ಅಭಿವೃದ್ಧಿ, ಜನರ ವಿಶ್ವಾಸ ಮತ್ತು ಜನ ಕಲ್ಯಾಣದ ನಿಟ್ಟಿನಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ
@narendramodi ಜೀ ಸರ್ಕಾರದ ಸಾಧನೆಗಳು ಸಮಾಜದ ಕಟ್ಟಕಡೆಯ ನಾಗರಿಕರನ್ನು ಕೂಡ ತಲುಪಿದ್ದು, ಅವರನ್ನು ಮುಖ್ಯವಾಹಿನಿಯಲ್ಲಿ ಜೊತೆಗೂಡಿಸಿ, ಅವರ ಜೀವನವನ್ನೂ ಕೂಡ ಸುಧಾರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿಕಸಿತ ಭಾರತ ನಿರ್ಮಾಣದ ದೃಢ ಸಂಕಲ್ಪದೊಂದಿಗೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಪ್ರಧಾನಿ ಮೋದಿ ಜೀ ಅವರ ನೇತೃತ್ವದ NDA ಸರ್ಕಾರದ 12 ವರ್ಷಗಳ ಜನಸೇವೆಯ ಸಾರ್ಥಕ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಇಡೀ ದೇಶಾದ್ಯಂತ ಪಕ್ಷದ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಇಂದು, ನಮ್ಮೆಲ್ಲರ ಹಿರಿಯ ನಾಯಕಿ, ಮೋದಿ ಜೀ ಸರ್ಕಾರದ ಹಿರಿಯ ಸಚಿವೆ, ದಾಖಲೆಯ 9 ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ಶ್ರೀಮತಿ
@nsitharaman ಅವರೊಂದಿಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಶ್ರಮದಾನ ಹಾಗೂ ನಂತರ ಸಸಿ ನೆಡುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ
@NswamyChalavadi , ಸಂಸತ್ ಸದಸ್ಯ ಶ್ರೀ
@PCMohanMP , ಬೆಂಗಳೂರು ಕೇಂದ್ರದ ಜಿಲ್ಲಾಧ್ಯಕ್ಷ ಶ್ರೀ ಸಪ್ತಗಿರಿಗೌಡ ಸೇರಿದಂತೆ ಹಲವಾರು ಪ್ರಮುಖರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಉತ್ಸಾಹಿ ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡಿದ್ದರು.
#TreePlantation #CleanlinessDrive #SwacchataAbhiyan #12YearsOfSeva