಾಯಕರು ಎಂದು ಗುರುತಿಸುತ್ತಾರೆ ಎಂ‌ಬ ಕಲ್ಪನಾ ಲೋಕದಿಂದ ಹೊರ ಬನ್ನಿ.. ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ 11 ಬಾರಿ ಸಭೆಗಳನ್ನು ನಡೆಸಿದ್ದೇವೆ. 🔺 ಸಾರಿಗೆ ನೌಕರರಿಗೆ 12.5 % ವೇತನ‌ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ರೂ72.80 ಕೋಟಿ, ಪ್ರತಿ ವರ್ಷ ರೂ.873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. 🔺 ಈಗಾಗಲೇ ತಮ್ಮ ಪಕ್ಷದ ಆಡಳಿತದ ಅವಧಿಯ 2023 ರ ಮಾರ್ಚ್‌ ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ ರೂ. 1271.92 ಕೋಟಿಗಳಲ್ಲಿ ಮೊದಲ ಕಂತಿನ ಹಣ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. 🔺 ನಾನು ಈಗಾಗಲೇ ತಮ್ಮ ಮತ್ತು ತಮ್ಮ ಪಕ್ಷದ ಆಡಳಿತ ಅವಧಿಯ ಮಾಹಿತಿಯನ್ನು‌ ಅಂಕಿಅಂಶ‌ ಸಮೇತ ನೀಡಿರುವುದನ್ನು ಅವಗಾಹಿಸಿ. ಆದರೂ‌ ಮತ್ತೊಮ್ಮೆ ಈ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತಿದೆ. 🔺 ತಾವು ಸಾರಿಗೆ ಮಂತ್ರಿಯಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿ ಪ್ರಾರಂಭವಾಗಿದ್ದು. ಮುಷ್ಕರದ ಅವಧಿ ದಿನಾಂಕ: 13-09-2012 ಮತ್ತು 14-09-2012 🔺 ತಾವು ಸಾರಿಗೆ ಮಂತ್ರಿಗಳಾಗಿದ್ದಾಗ ನೌಕರರ ಸಂಘಟನೆಗಳು 35% ವೇತನ‌ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು, ತಾವು 10% ವೇತನ ಪರಿಷ್ಕರಣೆ ಮಾಡಿದ್ದೀರಿ ಎಂಬುದು ತಿಳಿದಿದಿಯೇ? 🔺 ತಮ್ಮದೇ ಬಿ.ಜೆ.ಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ‌ ಮುಷ್ಕರ ನಡೆದಿದ್ದು. ಎರಡೆರಡು ಬಾರಿ‌ ಮುಷ್ಕರ ನಡೆದದ್ದು. ದಿನಾಂಕ: 11-12-2020 ರಿಂದ 14-12-2020 ( ನಾಲ್ಕು ದಿವಸ) ಮತ್ತು 07-04-2021 ರಿಂದ 21-04-2021 ( ಹದಿನೈದು ದಿವಸ). 🔺 ತಮ್ಮ ಪಕ್ಷ ದ ಅವಧಿಯಲ್ಲಿ ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3500 ನೌಕರರನ್ನು‌ ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿ,‌ ಇಂದಿಗೂ ಅವರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ. 🔺 ತಮ್ಮದೇ ಬಿ.ಜೆ.ಪಿ ಸರ್ಕಾರವಿದ್ದಾಗ ಮಾರ್ಚಿ-2023 ರಲ್ಲಿ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿಯಿಟ್ಟು, ಈ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿರುವುದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ. 🔺 ತಮ್ಮ ಬಿ.ಜೆ.