ಮಾನ್ಯ
@DrParameshwara ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಯನ್ನು
@INCKarnataka ಸರ್ಕಾರ ಇನ್ನಷ್ಟು ವಿಳಂಬ ಮಾಡದೆ ಕೂಡಲೇ
@KEA_karnataka ದ ಮೂಲಕ ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು.
ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಹಲವು ವರ್ಷಗಳಿಂದ ಈ ನೇಮಕಾತಿಗಾಗಿ ನಿರೀಕ್ಷೆಯಲ್ಲಿದ್ದು, ತಮ್ಮ ಅಮೂಲ್ಯ ಸಮಯವನ್ನು ತಯಾರಿಗೆ ಮೀಸಲಿಟ್ಟಿದ್ದಾರೆ ,
@SEOC_Karnataka ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಆಡಳಿತಾತ್ಮಕ ಅಗತ್ಯವೂ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಇದು ಅತ್ಯಂತ ಮುಖ್ಯವಾಗಿದೆ. ನೇಮಕಾತಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂಬ ಮಾಹಿತಿ ಇದ್ದರೂ ಅಧಿಸೂಚನೆ ಯಾಕೆ ವಿಳಂಬವಾಗುತ್ತಿದೆ ❓
@INCKarnataka ಸರ್ಕಾರ ಹಾಗೂ ಕಂದಾಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ವಿಳಂಬವಿಲ್ಲದೆ
@VAO ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ನ್ಯಾಯಸಮ್ಮತ ನಿರೀಕ್ಷೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (@KSVS) ಆಗ್ರಹಿಸುತ್ತದೆ.
@DrParameshwara ಕೂಡಲೇ
@500 VAO ಅಧಿಸೂಚನೆ ಹೊರಡಿಸಿ,
@krishnabgowda @DKShivakumar @Nishkama_Karma1 @CMofKarnataka @Sandeep98886864
@ITSCK47 @BJP4Karnataka @INCKarnataka @KARGOVTJOBUTS
@secretarykpsc @kanthakumarr @SEOC_Karnataka