ಅಗತ್ಯವಿದ್ದಾಗ ಮಾತ್ರ ಹಾರ್ನ್ ಬಳಸಿ.
ಅನಗತ್ಯ ಹಾರ್ನ್ ಶಬ್ದವು ಒತ್ತಡವನ್ನು ಹೆಚ್ಚಿಸುತ್ತದೆ, ಸುರಕ್ಷತೆಯನ್ನು ಅಲ್ಲ.
ಶಾಂತ ಚಾಲನೆ, ಸುರಕ್ಷಿತ ಪ್ರಯಾಣ.
ಕಡಿಮೆ ಹಾರ್ನ್ – ಹೆಚ್ಚು ಜವಾಬ್ದಾರಿ.
🚦ಅಪಘಾತವು ಒಂದು ಕ್ಷಣ ಮಾತ್ರದಲ್ಲಿ ಆಗುತ್ತದೆ. ಆದರೆ ಅದರ ನೋವು ಜೀವಮಾನವಿಡೀ ಇರುತ್ತದೆ. ರಸ್ತೆಯ ಮೇಲೆ ಓಡಾಡುವಾಗ ಮೊಬೈಲ್ ಬಳಕೆ ಮಾಡಬೇಡಿ ಎಚ್ಚರಿಕೆಯಿಂದ ಪಾದಚಾರಿ ಮಾರ್ಗದಲ್ಲಿ ಸಂಚರಿಸಿರಿ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ🚦
ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ!
ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್‌ಗಳಿಗಲ್ಲ.
Think wheeling earns applause? It earns action.
Our cameras are watching, our teams are tracking, and violators are being booked.
Roads are for safe riding, not dangerous stunts.
#BengaluruTrafficPolice#RoadSafety#NoToWheeling
🚦ಸಿಗ್ನಲ್ ಜಂಪ್ ಮಾಡುವುದರಿಂದ ಕೆಲವು ಕ್ಷಣಗಳು ಉಳಿಯಬಹುದು...
ಆದರೆ ಒಂದು ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ.
ಕೆವಲ 2 ಸೆಕೆಂಡ್‌ಗಳ ತಾಳ್ಮೆ ಇರಲಿ,
ಸುರಕ್ಷಿತವಾಗಿ ಮನೆ ಸೇರಿ. 🏠
"ಕೇವಲ ಒಂದು ಮೆಸೇಜ್..."
ಅಷ್ಟೇ ಸಾಕು, ಸಿಗ್ನಲ್ ಮಿಸ್ ಆಗಲು, ರಸ್ತೆ ದಾಟುವವರು ಕಣ್ಣಿಗೆ ಬೀಳದಿರಲು ಅಥವಾ ಇಡೀ ಜೀವನವೇ ಬದಲಾಗುವಂತಹ ಅಪಘಾತ ಸಂಭವಿಸಲು.
ಯಾವೊಂದು ಕರೆಯಾಗಲಿ, ಮೆಸೇಜ್ ಆಗಲಿ ಅಥವಾ ನೋಟಿಫಿಕೇಶನ್ ಆಗಲಿ ನಿಮ್ಮ ಜೀವಕ್ಕಿಂತ ಮುಖ್ಯವಲ್ಲ.
ನಿಮ್ಮ ಕಣ್ಣು ರಸ್ತೆಯ ಮೇಲಿರಲಿ, ನಿಮ್ಮ ಕೈಗಳು ಸ್ಟೇರಿಂಗ್ ಮೇಲಿರಲಿ.
"Just one message..."
That's all it takes to miss a signal, a pedestrian, or a life-changing moment.
No call. No text. No notification is worth a crash.
Keep your eyes on the road and your hands on the wheel.