ಪಿ ಆಡಳಿತ ಅವಧಿಯಲ್ಲಿ ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳಿಗೂ ಸಹ ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ ಸಹ ನಮ್ಮ ಸರ್ಕಾರವು 2025 ರಲ್ಲಿ ಹಣ ಬಿಡುಗಡೆಗೊಳಿಸಿದೆ. 🔺 ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ ರೂ. 7130.80 ಕೋಟಿ (ಇದರಲ್ಲಿ ರೂ. 2298.20 ಕೋಟಿ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ರೂ.822.26 ಕೋಟಿ ಇಂಧನ ಪಾವತಿ ಬಾಕಿ) 🔺 ತಮ್ಮ ಬಿ.ಜಿ.ಪಿ ಆಡಳಿತ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು, ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ. ಸಾರಿಗೆ ನೌಕರರ ಬಗ್ಗೆ ಈ ಅನುಕಂಪದ ಮಾತನ್ನು ಆಡಲು ನಿಮಗೆ ಯಾವ ನೈತಿಕತೆ ಇದೆ? #RamalingaReddy #KSRTC #BMTC #KKRTC #NWKRTC
ಶಕ್ತಿ ಯೋಜನೆಯ ಹೊರೆದಿಂದ ನಿಶ್ಯಕ್ತಗೊಂಡಿರುವ ರಾಜ್ಯದ ಸಾರಿಗೆ ನಿಗಮಗಳು ಇಂದು ಸಂಪೂರ್ಣ ಕುಸಿತದ ಅಂಚಿಗೆ ತಲುಪಿವೆ. ಮೇ 20ರಿಂದ ಮತ್ತೊಮ್ಮೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದು @INCKarnataka ಸರ್ಕಾರದ ದಿವಾಳಿತನದ ಆಡಳಿತಕ್ಕೆ ಜೀವಂತ ಸಾಕ್ಷಿ. ಶೇ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ನೌಕರರಿಗೆ, ಏಕಪಕ್ಷೀಯವಾಗಿ ಕೇವಲ 12.5% ಹೆಚ್ಚಳ ಘೋಷಿಸಿರುವುದು ನೌಕರರ ಹೋರಾಟಕ್ಕೆ ಮಾಡಿದ ಅವಮಾನ. ಕೇವಲ ಚುನಾವಣಾ ಲಾಭಕ್ಕಾಗಿ ಗ್ಯಾರೆಂಟಿಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ @siddaramaiah ಸರ್ಕಾರಕ್ಕೆ, ಈಗ ನೌಕರರ ಸಂಬಳಕ್ಕೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಚಿವ @RLR_BTM ಅವರು ನೌಕರರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ದಿವ್ಯ ಮೌನ ವಹಿಸಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥತೆಯ ಪರಾಕಾಷ್ಠೆ. ಸಾರಿಗೆ ನೌಕರರು ಪದೇ ಪದೇ ಬೀದಿಗಿಳಿದರೂ Dont Care ಎನ್ನದಿರುವ ಕಾಂಗ್ರೆಸ್ ಸರ್ಕಾರ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನ ಈಗಾಗಲೇ ಅನೇಕ ಸಲ ಪ್ರದರ್ಶನ ಮಾಡಿದೆ. ಈಗ ನೌಕರರ ಮುಷ್ಕರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಬುಡಮೇಲು ಆಗುತ್ತಿದ್ದರೂ ಕ್ಯಾರೆ ಅನ್ನದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು ನೌಕರರನ್ನು ಕೆರಳಿಸುತ್ತಿರುವುದು ಕನ್ನಡಿಗರ ದುರಂತ.
