@MBPatil Sir, where is ur promise of an INTERNATIONAL AIRPORT To NORTH KARNATAKA? You just said "you will write a letter to the Aviation minister" While for BENGALURU SECOND INTRL AIRPORT, You are personally running around to get it for KANAKAPURA ROAD.
Why the discrimination?
ಜೂನ್ 1ರಿಂದ ಬೀದರ್ ಗೆ, ಜೂನ್ 10ರಿಂದ ಕಲಬುರಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನಾರಂಭ!
ಕಲ್ಯಾಣ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನಾರಂಭಿಸಲಾಗುವುದು.
ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ- ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆ ಒದಗಿಸಲಿದ್ದು, ಈ ಸೇವೆಗೆ ಬೆಂಬಲವಾಗಿ ರಾಜ್ಯ ಸರ್ಕಾರವು ₹28.47 ಕೋಟಿ ಮೊತ್ತವನ್ನು ‘ವಯಬಿಲಿಟಿ ಗ್ಯಾಪ್ ಫಂಡಿಂಗ್’ ರೂಪದಲ್ಲಿ ನೀಡುತ್ತಿದೆ. ಎರಡೂ ಮಾರ್ಗಗಳ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಸಹ ಆರಂಭವಾಗಿದೆ.
ಕಲಬುರಗಿಯ ವಿಮಾನ ಸೇವೆ ನಷ್ಟದ ಕಾರಣದಿಂದ ಸ್ಥಗಿತಗೊಂಡಿದ್ದರೆ, ಬೀದರ್ ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನಿಂದ ಸೀಮಿತ ವಿಮಾನ ಸೇವೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಡಿ ಸರ್ಕಾರವು ವಿಮಾನ ಸೇವೆಯನ್ನು ಮತ್ತೊಮ್ಮೆ ಆರಂಭಿಸುತ್ತಿದೆ.
ಈ ನಿರ್ಧಾರವು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ವೇಗ ನೀಡಲಿದ್ದು, ಉದ್ಯಮ, ಹೂಡಿಕೆ ಮತ್ತು ಜನಸಂಪರ್ಕ ವೃದ್ಧಿಗೆ ಮಹತ್ವದ ಉತ್ತೇಜನವಾಗಲಿದೆ.