ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನದ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ನಂತರ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಪೂಜ್ಯ ಬಂತೆ ಮಾತೆ ಗೌತಮಿ ಅವರ ದಿವ್ಯಾಸಾನಿಧ್ಯ ಪಾಲ್ಗೊಂಡು, ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿ ಮಾತನಾಡಿ.
ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಸ್ವಾಭಿಮಾನದ ಕುರಿತಾದ ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದ್ದು, ಅವರ ಚಿಂತನೆಗಳು ಸದಾ ಸಮಾಜಕ್ಕೆ ದಾರಿದೀಪವಾಗಿವೆ, ಬಾಬಾಸಾಹೇಬರು ಕಟ್ಟಿಕೊಟ್ಟ ಸಂವಿಧಾನದ ಮೌಲ್ಯಗಳನ್ನು ಕಾಪಾಡುತ್ತಾ, ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ. ಮಾನ್ಯ ಮುಖ್ಯಮಂತ್ರಿಗಳು ಹೇಳುವಂತೆ, ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಅವಕಾಶವನ್ನು ಮಾತ್ರ ಕೊಡುತ್ತಾನೆ. ಅದೇ ರೀತಿ, ನೀವು ಜನದೇವತೆಗಳು ನನಗೆ ಸೇವೆ ಮಾಡುವ ಅಮೂಲ್ಯವಾದ ಅವಕಾಶವನ್ನು ನೀಡಿದೀರ. ನಿಮ್ಮ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದೆ.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಮಾಜಿ ಮಹಾಪೌರರಾದ ಪುರುಷೋತ್ತಮ್ ರವರು, ಎಸ್. ಮಹದೇವಯ್ಯ ರವರು, ಮುಖ್ಯ ಭಾಷಣಕರರಾದ ದೀಪಕ್ ರವರು, ಚುಂಚನಹಳ್ಳಿ ಮಲ್ಲೇಶ್ ರವರು, ಮಲ್ಕುಡಿ ಮಹದೇವಸ್ವಾಮಿ ರವರು, ಮಲ್ಲಹಳ್ಳಿ ನಾರಾಯಣ ರವರು, ಮನಿಯಾಯ್ಯ ರವರು, ಪುಟ್ಟಸ್ವಾಮಿ ರವರು, ಜೈರಾಮ್ ರವರು, ಉಪ್ಪಿನಹಳ್ಳಿ ಶಿವಣ್ಣ ರವರು, ಗೋಪಾಲ್ ರವರು, ಕಳಲೆ ರಾಜೇಶ್ ರವರು, ತ್ರಿಣೇಶ್ ರವರು, PDO ಮಹೇಶ್ ರವರು, ಬಸವರಾಜ್ ರವರು, ಹಲ್ಲರೆ ಮಹದೇವಯ್ಯ ರವರು, ಪುಟ್ಟಸ್ವಾಮಿ ರವರು, ರೇವಣ್ಣ ರವರು, ಹಿರಣ್ಣ ರವರು, ಮಲ್ಲಯ್ಯ ರವರು, ಸುಕನ್ಯಾ ರವರು, ಬಿಂದುಶ್ರೀ ರವರು ಸೇರಿದಂತೆ ಡಾ. ಬಿ. ಆರ್ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಗ್ರಾಮಸ್ಥರು ಹಾಜರಿದ್ದರು.
#DrBRAmbedkarStatue #AmbedkarJayanti #DarshanDhruvanarayana #Hallare