7
12
42
3,943
ನಮ್ಮ ಕನ್ನಡ ನಾಡಿಗೆ ಭೇಟಿ ನೀಡಿದ ಮಾನ್ಯ ಪ್ರಧಾನಮಂತ್ರಿ @narendramodi ಯವರು, ಕಳೆದ 12 ವರ್ಷಗಳಲ್ಲಿ ತಮ್ಮ ಆಡಳಿತದಿಂದ 6.5 ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವ ಬದಲು, ಕೇವಲ "ಕುರ್ಚಿ" ರಾಜಕಾರಣದ ಬಗ್ಗೆ ಮಾತನಾಡಿರುವುದು ದುರದೃಷ್ಟಕರ. ನಮ್ಮ ಆಂತರಿಕ ಪ್ರಜಾಪ್ರಭುತ್ವವನ್ನು ಪ್ರಧಾನಿಗಳು ಟೀಕಿಸುವ ಮೊದಲು ಕನ್ನಡಿಗರು ಕೇಳುತ್ತಿರುವ ಪ್ರಶ್ನೆ ಇದು: 🔺ಭಾರತದ 2ನೇ ಅತಿದೊಡ್ಡ ಜಿಎಸ್‌ಟಿ (GST) ಪಾವತಿದಾರ ರಾಜ್ಯವಾದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿದ್ದೇನು? 📉 ತೆರಿಗೆ ಹಂಚಿಕೆಯಲ್ಲಿ ಅನ್ಯಾಯ: ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಆಗಿದ್ದುಕೊಂಡು 2025-26ರಲ್ಲಿ ₹1.58 ಲಕ್ಷ ಕೋಟಿಗೂ ಹೆಚ್ಚು ಜಿಎಸ್‌ಟಿ ಒಳಗೊಂಡಂತೆ ಒಟ್ಟು ₹4.5 ಲಕ್ಷ ಕೋಟಿ ವಿವಿಧ ರೂಪದಲ್ಲಿ ತೆರಿಗೆ ಸಂಗ್ರಹಿಸಿದೆ. ಆದರೆ ಕೇಂದ್ರದಿಂದ ನಮಗೆ ಮರಳಿ ಬರುತ್ತಿರುವುದು ಕೇವಲ ಬಿಡಿಗಾಸು. 🔺ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ 100 ರೂಪಾಯಿಯಲ್ಲಿ ನಮಗೆ ಮರಳಿ ಸಿಗುತ್ತಿರುವುದು ₹13ಕ್ಕಿಂತ ಕಡಿಮೆ. ನಮ್ಮ ಶ್ರಮದ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ? 🔺 12 ವರ್ಷಗಳ ಸುಳ್ಳು ಭರವಸೆಗಳು ಮತ್ತು ಬಾಕಿ ಉಳಿದಿರುವ ಯೋಜನೆಗಳು : 2014 ರಿಂದ, ಕರ್ನಾಟಕದ ಜನತೆಯ ಜೀವನಾಡಿ ಯೋಜನೆಗಳು ದೆಹಲಿಯಲ್ಲಿ ಧೂಳು ಹಿಡಿಯುತ್ತಿವೆ. 🔺 ಕರ್ನಾಟಕದಿಂದ ದಾಖಲೆ ಸಂಖ್ಯೆಯ ಬಿಜೆಪಿ ಸಂಸದರನ್ನು ಕಳುಹಿಸಿದರೂ ನಮಗೆ ಸಿಕ್ಕಿದ್ದು ಶೂನ್ಯ. 🔺 ಮೇಕೆದಾಟು ಯೋಜನೆ: ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಈ ಯೋಜನೆಗೆ ವರ್ಷಗಳಿಂದ ಪರಿಸರ ಅನುಮತಿ ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ. 🔺ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ಘೋಷಿಸಿ "ರಾಷ್ಟ್ರೀಯ ಯೋಜನೆ" ಎಂದು ಬೆನ್ನು ತಟ್ಟಿಕೊಂಡಿದ್ದ ಕೇಂದ್ರ ಸರ್ಕಾರ, ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. 🔺 ಮಹದಾಯಿ (ಕಳಸಾ-ಬಂಡೂರಿ): ಗೆಜೆಟ್ ನೋಟಿಫಿಕೇಶನ್ ಮತ್ತು ಅರಣ್ಯ ಅನುಮತಿ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. 🔺 ಬೆಂಗಳೂರು ಸಬ್ ಅರ್ಬನ್ ರೈಲು: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಈ ಯೋಜನೆಗೆ ನಿರಂತರವಾಗಿ ಅನುದಾನದ ಕೊರತೆ ಎದುರಾಗುತ್ತಿದೆ. 🔺 ಕೃಷಿ ಮತ್ತು ಬರ / ಪ್ರವಾಹ ಪರಿಹಾರ: ನಮ್ಮ ರೈತರು ಸಂಕಷ್ಟದಲ್ಲಿದ್ದಾಗ ಮಲತಾಯಿ ಧೋರಣೆ ತೋರಿದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು. ಕರ್ನಾಟಕವು ಇತ್ತೀಚೆಗೆ ಭೀಕರ ಬರಗಾಲ ಎದುರಿಸಿದಾಗ ನಾವು ₹18,000 ಕೋಟಿಗೂ ಅಧಿಕ ಎನ್‌ಡಿಆರ್‌ಎಫ್ (NDRF) ಪರಿಹಾರ ಕೋರಿದ್ದೆವು. ಆದರೆ ಸುಪ್ರೀಂ ಕೋರ್ಟ್ ಚೀಮಾರಿ ಹಾಕುವವರೆಗೂ ಕೇಂದ್ರವು ಪರಿಹಾರ ಬಿಡುಗಡೆ ಮಾಡಲಿಲ್ಲ. 