#DontUsePhoneWhileDriving#RoadSafety#BengaluruCityPolice#SafeBengaluru
ಈ ದಿನ @ecitytrfps ಠಾಣಾ ವ್ಯಾಪ್ತಿಯ ರಾಯಸಂದ್ರ ಸರ್ಕಲ್ ಹತ್ತಿರ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದ್ದು, ಸದರಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ನಡೆದ ಸ್ಥಳದ ಪರಿಶೀಲನೆ ನಡೆಸಲಾಯಿತು.ಅತಿ ವೇಗ ಹಾಗೂ ಅಜಾಗರೂಕ ಚಾಲನೆ ಮಾಡಬೇಡಿ; ನಿಮ್ಮ ಸುರಕ್ಷತೆ ಮತ್ತು ಇತರರ ಜೀವದ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
ಸೀಟ್‌ಬೆಲ್ಟ್ ಧರಿಸಲು ಕೇವಲ 2 ಸೆಕೆಂಡ್ ಸಾಕು, ಆದರೆ ಅದು ಒಂದು ಇಡೀ ಜೀವನವನ್ನೇ ಉಳಿಸಬಲ್ಲದು. ಅವಘಡ ಸಂಭವಿಸುವವರೆಗೆ ಕಾಯಬೇಡಿ, ಸೀಟ್‌ಬೆಲ್ಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರತಿ ಪ್ರಯಾಣದಲ್ಲೂ, ಪ್ರತಿ ಸೀಟಿನಲ್ಲೂ, ಪ್ರತಿ ಬಾರಿಯೂ ಸೀಟ್‌ಬೆಲ್ಟ್ ಅನ್ನು ಧರಿಸಿ
A seatbelt takes just 2 seconds to wear, but it can save a lifetime.
Don't wait for a close call to make it a habit. Buckle up every trip, every seat, every time.
#WearYourSeatbelt#RoadSafety#BuckleUp#BengaluruTrafficPolice
ಸೈಲೆಂಟ್ ವಯಲೇಷನ್ | ಸಂಚಿಕೆ 1
ನಂಬರ್ ಪ್ಲೇಟ್ ಎಂಬುದು ಫ್ಯಾಷನ್ ಸ್ಟೇಟ್‌ಮೆಂಟ್ ಅಲ್ಲ.
ಫ್ಯಾನ್ಸಿ ಫಾಂಟ್‌ಗಳು, ಅಡಗಿರುವ ಅಂಕಿಗಳು, ಸ್ಟಿಕ್ಕರ್‌ಗಳು ಮತ್ತು ಮಾರ್ಪಡಿಸಿದ ನಂಬರ್ ಪ್ಲೇಟ್‌ಗಳು ನಿಮಗೇನೋ ಸರಳವಾಗಿ ಕಾಣಿಸಬಹುದು. ಆದರೆ, ತುರ್ತು ಸಂದರ್ಭಗಳಲ್ಲಿ ವಾಹನವನ್ನು ಗುರುತಿಸುವುದನ್ನು ಇವು ಅತ್ಯಂತ ಕಷ್ಟಕರವಾಗಿಸುತ್ತವೆ.
ನಿಮ್ಮ ವಾಹನದ ನಂಬರ್ ಪ್ಲೇಟ್ ನಿಯಮಾನುಸಾರ ಮತ್ತು ಕಾನೂನುಬದ್ಧವಾಗಿರಲಿ.
SILENT VIOLATION | EPISODE 1
A number plate is not a fashion statement.
Fancy fonts, hidden digits, stickers, and modified plates may seem harmless—but they make vehicle identification difficult when it matters most.
Keep it standard. Keep it legal.
#SilentViolation#NumberPlate#RoadSafety#BengaluruTrafficPolice#SafeBengaluru
ದೋಷಪೂರಿತ ಸೈಲೆನ್ಸರ್ ಕೇವಲ ಶಬ್ದವನ್ನಷ್ಟೇ ಉಂಟುಮಾಡುವುದಿಲ್ಲ, ಅದು ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಾಯವನ್ನೂ ಉಂಟುಮಾಡುತ್ತದೆ. ಅತಿಯಾದ ಶಬ್ದ ಮಾಲಿನ್ಯವು ಜನರ ಆರೋಗ್ಯ ಮತ್ತು ನೆಮ್ಮದಿಗೆ ಹಾನಿಕಾರಕವಾಗಿದೆ.
ನಿಮ್ಮ ವಾಹನವನ್ನು ಸರಿಯಾಗಿ ನಿರ್ವಹಿಸಿ. ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಾಲಕರಾಗಿರಿ.