Weekend Read..
Global Financial Crisis,AI Bubble 👇👇
2008 Global Financial Crisis,AI Bubble,Michael Burry.
ಈತ ಅಮೇರಿಕಾದ ಪ್ರಸಿದ್ಧ ಹೂಡಿಕೆದಾರ.ಹೆಸರು Michael Burry.
2008 ರಲ್ಲಿ ಅಮೇರಿಕಾದ ಆರ್ಥಿಕತೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತು.
2008 ರಲ್ಲಿ ಅಮೇರಿಕದಲ್ಲಿ ಅನೇಕ ಜನರು ಹೊಸ ಹೊಸ ಮನೆಗಳನ್ನು ಕಟ್ಟಿದರು.ಅದು ಬ್ಯಾಂಕ್ ಗಳ ಮೂಲಕ ಸಾಲ ಪಡೆದುಕೊಂಡು. ಅದು Housing ಕ್ಷೇತ್ರದ ಅತಿ ದೊಡ್ಡ Boom. 💥
ಇದರ ಜೊತೆಗೆ ಅಮೇರಿಕಾದ ಜನ ಆಗ ಸಾಲದಿಂದ ಕಟ್ಟಿರುವ ಮನೆಗಳ ಮೇಲೆ ಮತ್ತೆ ಸಾಲ ಮಾಡಿದ್ದರು.ಅಂದ್ರೆ ತಮ್ಮ ಮನೆಗಳನ್ನು ಅಡವಿಟ್ಟು ಅದರ ಮೇಲೆ ಸಾಲ ಪಡೆದಿದ್ದರು.
ಅಂದ್ರೆ ಸಾಲದ ಮೇಲೆ ಸಾಲ. ಇದು ಸಾವಿರಾರು ಕೋಟಿ ರೂಪಾಯಿಗಳ ಸಾಲ.ಇದನ್ನು ಅಲ್ಲಿನ ಜನ Default ಮಾಡಿದರು. ಈ ಕಾರಣದಿಂದ ಅಮೇರಿಕಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಅಲ್ಲೋಲ ಕಲ್ಲೋಲ ಆಯಿತು.
ಜೊತೆಗೆ ಅಮೆರಿಕದ ದೊಡ್ಡ ದೊಡ್ಡ ಬ್ಯಾಂಕ್ ಗಳು ಜನರು ಪಡೆದ ಸಾಲವನ್ನು Mortgage Securities ಅಂತಾ ಹೇಳಿ ಇವುಗಳನ್ನು ಮತ್ತೆ ಮಾರಾಟ ಮಾಡಿದರು.
Banks had created subprime mortgage-backed securities, risky products built on bad housing loans.
// ನೀವು ಕನ್ನಡದ ಎದ್ದೇಳು ಮಂಜುನಾಥ Film ನೋಡಿದ್ರೆ ಅದರಲ್ಲಿ ಒಂದು ಡೈಲಾಗ್ ಇದೆ.
ಸಾಲ ತೆಗೆದುಕೊಳ್ಳಲು ಹೋದ ಜಗ್ಗೇಶ್ ಅವರಿಗೆ ಏನಾದ್ರೂ Surity ಕೊಡಿ ಅಂತ ಬ್ಯಾಂಕ್ ನವರು ಕೇಳ್ತಾರೆ.ಆಗ ಹೇಳುವ ಒಂದು ಮಾತಿದೆ,Surtiy, ಗ್ಯಾರಂಟಿ ಕೊಡೋಕೆ ಇದ್ದ 3 ಗೆಳಯರು Self Suicide ಮಾಡಿಕೊಂಡರು ಅಂತ.😂
ಅಂದ್ರೆ ಅವನಿಗೆ ಇವನು Surity,ಇವನಿಗೆ ಅವನು Surity..ಇವರಿಬ್ಬರಿಗೆ ಮತ್ತೊಬ್ಬ surity. ಒಂದೇ ತಿಂಗಳಲ್ಲಿ 3 ಜನ ಗೆಳೆಯರು ಪ್ರಾಣ ಬಿಟ್ರು, ಹೆಂಗೆ ಸ್ವಾಮಿ ಜೀವ ತಡೆದುಕೊಳ್ಳೋದು ಅಂತ.//
2008 ಅಮೇರಿಕಾದಲ್ಲಿ ಆಗಿದ್ದು ಇದೇ.ಇರುವ ಸಾಲಕ್ಕೆ ಮತ್ತೆ ಸಾಲ. ಆ ಸಾಲದ ಮೇಲೆ ಮತ್ತೆ ಸಾಲ.
ಜಗತ್ತಿನ ಅತಿ ದೊಡ್ಡ ಪ್ರಸಿದ್ಧ Lehman Brothers ಹೆಸರಿನ ಬ್ಯಾಂಕ್ ಮುಚ್ಚಿ ಹೋಯಿತು.ಇದರ ಪ್ರಭಾವ ಜಗತ್ತಿನ ಎಲ್ಲ ರಾಷ್ಟ್ರಗಳ ಮೇಲೆ ಆಯಿತು. ನಮ್ಮ ಸ್ಟಾಕ್ ಮಾರ್ಕೆಟ್ ಕೂಡ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು.ಇದನ್ನೇ 2008 ರ Global Financial Crisis ಅಂತಾ ಕರೆಯುತ್ತಾರೆ.