🔺 ಅನ್ನಭಾಗ್ಯಕ್ಕೆ ಅಡ್ಡಿ: ನಾವು ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ, ಕೇಂದ್ರ ಸರ್ಕಾರವು ಎಫ್‌ಸಿಐ (FCI) ಮೂಲಕ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡದಂತೆ ತಡೆಹಿಡಿದು ಬಡವರ ಹೊಟ್ಟೆ ಮೇಲೆ ಹೊಡೆಯಿತು. 🔺 ನನೆಗುದಿಗೆ ಬಿದ್ದ ಮೂಲಸೌಕರ್ಯ ಯೋಜನೆಗಳು: 🔺 ರಾಯಚೂರಿನಲ್ಲಿ ಘೋಷಿತ AIIMS (ಏಮ್ಸ್) ಆಸ್ಪತ್ರೆ ಎಲ್ಲಿದೆ? 🔺 ರಾಜ್ಯ ಸರ್ಕಾರ ಸುಮಾರು 1,100 ಎಕರೆ ಭೂಮಿ ನೀಡಿದರೂ ರೈಲ್ವೆ ಕೋಚ್ ಕಾರ್ಖಾನೆ ಏಕಾಗಲಿಲ್ಲ? 🔺ಚುನಾವಣೆ ನಡೆಯುವ ರಾಜ್ಯಗಳಿಗೆ ನೀಡುವ ಆದ್ಯತೆ ನಮ್ಮ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಏಕೆ ಸಿಗುತ್ತಿಲ್ಲ? ಪ್ರಧಾನಮಂತ್ರಿಯವರೇ, ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ. ಆದರೆ ಕರ್ನಾಟಕದ ಬಗ್ಗೆ ನಿಮ್ಮ 'ಉದ್ದೇಶ' ಮಾತ್ರ ಅಲುಗಾಡುತ್ತಿದೆ. ಕೇವಲ ಭಾಷಣ ಮಾಡಲು ಬೆಂಗಳೂರಿಗೆ ಬಂದರೆ ಉಪಯೋಗವಿಲ್ಲ; ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನ ಮತ್ತು ಯೋಜನೆಗಳ ಅನುಮತಿಯೊಂದಿಗೆ ಬಂದರೆ ಸ್ವಾಗತಿಸುತ್ತೇವೆ. #RamalingaReddy #NarendraModi #Karnataka #Siddaramaiah #DKShivakumar #ನಮ್ಮತೆರಿಗೆನಮ್ಮಹಕ್ಕು #ಕನ್ನಡಸ್ವಾಭಿಮಾನ #ಕನ್ನಡಿಗರಪ್ರಶ್ನೆ
2
2
15
1,366
My best wishes to Sri @actorvijay as he takes charge as the Chief Minister of Tamil Nadu. May your leadership bring prosperity and new milestones of development to the state. Wishing you the very best in this new chapter of public service. #TamilNaduCM #Vijay #RahulGandhi #RamalingaReddy @RahulGandhi
2
5
33
1,033
ಆತ್ಮೀಯರಾದ ಸಚಿವ ಶ್ರೀ ಡಿ. ಸುಧಾಕರ್ ಅವರು ಇಂದು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ. ಜನಸಾಮಾನ್ಯರ ಧ್ವನಿಯಾಗಿ ಅವರು ಸಲ್ಲಿಸಿದ ಸೇವೆ ಎಂದಿಗೂ ಸ್ಮರಣೀಯ. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ಮತ್ತು ನಾಡಿಗೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರು, ಅಭಿಮಾನಿಗಳು ಮತ್ತು ಅಪಾರ ಕಾರ್ಯಕರ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #DSudhakar #RamalingaReddy
2
1
5
661
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾದ ಸಮರ್ಥ್ ಮಲ್ಲಿಕಾರ್ಜುನ್ ಅವರು ನನ್ನನು ಭೇಟಿಯಾದ ಕ್ಷಣ. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತಾ, ದಿ|| ಶ್ರೀ ಶಾಮನೂರು ಶಿವಶಂಕರಪ್ಪನವರು ಹಾಕಿಕೊಟ್ಟ ಜನಪರ ಸೇವೆಯ ಹಾದಿಯಲ್ಲಿ ಮುನ್ನಡೆದು, ಸಮಾಜದ ಏಳಿಗೆಗಾಗಿ ಶ್ರಮಿಸಲಿ ಎಂದು ಆಶಿಸಿದೆನು. ದಾವಣಗೆರೆ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಈ ಸಂದರ್ಭದಲ್ಲಿ ಹಾಜರಿದ್ದರು. #Davangere #RamalingaReddy #SamarthMallikarjun @DrPrabhaSSM
