🚨📱ನಕಲಿ “ಸೀಮಿತ ಅವಧಿಯ ವಿಶೇಷ ಮಾರಾಟ” ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ!
ವಂಚಕರು WhatsApp, Telegram, Facebook ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫ್ಲ್ಯಾಶ್ ಸೇಲ್ ಗುಂಪುಗಳನ್ನು ರಚಿಸಿ, ಜನಪ್ರಿಯ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು ಭಾರೀ ರಿಯಾಯಿತಿ ದರದಲ್ಲಿ ಲಭ್ಯವಿವೆ ಎಂದು ನಂಬಿಸುತ್ತಾರೆ.
⚠️ ಸಾಮಾನ್ಯ ವಂಚನೆ ಸಂದೇಶ:
📢 “ಹೊಸ ಸ್ಮಾರ್ಟ್‌ಫೋನ್ ಸ್ಟಾಕ್ ಬಂದಿದೆ! ಸೀಮಿತ ಸಂಖ್ಯೆಯ ಫೋನ್‌ಗಳು ಮಾತ್ರ ಲಭ್ಯ. ನಿಮ್ಮ ಫೋನ್ ಬುಕ್ ಮಾಡಲು ಈಗಲೇ ಹಣ ಪಾವತಿಸಿ.”
ವಂಚಕರು ವೈಯಕ್ತಿಕUPI ಖಾತೆಗಳಿಗೆ ಹಣ ಪಾವತಿಸಲು ಹೇಳುತ್ತಾರೆ. ಹಣ ಕಳುಹಿಸಿದ ಬಳಿಕ ಅವರು ಸಂಪರ್ಕ ಕಡಿದುಕೊಳ್ಳುತ್ತಾರೆ. ಫೋನ್ ಕೂಡ ಸಿಗುವುದಿಲ್ಲ, ಹಣವೂ ಮರುಪಾವತಿಯಾಗುವುದಿಲ್ಲ.
💡 ಸುರಕ್ಷಿತವಾಗಿರಿ:
✅ ಪರಿಶೀಲಿಸಿದ ಮತ್ತು ವಿಶ್ವಾಸಾರ್ಹ ಇ-ಕಾಮರ್ಸ್ ತಾಣಗಳು ಅಥವಾ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಿ.
✅ ಅತಿಯಾದ ರಿಯಾಯಿತಿ ಅಥವಾ “ಸೀಮಿತ ಅವಧಿಯ ವಿಶೇಷ ಆಫರ್” ಎಂಬ ಆಮಿಷಗಳಿಗೆ ಬಲಿಯಾಗಬೇಡಿ.
🔐 ಹಣ ಪಾವತಿಸುವ ಮೊದಲು ಯೋಚಿಸಿ. ಖರೀದಿಸುವ ಮೊದಲು ಪರಿಶೀಲಿಸಿ.
@DgpKarnataka @BlrCityPolice @jt_cpeastbcp