In simple words,
✔️ The crisis happened in 2008 .
✔️ It began in the U.S. housing market.
✔️ People took loans on top of loans (home loans refinancing).
✔️ When borrowers couldn’t repay, they defaulted.
✔️ This led to a collapse of big financial institutions, including Lehman Brothers.
✔️ It spread worldwide, affecting stock markets globally.
✔️ It’s rightly called the Global Financial Crisis (GFC).
ಆ ಸಮಯದಲ್ಲಿ Michael Burry ‘Housing Market’ ಕುಸಿಯುತ್ತದೆ ಅಂದುಕೊಂಡು ಅದರ ವಿರುದ್ಧ (Short Selling ಮಾಡಿ) ದೊಡ್ಡ ಲಾಭ ಗಳಿಸಿದ.
He shorted (bet against) mortgage bonds using a credit default swap.
ಸಾವಿರಾರು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ.
ಈಗ ಈತ ಮತ್ತೊಮ್ಮೆ AI ಗೆ ಸಂಬಂಧಪಟ್ಟ ಷೇರುಗಳನ್ನು ಮಾರಾಟ ಮಾಡಿದ್ದಾನೆ. ಅದು Nvidia and Palantir ಕಂಪನಿಗಳ ಮೇಲೆ.ಆತನ ಒಟ್ಟು Portfolio ದ 80% ಹಣವನ್ನು ಈ ಎರಡು ಕಂಪನಿಗಳ ಮೇಲೆ ಹಾಕಿದ್ದಾನೆ. ಅಂದ್ರೆ ಈ ಕಂಪನಿಗಳನ್ನು Sell ಮಾಡಿದ್ದಾನೆ.ಇದನ್ನು Short Selling ಅಂತಾ ಕರೆಯುತ್ತಾರೆ.
ಒಟ್ಟು ಹಣ $1.1 billion.
ನಮ್ಮ ಭಾರತೀಯ ರುಪಾಯಿಯಲ್ಲಿ ₹9,700 Crores.
ಸದ್ಯದ ಮಟ್ಟಿಗೆ Nvidia and Palantir ಅತಿ ಹೆಚ್ಚು Valuations ಅಲ್ಲಿ Trade ಆಗ್ತಾ ಇವೆ. ಈತ ಹೇಳೋದು AI ಅನ್ನೋದು ಒಂದು Bubble.
ನಮ್ಮಲ್ಲಿ ಇರುವ Nifty 500 top ಕಂಪನಿಗಳ ತರ ಅಮೇರಿಕಾದಲ್ಲಿ S&P 500 ಇದೆ.
S&P 500 ಅತಿ ಗರಿಷ್ಠ ಮಟ್ಟದಲ್ಲಿ ಟ್ರೇಡ್ ಆಗ್ತಾ ಇದೆ.
S&P 500 ಇಂದ ಬಂದಿರುವ ಲಾಭದಲ್ಲಿ AI ಕಂಪನಿಗಳ ಪಾಲು 75% ಇದೆ.
ಒಟ್ಟಾರೆ ಜಾಗತಿಕವಾಗಿ AI ಮೇಲೆ ಖರ್ಚು ಮಾಡುತ್ತಿರುವ ಹಣ $200 billion. ಇದು 120% ಏರಿಕೆ ಕಂಡಿದೆ.ಸದ್ಯದ ಮಟ್ಟಿಗೆ ಅನೇಕ ದೊಡ್ಡ ದೊಡ್ಡ Fund Managers AI ಅನ್ನೋದು ಒಂದು ದೊಡ್ಡ Bubble ಅಂತಾ ಹೇಳ್ತಾ ಇದ್ದಾರೆ.
ಒಟ್ಟಿನಲ್ಲಿ ಒಂದು ಕುತೂಹಲಕಾರಿ ಕಾಲ ಘಟ್ಟದಲ್ಲಿ ನಾವು ಇದ್ದೇವೆ.
ಒಂದು ಕಡೆ Technolgy ಕ್ಷೇತ್ರದಲ್ಲಿ AI ಒಂದು ದೊಡ್ಡ Disruption ಉಂಟು ಮಾಡಿದೆ, ಜೊತೆಗೆ ಯಾವ ರೀತಿಯ ಬದಲಾವಣೆ ಆಗುತ್ತೆ, ಅದು ನಮ್ಮಂತಹ ಜನ ಸಾಮಾನ್ಯರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಅನ್ನೋದು ಕಾದು ನೋಡಬೇಕಿದೆ.
ಈಗ ನೀವು 2008 ರ Global Financial Crisis,Subprime mortgage Crisis,Short Selling, AI Bubble ಬಗ್ಗೆ ತಿಳಿದುಕೊಂಡಿರಿ.
ಇಂತಹ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ commemt,share ಮಾಡುವ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
Like, Share, Retweet ❤️ 💚