5
2
36
950
ಬಾಗಲಕೋಟೆಯ ನೂತನ ಶಾಸಕರಾದ ಶ್ರೀ ಉಮೇಶ್ ಮೇಟಿ ಅವರು ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ತಮ್ಮ ಕ್ಷೇತ್ರದ ಜನರ ಏಳಿಗೆಗಾಗಿ ಅವರು ಉತ್ತಮ ಸೇವೆಯನ್ನು ಸಲ್ಲಿಸಲಿ ಎಂದು ಈ ಸಂದರ್ಭದಲ್ಲಿ ಅವರಿಗೆ ಹಾರೈಸಿ, ಶುಭ ಕೋರಿದೆ. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು. #RamalingaReddy #Bagalkot #UmeshMeti #Congress
2
2
56
2,008
Remembering the architect of modern Karnataka and our first Chief Minister, Sri K.C. Reddy, on his birth anniversary. His vision for a democratic and progressive state continues to inspire us today. #KCReddy #Karnataka #RamalingaReddy
2
3
15
769
ಆನೇಕಲ್ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ಕಚೇರಿ ಮತ್ತು ಜಪ್ತಿ ಮಾಡಿದ ವಾಹನಗಳ ನಿಲುಗಡೆ ಸ್ಥಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು. ಈ ಭಾಗದ ನಾಗರಿಕರಿಗೆ ಸಾರಿಗೆ ಇಲಾಖೆಯ ಸೇವೆಗಳು ಇನ್ನು ಮುಂದೆ ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗಲಿವೆ. ಆನೇಕಲ್ ಶಾಸಕರಾದ ಶ್ರೀ ಬಿ. ಶಿವಣ್ಣ ಅವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಮ್ಮ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. #RamalingaReddy #Anekal #Chandapura #RTO #Development #Karnataka
3
20
1,768
ನಮ್ಮ ಬೆಂಗಳೂರಿನ ಅತ್ಯಂತ ಕಾರ್ಯನಿರತ ಜಂಕ್ಷನ್‌ಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್‌ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ (ಎಚ್‌ಎಸ್‌ಆರ್ ಲೇಔಟ್ ರ‍್ಯಾಂಪ್) ನಿಂದ ರಾಗಿಗುಡ್ಡ ಜಂಕ್ಷನ್ ವರೆಗಿನ 5.12 ಕಿಮೀ ಉದ್ದದ ‘ಡಬಲ್ ಡೆಕ್ಕರ್ ರೈಲ್-ಕಮ್-ರೋಡ್’ ಫ್ಲೈಓವರ್‌ನ್ನು (ಭಾಗ 2) ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. ಈ ಐತಿಹಾಸಿಕ ಕ್ಷಣಕ್ಕೆ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್, ಮಾಜಿ ಶಾಸಕಿ ಶ್ರೀಮತಿ ಸೌಮ್ಯ ರೆಡ್ಡಿ, ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಮಾಜಿ ಮಹಾಪೌರರಾದ ಶ್ರೀ ಬಿ.ಎನ್. ಮಂಜುನಾಥ ರೆಡ್ಡಿ, ಶ್ರೀ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ಹಲವು ಪ್ರಮುಖರು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಸಾಕ್ಷಿಯಾದರು. #Silkboard #RamalingaReddy #DoubleDeckerFlyover #BTMLayout #Bengaluru #HSRLayout
7
6
116
6,407